ಪುಟ:ಬೆಳಗಿದ ದೀಪಗಳು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಪೂರ್ಣ-ಕಥೆಗಳು

ಸುಲುಕೊಂಡರು, ಬಳಿ ತಲಾ ಸೈನಿಕರು ಊರ ಜನರ ಮನೆಮನೆ ಹೊಕ್ಕು ಸುಲಿಗೆಯನ್ನು ನಡೆಸಿದರು. ಅರ್ಥ ಹಾನಿ ಮಾನಹಾನಿ ಧನಹಾನಿ ಪ್ರಾಣಹಾನಿಗಳು ಒದಗಿ ಬಂದಾಗ, ಪಾಷ, ಅಲ್ಲಿಯ ಜನರ ಮನಸ್ಸಿನ ಸ್ಥಿತಿ ಏನಾಗಿರಬೇಡ ! ಎದೆಯೊಡೆದು ಕೈ ಕಾಲುಗಳಲ್ಲಿಯ ನಾಡಿಗಳು ಸತ್ತಂತಾಗಿ ಆ ಜನರು ಅಲ್ಲಲ್ಲಿ ಪ್ರೇತ ಪಾಯರಾಗಿ ಬಿದ್ದು ಕೊಂಡಿದ್ದರು. ತನ್ನ ಮನೆ ಯಲ್ಲಿಯ ವಸ್ತು ವಡವೆಗಳುಳಿದರೆ ಶ್ರೀ ವೆಂಕಟೇಶನಿಗೆ ಟೆಂಕಿಯ ಮುಡುಪು ಕೊಡುವೆನೆಂದು ಕೃಪಣನಾದ ಕೋಮಟಿಗನು ಮನಸ್ಸಿನಲ್ಲಿಯೇ ಬೇಡಿ ಕೊಳ್ಳುತ್ತಿದ್ದನು. ಏನು ಹೋದರೂ ತನ್ನ ಜನಿವಾರವೊಂದುಳಿಯಲೆಂದು ಚಿಂತಿಸಿ ಸಾಧುಭಾವನಾದ ಬ್ರಾಹ್ಮಣನೋರ್ವನು ತನ್ನ ಯಜ್ಯೋಪವೀತ ವನ್ನು ಟೊಂಕದಲ್ಲಿಯ ಪಂಚೆಯಲ್ಲಿ ಅಡಗಿಸಿಟ್ಟ, ವೆಂಕಟೇಶಸ್ತೋತ್ರವನ್ನು ಆರಂಭದಿಂದ ದ ವರೆಗೆ ಕಣ್ಣು ಮುಚ್ಚಿ ಪಠಿಸುವಷ್ಟರಲ್ಲಿ, ಸೋಲ್ಡರನೊಬ್ಬನು ಆ ಬಡಬ್ರಾಹ್ಮಣನ ಬೆನ್ನು ಮೇಲೆ ಒಳಿತಾಗಿ ಗುಮ್ಮಿ ಅವನ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಎತ್ತಿಕೊಂಡು ನಡೆದನು. ಮತ್ತೊಬ್ಬರ ಮನೆಯಲ್ಲಿಯ ಮಡಿವಸ್ತ್ರಗಳ ಮರೆಯನ್ನು ಹರಿಹೊಡೆದು ಮುಸಲ್ಮಾನ ನಾದ ಸೈನಿಕನೊಬ್ಬನು ಅಲ್ಲಿಯ ದೇವರಮನೆ ಹೊಕ್ಕು ದೇವರ ಪೆಟ್ಟಿಗೆ ದೊಡ್ಡದೇವರ ಪೆಟ್ಟಿಗೆಗಳನ್ನು ಬಿಟ್ಟು ಬಿಚ್ಚಿ ನೋಡಿದನು. ಜಂಗಮರ ಮಠವನ್ನು ಹೊಕ್ಕು ಆಡ್ಡಾಡಿ ನೋಡಿ ಹೋಗುವಾಗ ಸಿಪಾಯಿಯೊಬ್ಬನು ತರುಣಿಯಾದ ಶರಣಮ್ಮನ ಮುಖವನ್ನು ವಿನೋದಕ್ಕಾಗಿ ಚುಂಬಿಸಿದ್ದರೆ ಆ ದುರಾತ್ಮನನ್ನು ದಂಡಿಸುವವರಾರು ? ಪಟ್ಟಣಸೆಟ್ಟಿಯು ತನ್ನ ಮನೆಯ ಇದ್ದ ಮುತ್ತು ಬಂಗಾರಗಳನ್ನು ಕಟ್ಟಿಕೊಂಡು ಪಾರಾಗಿ ಹೋಗಬೇಕೆಂದು ಮಾಳಿಗೆಯನ್ನೇರಿರಲು ಸೈನಿಕನೊಬ್ಬನು ಅವನನ್ನು ಹಿಡಿದು ನಮ್ಮ ನ್ನು ವಂಚಿಸಬೇಕೆಂದು ಮಾಡಿದ್ದಿಯಾ ?” ಎಂದು ನುಡಿದು ಆ ಅಪರಾಧಕ್ಕಾಗಿ ಅವನು ಆ ಸೆಟ್ಟಿಯನ್ನು ಒಳಿತಾಗಿ ತಳಿಸಿದನು. ಕಳ್ಳನಾರು? ಸೆಟ್ಟಿಯೇ ? ದುಷ್ಕರ್ಮ | ಬಾವಲಿಗಾಗಿ ಸೈನಿಕರು ಪುರುಷ೮ ಕಿವಿಗಳನ್ನು ಹರಿದರು; ನತ್ತುಗಳಿಗಾಗಿ ಹೆಣ್ಣು ಮಕ್ಕಳ ಮೂಗುಗಳನ್ನು ಹರಿದರು, ತಮಗೆ ಬೇಕಾಗದಿದ್ದ ಕಾಳುಕಡಿಗಳನ್ನು ಆ ಮೂಥರು ನೆಲದ ಪಾಲು ಮಾಡಿ ಹೊಗ ಬೇಕೆ ? ಭಾಡಬಡಕಲುಗಳನ್ನು ಈಡಾಡಿ ಒಡೆದರು, ಅರಿವೆ. ಅಂಚಡಿಗಳಿಗೆ