ಪುಟ:ಬೆಳಗಿದ ದೀಪಗಳು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಸಂಪೂರ್ಣ -ಕಥೆಗಳು

ತಮ್ಮ ಪ್ರಾಣವನ್ನು ಕೊಡುವರು, ನಮ್ಮ ತಂದೆಯಾದ ಜಸ್ಸರಾಜ ಬಹದ್ದರನು ತನ್ನ ಶಿರಃ ಕಮಲವನ್ನು ರಣದೇವಿಗೆ ಸಮರ್ಪಿಸಿ ನಿನ್ನೀ ತಲೆಯು ನಿನ್ನ ಧಡಕ್ಕೆ ಅಂಟಿಕೊಂಡಿರುವಂತೆ ಮಾಡಿದ್ದು ಭೂಸ್ಪಾಸ್ತಿಗಳ ಆಸೆಗಾಗಿ ಆಲ್ಲವೆಂಬದನ್ನು ನೀನು ಮರೆಯದಿರಲಾರಿ, ನಡೆ ! ನೀನು ನಿನ್ನ ಅರಮನೆಯಲ್ಲಿ ಸೇಂಕೊಳ್ಳುವದರೊಳಗಾಗಿಯೇ ನಾವು ನಿನ್ನಿ ಅನೀತಿಮ ಬರುವಾದ ರಾಜ್ಯವನ್ನು ಬಿಟ್ಟು ಹೋಗಿರುವೆವೆಂದು ತಿಳಿದುಕೋ !" ಎದು ಉದ್ರೇಕದಿಂದ ನುಡಿದು ಅಲಾರಾಯನು ಕೂಡಲೆ ತನ್ನ ಕಹಳೆಗಳನ್ನು ಊದಿಸಿದನು.

ತಮ್ಮ ನಾಯಕರದ ಅಲಾ ಉದಿಲ್ಲರು ರಾಜ್ಯವನ್ನು ಬಿಟ್ಟು ಹೋಗುವರೆಂಬ ವರ್ತಮಾನವನ್ನು ಕಲಿಂಜರ ಕೋಟೆಯಲ್ಲಿದ್ದ ಎರಡು ಸಾವಿರ ಜನ ಪಟುಭಟರಾದ ರಾವುತರು ತಮ್ಮ ಮನೆಮಾರುಗಳನ್ನು ಕಾಲಿಲೊದ್ದು ತಮ್ಮ ಯಜಮಾನರೊಡನೆ ತಾವೂ ಹೊರಟಿದ್ದು ಹೋಗಲು ಸಿದ್ದ ಭಾದರು. ಠಣವಾದ್ಯಗಳ ಘನವಾದ ನಿನಾದವೆಸಗಿತು. ಎರಡು ಸಾವಿರ ಕೆಜಿಗಳು ಕಲಿಂಜರ ಕೋಟಿ ಯ ಹೊರಗಿದ್ದ ಬೈಲಿನಲ್ಲಿ ನಿಂತು ಕೊಂಡು ಆರ್ಭಟಿಯಿಂದ ಕಿರುಳಿದವು. ರಾವುತರು ಧರಿಸಿರುವ ಭಾಲೆ ಖಡ್ಗಗಳು ಬಿಸಿಲಿನಲ್ಲಿ ಚಕ ಚಕನೆ ಹೊಳೆದವು. "ಜಸ್ಸರಾಜ ಮಹಾರಾಜಕಿ ಜಯ್! ” ಎಂಬ ರಣಗರ್ಜನೆಯೊಂದಿಗೆ ಅಲಾಉದಿಲ್ಲರು ಅ೦ದು ಕಲಿಂಜರವನ್ನು ಬಿಟ್ಟು ನಡೆದರು. ಫುರಗೊಟ್ಟು, ಒಕ್ಕಟ್ಟಿನಲ್ಲಿ ಓಡುತ್ತಿರುವ ಕುದುರೆಗಳ ಖುರಾಘಾತ ಕ್ಕೆದ್ದ ಕೆಂಧೂಲಿಯ ಆ ಉದ್ರಿಕ್ತವಾದ ಸೇನೆಯನ್ನು ಅಡಗಿಸಿತು. ಕಂಧೂಲಿಯ ಕಣ್ಮರೆಯಾಗುವವರೆಗೂ ಕಂಬನಿಗಳ ಮಿಡಿದಾರ್ತೆಯರಾಗಿ ಪುರನಾರಿಯರು ತಮ್ಮ ವೀರರು ಹೋದ ಮಾರ್ಗವನ್ನು ನೋಡುತ್ತಲೇ ಇದ್ದರು.

ವಿಜಯಶ್ರೀಯನ್ನು ಭುಜಕ್ಕೆ ಕಟ್ಟಿಕೊಂಡು ಬಿಜಯ ಮಾಡಿರುವ ಆ ವೀರರಿಗೆ ಎಲ್ಲಿ ಹೋದಲ್ಲಿ ಆಸ್ಪದವೇ ; ಎಲ್ಲಿ ಹೋದಲ್ಲಿ ಮರ್ಯಾದೆಯೇ. ಆ ಕಾಲದಲ್ಲಿ ಹಿಂದೂ ರಾಜರು ಎಬ್ಬಿಸಿರುವ ಆತ್ಮಕಲಹದ ಸುಯೇ ಆಗಿತ್ತು. ಅಂಥ ಸಮಯದಲ್ಲಿ ರಣಮರ್ದಕರಾದ ಎರಡು ಸಾವಿರ ಜನ ಕಲಿಗಳಾದ ರಾವುತರ ನಾಯಕರು ಆಯತ್ತವಾಗಿ ತನ್ನ ಆಶ್ರಯವನ್ನು ಬಯಸಿ ಬಂದದ್ದು ಕನೋಜದ ರಾಜನಿಗೆ ಬಂಗಾರವೇ ಆಯಿತು. ಅವನು