ಪುಟ:ಬೆಳಗಿದ ದೀಪಗಳು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಸಂಪೂರ್ಣ - ಕಥೆಗಳು

ಮತ್ಸರವನ್ನು ತಾಳಿ, ಅವರ ವಿರುದ್ಧವಾಗಿ ಪುರಮಲ್ಲನ ಕಿವಿಯಲ್ಲಿ ಕುಮಂತ್ರವನ್ನು ಊದಿದ್ದರಿಂದ ಕಿವಿಹರಕನಾದ ಆ ರಾಜನು ಆ ವೀರರಾದ ಅಣ್ಣ ತಮ್ಮಂದಿರಲ್ಲಿ ಅಸೂಯೆಯನ್ನು ತಳೆದು, ಅವರೊಡನೆ ಇಲ್ಲದ ನೆವತೆಗೆದು ವ್ಯಾಜ್ಯ ಮಾಡಲಾರಂಭಿಸಿದನು. ಪುರಮಲ್ಲನೆಷ್ಟು ನೀಚನಾದರೂ, ಅವನು ರಾಜನು, ತಾವು ಪ್ರಜರೆಂಬ ತಾರತಮ್ಯವನ್ನರಿತು ರಾಜನಿಷ್ಠರಾದ ಆ ಬಂಧುವರ್ಯರು ತಮಗಾದ ಅಪಮಾನ ತೊಂದರೆಗಳನ್ನು ಅನಿರ್ವಾಹಕ್ಕಾಗಿ ನುಂಗಿಕೊಳ್ಳುತ್ತ ಹೋದರು.

ಆದರೂ ಸಹಿಷ್ಣುತೆಗಾದರೂ ಪರಿಮಿತಿಯುಂಟಷ್ಟೆ? ಒಂದು ದಿನ ಪುರಮಲ್ಲನು ಅಲಾ ಉದಿಲ್ಲರ ಮನೆಗೆ ಅತಿಥಿಯಾಗಿ ಬಂದು ಯಥೇಚ್ಛವಾಗಿ ಉಂಡು ತಿಂದು ಮರಳಿ ಹೋಗುವಾಗ ಅಲಾರಾಯನ ಪ್ರೀತಿಯ ಕುದುರೆಯನ್ನು ತನಗೆ ಕೊಡಬೇಕೆಂದು ಆಗ್ರಹದಿಂದ ಕೇಳಿದನು. ತೇಜಸ್ವಿಯಾದ ಕ್ಷತ್ರಿಯನು ತನ್ನ ಕೈಯಲ್ಲಿಯ ಖಡ್ಗವನ್ನಾಗಲಿ, ತಾನು ಹತ್ತುವ ಕುದುರೆಯನ್ನಾಗಲಿ ಪ್ರಾಣಹೋದರೂ ಅನ್ಯರಿಗೆ ಕೊಡುವನೆ ? ಅಲಾರಾಯನು ರಾಜನಿಗೆ ವಿನಯದಿಂದ ಬೆಸಗೊ೦ಡದ್ದೆ ನ೦ದರೆ : “ ರಾಜನ್, ಈ ಕುದುರೆಯು ನಮ್ಮ ತಂದೆಯವರು ಹತ್ತುವ ಕುದುರೆಯ ಮರಿಯು; ಇದನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಜೋಕೆ ಮಾಡಿದ್ದೇನೆ. ರಾಜ ಇಚ್ಛೆಯಿದ್ದರೆ ಈ ದಾಸನ ಮನೆಯಲ್ಲಿದ್ದ ಬೇರೆ ಬೇಕಾದ ವಸ್ತುಗಳು ಅವರವೇ ಇವೆ. ಮಾತ್ರ ಈ ಕುದುರೆಯನ್ನು ಬಿಟ್ಟುಕೊಡಲು ನನಗೆ ಮನಸ್ಸಾಗದು.”

"ಅಲಾ, ನಾನು ಯಾರೆಂದು ತಿಳಿದು ನೀನು ಈ ನನ್ನ ಪ್ರಾರ್ಥನೆಯನ್ನು ನಿರಾಕರಿಸಿದಿ?" ಎಂದು ಪುರನಲ್ಲನು ಕ್ರುದ್ಧನಾಗಿ ಕೇಳಿದನು.

"ತಾವು ನನ್ನ ರಾಜರೆಂದೇ ನಾನು ವಿನಯದಿಂದ ವಿಜ್ಞಾಪನೆ ಮಾಡಿಕೊಳ್ಳುತ್ತೇನೆ. ಈ ಮಾತಿನಲ್ಲಿ ರಾಜರನ್ನು ಹೆಚ್ಚಿಗೆ ಆಗ್ರಹ ತೊಡಬಾರದು.”

"ಎಚ್ಚರದಿಂದ ಮಾತಾಡು, ಉದ್ದಾಮನೆ! ಒಳ್ಳೇ ಮಾತಿನಿಂದ ಈ ಕುದುರೆಯನ್ನು ನನಗೆ ಕೊಡುವಿಯೋ ಇಲ್ಲವೊ?" ಎಂದು ಪುರಮಲ್ಲನು ಗದ್ದರಿಸಿ ಕೇಳಿದನು.

"ಪುರ ಮಲ್ಲರಾಜ, ಯಃಕಶ್ಚಿತವಾದ ಕುದುರೆಯೇನು, ಅದರ ನಿಮಿತ್ತವಾಗಿ ನೀವು ನನ್ನೊಡನೆ ನಿಷ್ಠುರವಾಡುವದೇನು! ನಮ್ಮ ವೈರಿಯಾದ ಆ