ಪುಟ:ಬೆಳಗಿದ ದೀಪಗಳು.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ೦ಪೂರ್ಣಕಥೆಗಳು

ನರಗುಂದದ ಸಾವಿತ್ರಿ ಬಾಯಿಯು ಆಂಧ ಮಹಾಸತಿಯರ ಮಾಲಿಕೆಯಲ್ಲಿ ಕಂಗೊಳಿಸುವ ಅನರ್ಘವಾದ ರತ್ನವೇ ಆಗಿರುವಳು

ಸಾವಿತ್ರಿಬಾಯಿಯು ತೇಜಸ್ವಿನಿಯಾದ ಸು೦ದರಿಯ ಸುಟ್ಟು ತಮ್ಮ ವಾದ ಆಚರಣದವಳ ಪ್ರೇಮಲವಾದ ಅಂತಃಕರಣದವಳ ಉಬಾರಚರಿ ತಳೂ ಆದ ಮಾನಿನಿಯು, ಶ.ಚಿಸ್ಮಿತೆಯಾದ ಆ ಮೃದುಭಾಷಿಣಿಯು ಅತಿಥಿ ಅಭ್ಯಾಗತರಿಗೆ ಮಾಡುತ್ತಿರುವ ಆದರಾತಿಥ್ಯಗಳು ಇಮ್ಮಡಿಯಾಗಿ ಸುಖಪ್ರದ ವಾಗುತ್ತಿದ್ದವು. ಸೇವಕಜನ ಆಶ್ರಿತ ಮುಂತಾದವರ ಪರಿಪೋಷಣವನ್ನು ಮಾಡುವದರಲ್ಲಿ ಆ ಹಿತೈಷಿಣಿಯು ಯಾವಾಗಲೂ ದಕ್ಷಳಾಗಿರುತ್ತಿದ್ದಳು. ಸೊಬಗಿನ ಹೂವಿಳ್ಯ, ವಸಂತ ಪೂಜೆ, ಗೌರೀಪೂಜನ ಮುಂತಾದ ಮಹೋ ತೃವಗಳ ಮೂಲಕ ನರಗುಂದದ ನಾರೀವೃಂದದಲ್ಲಿ ಆನಂದ ವಿನೋದ ಸ್ನೇಹಾಭಿವೃದ್ದಿಗಳನ್ನು ಅವಳು ಹೆಚ್ಚಿಸುತ್ತಿದ್ದಳು. ಕಥೆ, ಕೀರ್ತನ, ಪುರಾಣ, ಪುಣ್ಯ ಕಥೆ ಮುಂತಾದ ಧರ್ಮಜಾಗ್ರತಿಯ ಕೃತ್ಯಗಳಾದರೂ ಆ ಸಾದ್ವಿಯ ಪ್ರೋತ್ಸಾಹನದಿಂದಲೇ ನಡೆಯುತ್ತಿದ್ದವು. ಶಾಸ್ಪೋಕ್ತ ವಾದ ವ್ರತ ಉದ ಸನ ಜಪತಪಾದಿಗಳನ್ನು ಆ ಪುಣ್ಯವಂತಿಯಾಜ ಮಹಾಸತಿಯು ಆಸಕ್ತಿ ಯಿಂದ ಮಾಡ ತಿರುವದರಿಂದ ಅವಳಲ್ಲಿ ಕ್ರಿಯಾಸಿದ್ದಿ ವಾಕ್ಸಿದ್ದಿಗಳು ಪ್ರಾಪ್ತವಾಗಿದ್ದವೆಂಬದನ್ನು ಆಗಿನವರು ಮನಗಂಡಿದ್ದರು. ಮೈದೊಳೆದು ಮಡಿಯಾಗಿ ಆ ಶುಚಿತ್ರ ತೆಯು ವೃಂದಾವನಕ್ಕೆ ಬಂದು ತುಲಸೀ ಪೂಜನ ವನ್ನು ಮಾಡಿ ಪ್ರದಕ್ಷಿಣೆ ಮಾಡುವಾಗ ಭೂತಬಾಧೆಯವರೂ ಹಾವು ಚೇಳು ಗಳನು ಕಡಿಸಿಕೊಂಡವರೂ ಹೊಟ್ಟೆ ಕಡತ ಮುಂತಾದ ಬೇನೆಯವರೂ ಅಲ್ಲಿಗೆ ಬಂದು ಅವಳು ಕೊಟ್ಟ ತೀರ್ಥವನ್ನು ಸೇವಿಸಿ ವಾಸಿಯಾಗುತ್ತಿದ್ದರು. "ನಿನಗೆ ಒಳಿತಾಗುವದು ” "ನಿನ್ನ ಇಚ್ಛೆ ಕೈಗೂಡುವದು" ಎಂದು ಆ ಪುಣ್ಯಶೀಲೆಯು ಯಾರಿಗಾದರೂ ಹೇಳಿದ್ದರೆ ಅದರಂತೆಯೇ ಆಗುತ್ತಿತ್ತೆಂದು ಜನರು ಹೇಳುತ್ತಾರೆ. ಅನಸೂಯೆ ಅರುಂಧತಿ ಲೋಪಾಮುದ್ರೆ ಸಾವಿತ್ರಿ ಮುಂತಾದ ಮಹಾ ಸತಿಯರು ಪೂರ್ವ ಕಾಲದಲ್ಲಿ ತೋರಿಸಿದ ಮಾಹಾತ್ಮ ಗಳು ಕಟ್ಟು ಕಥೆಯೆಂದು ಸದ್ದು ಣಗಳ ಪ್ರಭಾವಕ್ಕೆ ಪರಕೀಯರಾದ ಜನರು ಹೇಳುತ್ತಿರುವರು. ಅಂಥವರು ನರಗುಂದದ ಸಾವಿತ್ರೀದೇವಿಯು ನಿನ್ನ ವೆನ್ನಿನ ಪ್ರತ್ಯಕ್ಷವಾದ ಉದಾಹರಣವನ್ನು ಕಂಡು ಬುದ್ದಿ ಗಲಿಯಲಿ. ಇಂಥ