ಪುಟ:ಬೆಳಗಿದ ದೀಪಗಳು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನರಗುಂದದ ಸಾವಿತ್ರಿಬಾಯಿ

ಅತ್ಯುಚ್ಚವಾದ ಸುವ್ರತೆಯರು ನಿಮ್ಮ ಆರ್ಯಭೂಮಿಯಲ್ಲಿ ಮಾತ್ರ ಜನಿಸಿದ ರೆಂದೂ ಇನ್ನಾ ದರೂ ಜನಿಸಿದರೆ ಆರ್ಯ ಭೂಮಿಯಲ್ಲಿಯೇ ಜನಿಸುವರೆಂದೂ ನಮ್ಮ ವಾಚಕರು ಚನ್ನಾಗಿ ಲಕ್ಷ್ಮದಲ್ಲಿಡತಕ್ಕದ್ದು.

"ದೌರ್ಮ೦ತ್ರಾನ್ನ ಪತಿರ್ವಿನಶ್ಯತಿ” ಎಂಬಂತೆ ನರಗುಂದದ ಬಾಬಾಸಾಹೇಬನು ಮಮರುಕ ರಾದ ದುರ್ಜನರ ದುರ್ಬೋಧನಕ್ಕೆ ಕಿವಿ ಗೊಟ್ಟು ಇಂಗ್ಲಿಶ್ ಸರಕಾರದ ಮೇಲೆ ಬಂಡುಮಾಡಿದನು, ಬಾಬಾಸಾಹೇ ಬನ ಕ್ಷುದ್ರವಾದ ಸಂಸ್ಥಾನವೆಷ್ಟು ಮಾತ್ರದ್ದು, ಅವನ ಬಲವೇನು ಸುಟ್ಟಿತು, ಕತ್ತಿ ತುಬಾಕಿಗಳ ಉಪಯೋಗವನ್ನರಿಯದವರೂ ಸಮರವನ್ನು ಕಣ್ಣಿಲೆ ನೋಡದವರೂ ಆದ ನೂರಾರು ಜನ ರೆಂಟೆಯ ಬಂಟರನ್ನು ಕೂಡಿಸಿಕೊಂಡು ಆವಿಚಾರಿಯ ಮೂರ್ಖನೂ ಆದ ಬಾಬಾಸಾಹೇಬನು ಬಲಾಡ್ಯರಾದ ಇಂಗ್ಲಿಶ್ ಸರಕಾರದವರ ಮೇಲೆ ಬಂದು ಮಾಡ ಹೋದರೆ ಅದೆಲ್ಲಿಗೆ ಮುಟ್ಟು ವದು ? ಒಂದು ದಿನ ಒಪ್ಪತ್ತಿನಲ್ಲಿ ಬಾಬಾಸಾಹೇಬನ ಬಂಡು ಮುರಿದು ಹೋಗಿ ಅವನ ಸಂಸ್ಥಾನವು ಡಬ್ಬ ಬಿದ್ದು ಹೋಯಿತು. ( ಕಾಲಯುಕ್ತ ಸಂವತ್ಸರದ ಜೈಷ್ಠ ಶು, ೧೦ ಮಂಗಳವಾರ )

ವಿಜಯಿಯಾದ ಇಂಗ್ಲಿಶ್ ಸೇನಾಧೀಶನು, ನರಗುಂದ ಗ್ರಾಮವನ್ನು ಸುಲಿಯಬಹುದೆಂದು ತಳ್ಳಿ ಸೇನೆಗೆ ಆಪ್ಪಣೆಕೊಟ್ಟ ಮೇರಿಗೆ ಮರುದಿವಸ ಬುಧವಾರ ಪ್ರಾತಃಕಾಲದಲ್ಲಿಯೇ ಉದ್ರಿಕರಾದ ಆ ಸೈನಿಕರು ಕೇಕೆ ಹೊಡೆಯುತ್ತೆ ಊರಲ್ಲಿ ಹೊಕ್ಕರು. ಊರ ಅಗಸೆಯ ಬಾಗಿಲದಲ್ಲಿ ದೊಡ್ಡ ದೊಂದು ಆನೆಯು ಅಡ್ಡಾಗಿ ನಿಂತಿತ್ತು. ಗುಂಡುಗಳ ಕಡಾಟಕ್ಕು ಬರ್ಚಿಗಳ ಚುಚ್ಚು ವಿಕೆಗೂ ಅಂಜಿ ಸಜೀವವಾಗಿರುವ ಆ ಮಾಂಸದ ಸತ್ವ ತವು ಹಿಂತಿರುಗಿ ಊರಲ್ಲಿ ಹೊಕ್ಕು, ಸೈನಿಕರ ಹಾವಳಿಗೆ ಭೀತಿಗೊಂಡು ಸತ್ತೆ ಕೆಟ್ಟೆನೆಂದು ಓಡಾಡುತ್ತಿರುವ ಗ್ರಾಮವಾಸಿಗಳನ್ನು ತುಳಿಯುತ್ತೆ ಹಾಹಾಕಾರವನ್ನೆಬ್ಬಿಸಿ ಬಿಟ್ಟಿತು.

ಇಂಗ್ಲಿಶ್ ಸೈನಿಕರು ಊರಲ್ಲಿ ಸೇರಿದವರೇ ನೆಟ್ಟಗೆ ಶ್ರೀ ವೆಂಕಟೇಶನ ಗುಡಿಗೆ ಬಂದರು. ಪೂಜಾರಿಯು ದೇವರ ಆರ್ಚೆಯನ್ನು ನಡಿಸಿದ್ದನು. ಅಶಿಕ್ಷಿತರಾದ ಸೈನಿಕರು ವೆಂಕಟೇಶನ ಮೂರ್ತಿಯ ಮೇಲೆ ಗುಂಡುಹಾರಿಸಿ ಆ ಮೂರ್ತಿಯನ್ನು ಒಡೆದುಹಾಕಿದರು. ಗುಡಿಯಲ್ಲಿ ಇದ್ದದ್ದು ಬಿದ್ದದ್ದನ್ನೆಲ್ಲ