ಪುಟ:ಬೆಳಗಿದ ದೀಪಗಳು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಪೂರ್ಣ-ಕಥೆಗಳು

ಮೇಲಿ೦ದಲೂ ಮೈಮೇಲಿನ ರತ್ನ ಖಚಿತವಾದ ಆಭರಣಗಳ ಮೇಲಿಂದಲೂ ಅವಳು ಘನವಂತನೋರ್ವನ ಹೆಂಡತಿಯಾಗಿರಲಿಕ್ಕೆ ಸಾಕು. ಮತ್ತೋರ್ವಳು ಕೆಂಪು ಸೀರೆಯನ್ನುಟ್ ವಳು ಬ್ರಾಹ್ಮಣರ ವಿಧವೆಯು. ಅನನುಭೂತವಾದ ಶ್ರಮಕ್ಕಾಗಿಯ ಹೊಟ್ಟೆಯೊಳಗಿನ ದುಃಖಕ್ಕಾಗಿಯೂ ಆ ಕೋಮಲೆಯರ ಕುತ್ತಿಗೆ ಶಿರಬಿಗಿದು ಬಾಯೊಳಗಿಂದ ಶಬ್ದಗಳು ಚನ್ನಾಗಿ ಹೊರಡಲಿಲ್ಲವು.

"ಸಾವಿತ್ರಿ ಬಾಯಿ, ಮಗುವೆ, ಎಂಥ ಭರದಿಂದ ಮುಳ್ಳು ಕೊಂಪೆಯನ್ನೆಡನಿದಿ ಅಮ್ಮಾ" ಎಂದು ನುಡಿದು ಆ ಮುದುಕೆಯು ತಾನೂ ಆಲ್ಲಿ ಕುಳಿತು ಸಾವಿತ್ರಿಬಾಯಿಯ ಕಾಲು ಹಿಡಿದು ನೋಡಿದಳು.

"ಕೆಟ್ಟ ಕಗ್ಗತ್ತಲೆ. ನನ್ನ ಕಣ್ಣಿಗೆ ಈ ಮುಳ್ಳು ಕಾಣಿಸಲೇ ಇಲ್ಲ. ಕಾಲುತುಂಬ ಮುಳ್ಳು ಮುರಿದವು.”

"ಅಯ್ಯೋ ! ಕಲ್ಲುಗುಂಡಿಗಳನ್ನು ತುಳಿದು ತುಳಿದು ನಿನ್ನೀ ಕೋಮಲವಾದ ಪಾದಗಳು ಬಾಳು ಹುಣ್ಣಾಗಿಹೋಗಿವೆ. ಅಂಥದರಲ್ಲಿ ಈ ಮುಳ್ಳುಗಳು ನಟ್ಟಿದ್ದರಿಂದ ನಿನ್ನ ಕಾಲೆಲ್ಲ ರಕ್ತಮಯವಾಗಿ ಹೋಗಿದೆ ! ” ಎಂದು ಸಾವಿತ್ರೀಬಾಯಿಯ ಅತ್ತೆಯು ಸೊಸೆಯ ಕಾಲು ಹಿಡಿದು ನೋಡಿ ನಿಟ್ಟುಸುರು ಬಿಟ್ಟಳು.

"ಅತ್ತೆಯವರೆ, ಹಿರಿಯ ಮನುಷ್ಯರಾದ ನೀವು ನನ್ನ ಕಾಲುಹಿಡಿಯಬಹುದೆ? ಬಿಡಿರಿ ; ನಾನೇ ಮುಳ್ಳುಗಳನ್ನು ಕಿತ್ತಿ ತೆಗೆಯುತ್ತೇನೆ." ಎಂದು ಸಾವಿತ್ರೀಬಾಯಿಯು ಆರ್ತಸ್ವರದಿಂದ ನುಡಿದಳು.

"ಇಂಥ ದುರ್ಧರವಾದ ಪ್ರಸಂಗವು ಬಂದೊದಗಿದಾಗ ಹಿರಿ-ಕಿರಿತನಗಳನ್ನು ಕಟ್ಟಿಕೊಂಡೇನು ಪ್ರಯೋಜನ? ನನ್ನ ಸೊಸೆಯೇ, ನಿನ್ನ ಕಾಲಲ್ಲಿಯ ಮುಳ್ಳು ತೆಗೆಯಗೊಡು. ಇಲ್ಲಿ ನಿನಗೆ ಉಪಚಾರವನ್ನು ಮಾಡುವವರು ಯಾರಿದ್ದಾರೆ?"

"ಅಮ್ಮಾ, ಮುಳ್ಳುಗಳೆಲ್ಲ ಮುರಿದುಹೋಗಿವೆ. ತೆಗೆಯಲಿಕ್ಕೆ ಬರುವಂತಿಲ್ಲ. ಮೇಲಾಗಿ ಇಲ್ಲಿ ಹೊತ್ತುಗಳೆಯುವಂತೆಯೂ ಇಲ್ಲ. ಹೇಗಾದರೂ ಮಾಡಿ ನಾನು ನಡಿಯುವೆನು. ಏಳಿರಿ."

"ಹೇಗೆ ನಡೆಯುವಿ ನನ್ನ ಗೌರೀ ! ದೈವವೇ, ನಮಗೆಂಥ ಕೆಟ್ಟ ಕಾಲವನ್ನು ತಂದಿಟ್ಟಿ ? ಸಾವಿತ್ರೀಬಾಯಿ, ಒಂದು ಕ್ಷಣಹೊತ್ತಾದರೂ