ಪುಟ:ಬೆಳಗಿದ ದೀಪಗಳು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಡೆಯಾಳು ಭೂಪಾಲ

೯೫

ಪಾಲು ಮಾಡಿದ್ದು ನಾವು ಕೇಳಿದ ಮಾತು. ಕ್ರಿಸ್ತ ದಯಾನಿಧಿಯ ಅನುಯಾಯಿಗಳಾದ ಜರ್ಮನ್, ಆಸ್ಟ್ರಿಯನರು ಯುದ್ಧದ ನೆವದಿಂದ ಅಪರಿಮಿತ ಜನ ಬಡ ಪ್ರಾಣಿಗಳ ಜೀವಹಿಂಸೆ ಮಾಡಿದ್ದು ಕೇಳಿದರೆ ನಮ್ಮ ಜೀವ ಝುಲ್ಲೆನ್ನುತ್ತಲಿದೆ. ನಮ್ಮಲ್ಲಿಯ ಭಟನೋರ್ವನು ಸ್ವಸಂತೋಷದಿ೦ದಲೂ, ಉತ್ಸಾಹದಿಂದಲೂ ಓರಿಗೆಯವರಲ್ಲಿ ಅಹುದೆನ್ನಿಸಿಕೊಳ್ಳುವ ಉಬ್ಬಿನಿಂದಲೂ ಸ್ವಾಮಿಸೇವೆಯನ್ನು ಮಾಡುತ್ತಿರಲು, ಅವನನ್ನು ಯಜಮಾನನು ನಿರ್ದಯವಾಗಿ ನಡಿಸಿಕೊಳ್ಳುವನೆಂಬುವದು ತಪ್ಪಾದ ಮಾತೇ ಸರಿ. ಇಂಥ ಸೇವಾರತನನ್ನು ಒಡೆಯನು ತನ್ನ ಹೊಟ್ಟೆಯ ಮಗನಂತೆ ಪ್ರೀತಿಸಿ ಆವನೆ ಇಚ್ಛೆಯನ್ನು ಪೂರೈಸುವನು. ದೊರೆಯ ಕುದುರೆಯ ಮುಂದೆ ಹುಲಿಯ ಹಾಗೆ ಹಾರುತ್ತೆ ನನ್ನ ಮಗನು ಬಂದನೆಂದು ಆ ಸತ್ವಶಾಲಿಯ ಮಾತೆಯು ಗರ್ವದಿಂದ ನಗುತ್ತೆ ಅನ್ಯ ಸ್ತ್ರೀಯರ ಮುಂದೆ ಅವನ ಪ್ರಶಂಸೆ ಮಾಡುವಳು. ಅಳಿಯನಿದ್ದರೆ ಇಂಥವನೇ ಇರಬೇಕೆ೦ದು ಆ ಜಾತಿಯವರಾದ ಸ್ತ್ರೀಯರು (ಕನ್ನೆಯರ ತಾಯಂದಿರು) ಹೇಳುವರು, ಹುಡುಗನೆನ್ನ ಬೇಕು ಅವನಿಗೇ ಎಂದು ಅವನ ಓರಿಗೆಯ ಬಂಟರು ಕೊಂಡಾಡುವರು, ಹೀಗೆ ಜನರ ಸ್ತುತಿಗೆ ಪಾತ್ರನಾಗಿ ಆಸ್ಥೆಯಿಂದ ಕೆಲಸ ಮಾಡುತ್ತಿರುವವನು ಆ ಕೆಲಸವನ್ನು ಒತ್ತಾಯಕ್ಕೆ ಒಳಗಾಗಿ ಮಾಡುತ್ತಾ ನೆಂದು ಹೇಳುವವರು ನಮ್ಮ ನಾಡನಡಾವಳಿಗಳನ್ನು ಅರಿಯದೆ ಹೇಳುವರು ಇರಲಿ.

ಕೇರಳಾಧೀಶ್ವರನು ತನ್ನ ರಾಜ್ಯದಲ್ಲಿಯ ವ್ಯವಸ್ಥೆಯನ್ನು ಕಂಡುಕೊಂಡು ಬರಬೇಕೆಂದು ರಾಜಧಾನಿಯಿಂದ ಹೊರಟು ಬೇರೂರಿಗೆ ಹೋಗಿದನು. ಪುಂಡನಾದ ತನ್ನ ಕೊಡೆಯಾಳು ಓರ್ವನ ಮೈಗಾವಲಿಗೆ ಸಾಕೆಂದು ತಿಳಿದು ರಾಜನು ಅವನನ್ನೊಬ್ಬನನ್ನೇ ತನ್ನ ಸಂಗಡ ಕರಕೊಂಡು ತನ್ನ ಹಿರಿಯ ಕುದುರೆಯನ್ನೇರಿಕೊಂಡು ಹೋಗಿದ್ದನು. ಕುದುರೆಗೆ ಆ ಕೊಡೆಯಾಳು ಸಂಗದಲ್ಲಿದ್ದರೆಯೇ ಓಡಲಿಕ್ಕೆ ಹುರುಪು. ನನ್ನ ಎರಡು ಕಾಲುಗಳಲ್ಲಿದ್ದ ಚಾಪಲ್ಯವು ನಿನ್ನ ನಾಲ್ಕೂ ಕಾಲುಗಳಲ್ಲಿಲ್ಲ ಬಲ್ಲೆಯಾ ಕಡವನೆ, ನೀನೆಷ್ಟು ಓಡಿದರೂ ನನ್ನ ಹಿಂದೆಯೇ ಇರುವಿ ಎಂದು ಆ ಕೊಡೆಯಾಳು ಜಿದ್ದು ಕಟ್ಟಿ ಕುದುರೆಯ ಮುಂದೆ ಓಡುವಂತೆ ಕಾಣುತ್ತಿದ್ದನು. ಆ ಕುದುರೆ, ಆ ಕೊಡೆಯಾಳು, ಇಲ್ಲದಿದ್ದರೆ ರಾಜನಿಗೆ ಕುದುರೆಯ