ಪುಟ:ಬೆಳಗಿದ ದೀಪಗಳು.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ಸಂಪೂರ್ಣ-ಕಥೆಗಳು

ತುಂಬಿರುವ ನೂರಾರು ಹರಿವಾಣಗಳೊಳಗಿನ, ಇಲ್ಲವೆ, ಈ ಮನೆಯನ್ನು ವ್ಯಾಪಿಸಿಕೊಂಡಿರುವ ಐಶ್ವರ್ಯದೊಳಗಿನ ಒಂದು ಗುಂಜಿ ತೂಕವಾದ ಬರಗಾರವನ್ನು ಕೂಡ ನಾನು ಅಪೇಕ್ಷಿಸುವದಿಲ್ಲ. ನನ್ನನ್ನು ನಿಮ್ಮ ದತ್ತಕ ಪುತ್ರನನ್ನಾಗಿ ಮಾಡಿದ ಧರ್ಮಬಂಧನಗಳೂ, ಧರ್ಮ ಸಂಸ್ಕಾರಗಳೂ ಉಲ್ಲಂಘನೀಯವಾದವೆಂದು ಶಿಷ್ಟ ಸಮ್ಮತವಾದರೆ, ನಿಮ್ಮ ವಂಶದ ಕೂಡ ಸಂಲಗ್ನವಾಗಿರುವ ನನ್ನ ಸಂಬಂಧವನ್ನು ಕಡಿದುಕೊಳ್ಳುವದಕ್ಕೆ ನಾನು ಈಗಲೇ ಸಿದ್ಧನಿದ್ದೇನೆ, ಭಿಕ್ಷಾವೃತ್ತಿಯನ್ನವಲಂಬಿಸಿ ನಾನು ನನ್ನ ಹೊಟ್ಟೆಯನ್ನು ತುಂಬಿಕೊಳ್ಳುವೆನು, ಈ ಐಶ್ವರ್ಯವನ್ನೆಲ್ಲ ನಿನಗಾಗುವ ಮಗನು ತನ್ನ ಇಚ್ಛಾನುವರ್ತಿಯಾಗಿ ಉಪಭೋಗಿಸಲಿ.

ತಾಯಿಯು : ಬೇಡ, ಬೇಡ ! ನನ್ನ ಕಂದಮ್ಮನ ಮೇಲೆ ನೀನು ಈ ರೀತಿಯಾಗಿ ನಿಷ್ಟುರನಾಗಬೇಡ. ನಿನಗೆ ಕೂಡ ಸಹನಮಾಡಲು ಅಶಕ್ಯವಾಗಿರುವ ಭಾರವನ್ನು ಇನ್ನೂ ಭೂಸ್ಪರ್ಶವನ್ನಾದರೂ ಮಾಡದೇ ಇದ್ದ ಕೋಮಲವಾದ ಅರ್ಭಕನ ಮೇಲೆ ಹೇರಿ, ನೀನು ನಿನ್ನ ಅಂಗವನ್ನು ತೆಗೆದುಕೊಳ್ಳುವದು ಉಚಿತವಾದದ್ದಲ್ಲ. ಐಶ್ವರ್ಯದ ಆಶೆಗಾಗಿ ನೀನು ಪರಪುರುಷ ನನ್ನು ಕೂಡ ನಿನ್ನ ತಂದೆಯೆಂದು ಒಪ್ಪಿಕೊಂಡಿ; ಆದರೆ ಆ ಐಶ್ವರ್ಯದ ಮೇಲೆ ಭೂತ ಪಿಶಾಚಾದಿಗಳು ಕುಳಿತಿರುವನೆಂದು ನಿನಗೆ ತಿಳಿದ ಕೂಡಲೆ, ನನ್ನ ಹಸುಗೂಸನ್ನು ಮುಂದೆ ಮಾಡಲು ನೀನು ಉದ್ಯುಕ್ತನಾಗಿರುವಿ. ಇದು ನಿನ್ನ ಮಾತೃಭಕ್ತಿಯೋ, ಏನು ಬಂಧುಪ್ರೇಮವೋ ?

ಭೋಲಾನಾಥ : ಹಾಗಾದರೆ ನಾನು ಏನು ಮಾಡಬೇಕೆಂದು ನಿನ್ನ ಅಭಿಪ್ರಾಯವಿರುವದು?

ತಾಯಿಯು ; ನಮ್ಮ ಐಶ್ವರ್ಯದ ಮೇಲೆ ಕುಳಿತುಕೊಂಡಿರುವ ಪಿಶಾಚಾದಿಗಳಿಂದ ಉದ್ಭವಿಸುವ ಭಾವೀ ಸಂಕಟಗಳು ನನ್ನ ಕೂಸಿಗೆ ತಗಲುದಂತೆ ಯಾವದಾದರೊಂದು ಉಪಾಯವನ್ನು ಯೋಚಿಸು.

ಭೋಲಾನಾಥ : ಯಾಕಾಗಲೊಲ್ಲದು, ಪಿಶಾಚಾದಿಗಳಿಂದ ಉದ್ಭವಿಸುವ ಯಾತನೆಗಳನ್ನು ನಾನು ಸಹಿಸತಕ್ಕದೊ? ಅಥವಾ ಜನ್ಮವನ್ನು ತಾಳುವ ನನ್ನ ತಮ್ಮನು ಸಹಿಸತಕ್ಕದ್ದೋ ಎಂಬದೇ ಮುಖ್ಯವಾದ ಪ್ರಶ್ನವು. ನನ್ನ ದುಃಖವು ನಿನ್ನ ಅರ್ಭಕನ ಸುಖಕ್ಕೆ ಕಾರಣವಾಗುತ್ತಿದ್ದರೆ, ಪರೋಪ