ಪುಟ:ಬೆಳಗಿದ ದೀಪಗಳು.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಸಂಪೂರ್ಣ-ಕಥೆಗಳು

ಹತ್ತಿತು. ಆದರೆ ಅವನಂಥ ದೇಶಾಭಿಮಾನಿಯಾದ ನೈಷ್ಠಿಕ ಕ್ಷತ್ರಿಯನಿಗೆ ಸುಖವು ಹೇಗೆ ಸೇರುವದು? ಚಿತೋಡಗಡವು ಇನ್ನೂ ಆವನ ಸ್ವಾಧೀನವಾಗಿದ್ದಿಲ್ಲ. ಪ್ರತಾಪಸಿಂಹನು ಉದೇಪುರದ ಎತ್ತರವಾದ ಪ್ರದೇಶದಲ್ಲಿ ನಿಂತು ಚಿದೊಡಗಡದ ಕೋಟೆಯ ಕಡೆಗೆ ನೋಡಲು ಆ ಕೋಟೆಯ ಗೋಡೆಗಳು ಅವನ ಕಣ್ಣುಗಳಲ್ಲಿ ಚುಚ್ಚಿದಂತಾಗುತ್ತಿದ್ದವು, ಯಾವ ಗಡದ ಸಂರಕ್ಷಣೆಗಾಗಿ ತನ್ನ ಪೂರ್ವಜರು ತಮ್ಮ ಮೈಯೊಳಗಿನ ರಕ್ತದ ಕಾಲಿನಗಳನ್ನು ಹರಿಸಿ ಪ್ರಾಣಿಗಳ ಆಹುತಿಗಳನ್ನು ಕೊಟ್ಟರೆ ಆ ಚಿತೋಡಗಡವು ಯಾವಾಗ್ಗೆ ತನ್ನ ಕೈವಶವಾಗುವದೆಂಬ ನಿದಿಧ್ಯಾಸವೇ ಅವನಿಗೆ ಅಹರ್ನಿಶವಾಗಿತ್ತು. ಕ್ಷಾತ್ರವ್ರತವನ್ನು ಕಾಯ್ದುಕೊಳ್ಳುವದಕ್ಕಾಗಿ ಈ ಸ್ವಾಭಿಮಾನಿಯಾದ ಪುರುಷನು ಎಷ್ಟೋ ಶ್ರಮಗಳನ್ನೂ ಸಾಹಸಗಳನ್ನೂ ಕಷ್ಟಗಳನ್ನೂ ಸಹಿಸಿ ತನ್ನ ಆಯುಷ್ಯದ ದಿವಸಗಳನ್ನು ಕಳೆದಿದ್ದನು. ಇದೆಲ್ಲದರ ಪರಿಣಾಮವು ಅವನ ಉಕ್ಕಿನಂಥ ಶರೀರದ ಮೇಲಾಗಿ ಅದು ದಿನೇ ದಿನೇ ಕ್ಷೀಣವಾಗ ಹತ್ತಿತು. ಅವನ ಪರಾಕ್ರಮಕ್ಕೆ ಮೆಚ್ಚಿ ರಾಜಸ್ಥಾನದ ವಿಜಯಲಕ್ಷ್ಮಿಯು ಅವನ ಕೊರಳಲ್ಲಿ ಮಾಲೆಯನ್ನು ಹಾಕಬೇಕೆನ್ನುವಷ್ಟರಲ್ಲಿಯೇ ಅವನು ಬೇನೆಬಿದ್ದು ನರಳಹತ್ತಿದನು. ಅಂತಕಾಲವು ಸವಿಾಪಿಸಿತು. ಪ್ರಾಣೋತ್ಕ್ರಮಣವಾಗಲೊಲ್ಲದು. ಅವನಿಗೆ ಚಿತೋಡದ ನಿದಿಧ್ಯಾಸವೇ, ಅವನ ಸುತ್ತಲೂ ನೆರೆದಿದ್ದ ಅವನ ಸ್ನೇಹಿತ ಸರದಾರರೂ ಅತ್ಯಂತ ಅಸ್ವಸ್ಥರಾದರು. ರಾಣಾನ ಈ ದುಃಸ್ಥಿತಿಯನ್ನು ನೋಡಿ ಸಾಳುಂಬ್ರಾದ ಠಾಕುರನು "ಯಾವ ಕಾರಣದ ಸಲುವಾಗಿ ನಿಮಗೆ ಇಂಥ ಕೇಶಗಳಾಗಹತ್ತಿವೆ ? ತಾವು ಸುಖದಿ೦ದಲೂ ಶಾ೦ತತೆಯಿಂದಲೂ ಯಾಕೆ ಪ್ರಯಾಣಮಾಡಿಲ್ಲಂ ? ”ಎಂಬದಾಗಿ ಕೇಳಿದನು. ಪ್ರತಾಪನು ತನ್ನ ಶಕ್ತಿಯನ್ನೆಲ್ಲ ಏಕೀಕಠಿಸಿ “ಚಿತೋಡದ ಕಡೆಗೆ ನೋಡಿರಿ. ನಾನಂತೂ ಈಗ ಹೋಗುತ್ತಲೇ ಇದ್ದೇನೆ. ನನ್ನ ಚಿರಂಜೀವನು ಹಾಗು ನೀವೆಲ್ಲ ಸರದಾರರು ಈ ಗುಡಿಸಿಲುಗಳಿದ್ದ ಸ್ಥಳದಲ್ಲಿ ವಿಶಾಲವಾದ ರಾಜಮಂದಿರಗಳನ್ನು ಕಟ್ಟಿಸಿ ಅವುಗಳಲ್ಲಿ ವಿಲಾಸದಿಂದ ಕಾಲವನ್ನು ಕಳೆಯುವಿರಿ. ಆದರೆ ಯಾವ ದೇಶದ ಸ್ವತಂತ್ರತೆಗಾಗಿ ನಾವೆಲ್ಲರೂ ಇಷ್ಟು ವರ್ಷಗಳ ವರೆಗೆ ಪ್ರಾಣಾಂತ್ಯ ಸಂಕಟಗಳನ್ನು ಸಹಿಸಿದೆವೋ ಹಾಗು ಪ್ರಸಂಗವಶಾತ್ ಪ್ರಾಣಗಳನ್ನಾದರೂ ಅರ್ಪಿಸಿದವೋ ಆ