ವಿಷಯಕ್ಕೆ ಹೋಗು

ಪುಟ:ಬೆಳಗಿದ ದೀಪಗಳು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಡೆಯಾಳು ಭೂಪಾಲ

ಕ್ರಿಯಾಸಿದ್ಧಿ: ಸತ್ವೇ ಭವತಿ ಮಹತಾಂ ನೋಪಕರಣೇ

ಹೊಳೆಯುವದೆಲ್ಲ ಒಳಿತಾದದ್ದೆಂದು ಹೇಳಲಾಗದಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣ್ಣಿಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು; ಕರಿಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಪಮವಾಗಿರುವದು. ಅದರಂತೆಯೇ ಮನುಷ್ಯರ ಗುಣಾವಗುಣಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು.

ಕನಕದ ಸಿಂಹಾಸನದೊಳ್ |
ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ ||
ಮನದಣಿಯೆ ಬೊಗಳ್ಳುದಲ್ಲದೆ |
ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ ||

ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ.

ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದುರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧ್ಯಾನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸವೆಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು. ಮೃಗಯಾಸಕ್ತರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ