ಪುಟ:ಬೆಳಗಿದ ದೀಪಗಳು.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೨೫

ಲ್ಲಿಡುವೆನೆಂದು ಯಾವನಾದರೂ ಮಾತಾಡ ಹತ್ತಿದರೆ, ನ್ಯಾಯದ ತಕ್ಕಡಿಯನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ ದೇವನಿಗೆ ಈ ಮಾತು ರುಚಿಸಬಲ್ಲದೆ? ಅನೇಕ ಪ್ರಾಣಿಗಳ ಮುಖಗಳೊಳಗಿಂದ ಹೊರಬೀಳುವ ಶಾಪಗಳು ವಜಾಘಾತದಂತೆ ಅವ್ಯಾಹತವಾಗಿ ಈ ನಮ್ಮ ವಂಶದವರ ತಲೆಗಳ ಮೇಲೆ ಬೀಳುತ್ತಿರಲು, ಈ ವಂಶದಲ್ಲಿ ಹುಟ್ಟಿದವರಿಗೆ ಸುಖಶಾಂತಿಗಳು ಎಂದ? ಈ ವಂಶದಲ್ಲಿ ಹುಟ್ಟಿದವರೆಲ್ಲರೂ ಹುಚ್ಚರಾದರೆ ಅದರಲ್ಲಿ ವಿಪರೀತವಾದದ್ದಾದಲೂ ರವದು? ಹಾಗೂ ಈ ವಂಶವು ನಷ್ಟಾಂಶವಾದರೂ ಯಾಕೆ ಆಗಲಿಕ್ಕಿಲ್ಲ? ಈ ವಂಶಕ್ಕೆ ಮೂಲಾಧಾರರಾದ ಪೂರ್ವಜರ ಕೈಯಿಂದ ಇ೦ಥ ಭಯಂಕರವಾದ ಪಾತಕಗಳು ಸಂಭವಿಸಿರಲು, ಆವರ ವಂಶಕ್ಕೆ ಹೊಂದಿದ ಸ್ತ್ರೀಯರ ಉದರದಲ್ಲಿದ್ದ ಗರ್ಭಗಳು ಕೂಡ ಪತನವಾಗಲೇಬೇಕು. ಒಂದು ಕಾಲಕ್ಕೆ, ಅವು ಪತನವಾಗದಿದ್ದರೂ ಪಾಶಕಗಳ ಕೆ೦ಡಗಳಿ೦ದ ಅವು ಗರ್ಭಾಶಯದಲ್ಲಿಯೇ ಸುಟ್ಟು ಭಸ್ಮವಾಗಿಹೊಗಬೇಕು.

ತಾಯಿಯು : ಭೋಲಾನಾಥ, ನಿಲ್ಲು ನಿಲ್ಲು, ಹಾಗೆ ಮಾತಾಡಬೇಡ. ಆವೇಶದ ಭರದಲ್ಲಿ ನಿನ್ನ ಬಾಯಿಯಿಂದ ಹೊರಬೀಳುವ ಶಾಪವಚನಗಳು ಯಾರಿಗೆ ಅಪಾಯವನ್ನು೦ಟುಮಾಡುವವೆಂಬ ಕಲ್ಪನೆಯು ನಿನಗೆ ಬಂದಂತೆ ತೋರುವದಿಲ್ಲ ನೀನು ನಿನ್ನ ತಾಯಿಯನ್ನು ಈ ರೀತಿಯಾಗಿ ಶಾಪಿಸಬೇಡ. ನೀನು ನಿನ್ನ ತಮ್ಮನನ್ನು ಕಠೋರವಾದ ಶಾಪದಿಂದ ಸುಟ್ಟು ಬೂದಿ ಮಾಡಬೇಡ. ನಾನು ಇಂದಿನ ವರೆಗೂ ಈ ಸಂಗತಿಯನ್ನು ಗುಪ್ತವಾಗಿಟ್ಟದ್ದೆನು. ಆದರೆ ಪುತ್ರಪ್ರೇಮವು ಬಹಳ ವಿಲಕ್ಷಣವಾದದ್ದು. ಅದಕ್ಕಾಗಿ ನಾನು ಈಗ್ಗೆ ಮಾತಾಡದೆ ಇರಲಾರೆನು, ಭೋಲಾನಾಥನೇ, ನೀನು ಹೀಗೆ ಬೆದರುವಿಯಾಕೆ ? ಹಾಗೂ ಈ ಸಂಗತಿಯನ್ನು ಕೇಳಿ ನಿನ್ನ ಹಣೆ ಯಾಕೆ ಗಂಟಿಕ್ಕಿರುವದು ? ನನಗೆ ಪುತ್ರೋತ್ಸವವಾದರೆ, ನಿನಗೆ ಈ ಮನೆಬಿಟ್ಟು ಹೊರಬೀಳಬೇಕಾಗುವದೆಂದು, ಇಲ್ಲವೆ, ನಿನ್ನ ಆರ್ಧ ಐಶ್ವರ್ಯಕ್ಕೆ ಅವನು ಪಾಲುಗಾರನಾಗುವನೆಂದು ನಿನಗೆ ಈ ಸಂಗತಿಯನ್ನು ಕೇಳಿ ಇಷ್ಟು ವಿಷಾದ ಎನಿಸಿತೆ ?

ಭೋಲಾನಾಥ : ಛೇ ಛೇ ! ಈ ವಿಚಾರವು ಕೂಡ ನನ್ನನ್ನು ಮುಟ್ಟಿಲ್ಲ ಎಂದು ನಿನ್ನ ಪಾದಸಾಕ್ಷಿಯಾಗಿ ಹೇಳುತ್ತೇನೆ. ಬಂಗಾರದ ನಾಣ್ಯಗಳಿಂದ