ಪುಟ:ಬೆಳಗಿದ ದೀಪಗಳು.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೧೩

ಆ ಜನರ ಗ್ರಾಮಗಳೆಲ್ಲ ಸುಟ್ಟು ಹೋಗಿ ದೇಶವೆಲ್ಲ ಸ್ಮಶಾನದಂತೆ ಕಾಣಿಸಿತು. ಮಹೋಬಾದ ರಾಜನಾದ ಪುರಮಲ್ಲನ ಕೀರ್ತಿಗೆ ತಗಲಿದ ಕಲಂಕವನ್ನು ಜಸ್ಸತಾಜನು ಗೊಂಡಜನರ ರಕ್ತದ ಗುಂಡದಲ್ಲಿ ನಿರ್ಮಲವಾಗಿ ತೊಳೆದು ಹಾಕಿದನು.

ಆದರೆ ಮಹೋಬಾ ರಾಜ್ಯದ ದುರ್ದೈವದಿಂದ ವೀರಾಗ್ರೇಸರನಾದ ಜಸ್ಸತಾಜನು ಸಮರಾಂಗಣದಲ್ಲಿ ಮಡಿದು ನೀರಸ್ವರ್ಗವನ್ನೈದಿದನು. ಅವನ ಮರಣದಿಂದ ಆ ರಾಜ್ಯದ ಆಧಾರಸ್ತಂಭವೇ ಮುರಿದಂತಾಯಿತು. ಪುರಮಲ್ಲನಲ್ಲದಿದ್ದರೂ ಆವನ ರಾಣಿಯಾದ ಮುಲುಂದದೇವಿಯು ಮಡಿದುಹೋದ ಜಸ್ಸರಾಜನ ಪರದೇಶಿಗಳಾದ ಮಕ್ಕಳನ್ನು ಕರಿಸಿಕೊಂಡು ಅವರನ್ನು ತನ್ನ ಹೊಟ್ಟಮಕ್ಕಳಂತೆ ಜೋಕೆಮಾಡಿ, ಅವರು ದೊಡ್ಡವರಾದ ಬಳಿಕ ಅವರ ಸ್ವಾಸ್ತಿಯಾಗಿದ್ದ ಕಲಿಂಜರ ಕೋಟೆಯನ್ನೂ ಅದಕ್ಕೆ ಹೊಂದಿದ ಭೂಮಿ, ಸೀಮೆಗಳನ್ನೂ ಅವರ ಸ್ವಾಧೀನ ಮಾಡಿಸಿದಳು.

ಅಲಾ ಉದಿಲ್ಲರೆಂಬ ಜಸ್ಪರಾಜನ ಮಕ್ಕಳಾದರೂ ತಂದೆಗಿಂತಲೂ ಒಂದು ತೂಕ ಮಿಗಿಲಾದ ವೀರರೂ, ಕ್ಷಾತ್ರಧರ್ಮದಲ್ಲಿ ಒಳ್ಳೇ ಅಭಿಮಾನವುಳ್ಳವರೂ ಆಗಿದ್ದರು. ಭಾರತ ಮಹಿಲಾಮಣಿಗಳಲ್ಲಿ ಅತ್ಯಂತವಾಗಿ ವಿರಾಜಿಸುತ್ತಿರುವ ಶ್ರೀ ದೇವಲದೇವಿಯ ಹೊಟ್ಟೀಮಕ್ಕಳೇ ಅವರು ! ಆ ವೀರಪತ್ನಿಯಲ್ಲಿ ವಾಸಿಸುತ್ತಿರುವ ಸ್ವಕುಲಾಭಿಮಾನವೂ, ರಾಜನಿಷ್ಠೆಯ, ಸತ್ಯ ಪ್ರೀತಿಯ, ದೃಢನಿಶ್ಚಯವೂ ಆ ಮಾತೆಯ ಮಕ್ಕಳಲ್ಲಿ ಅನ್ಯೂನವಾಗಿ ಬಿಂಬಿಸಿದ್ದದ್ದು ಆಶ್ಚರ್ಯವೆ ? ಅಲಾ ಉದಿಲ್ಲರ ದರ್ಸವು ಪರರಾಯರ ಎದೆಯಲ್ಲಿ ಭೀತಿಯನ್ನುಂಟುಮಾಡಿತು; ಅವರ ಕ್ರುದ್ಧವಾದ ಕಟಾಕ್ಷಗಳನ್ನು ಕಂಡು ಅವನೀಶರೆಲ್ಲರೂ ನವರಾದರು ; ಅವರ ದಂಡಪಹಾರವು ಪುಂಡುಗಾರರ ಟೊಂಕವನ್ನು ಮುರಿದುಹಾಕಿತು. ಮಾನನೀಯರಾದ ಆ ಬಂಧುಗಳಿವರು ಮಹೋಬಾರಾಜ್ಯದ ಮಹನೀಯರಲ್ಲಿ ಸನ್ಮಾನ್ಯರಾಗಿದ್ದರು.

ಆದರೆ ಅಂಥ ಪರಮಸಾಹಸಿಗಳಾದ ಆಪದ್ಬಂಧುಗಳನ್ನು ಆದರಿಸಿ ತನ್ನ ರಾಜ್ಯದಲ್ಲಿಟ್ಟು ಕೊಳ್ಳುವ ಜಾಣತನವು ಪುರ ಮಲ್ಲನಲ್ಲಿ ಇರಲಿಲ್ಲ. ಅವಿಚಾರಿಗೆ ಸಾರಾಸಾರ ವಿಚಾರವೆಲ್ಲಿ? ಪುರಹರ ಕುಲಕಲಕನಾದ ಮಂಡೂರ ಪಟ್ಟಣದ ರಾಜನೋರ್ವನು ಮಹಾನುಭಾವರಾದ ಅಲ್ಲಾ ಉದಿಲ್ಲರಲ್ಲಿ