ಪುಟ:ಬೆಳಗಿದ ದೀಪಗಳು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೧೭

ಆಲಾಉದಿಲ್ಲರನ್ನು ಬಹುಮಾನದಿಂದ ಎದಿಗೊFಂಡು ತನ್ನ ರಾಜಧಾನಿಗೆ ಕರೆತಂದು ಅವರಿಗೆ ಇನಾಮು ಜಾಗೀರುಗಳನ್ನು ಕೊಟ್ಟು ಇರಿಸಿಕೊಂಡನು.

ಈ ಸಂಗತಿಗಳಾಗಿ ಕೆಲವು ಕಾಲವಾದಮೇಲೆ, ದಿಲ್ಲಿಯ ಸಾರ್ವಭೌಮನಾದ ಪೃಥ್ವಿರಾಜ ಚವ್ಹಾನನಃ ಸಮೇತಾ ಪಟ್ಟಣದ ರಾಜನ ರೂಪವತಿಯಾದ ಮಗಳ ಮೋಹಕ್ಕೆ ಸಿಲ್ಕಿ, ಆ ಪಟ್ಟಣದ ಮೇಲೆ ಅಭಿಯೋಗ ಮಾಡಿ ತನ್ನ ರಮಣಿಯನ್ನು ಎತ್ತಿಕೊಂಡು ದಿಲ್ಲಿಯ ಹಾದೀ ಹಿಡಿದನು. ಮಲ್ಲನೂ, ಮಂಡೂರಿನ ರಾಜನೂ ಮೇವಾಡದ ರಾಜನ ಪಕ್ಷವನ್ನು ಹಿಡಿದು ಕನ್ಯಾಪಹಾರಿಯಾಗಿದ್ದ ಪೃಥ್ವೀರಾಜನ ಬೆನ್ನಟ್ಟಿ ಹೋದರು. ತಾನು ತಂದಿದ್ದ ಸುಮನೋಹರವಾದ ಸುಲಿಗೆಯನ್ನು ಸುರಕ್ಷಿತವಾಗಿ ಅಲ್ಲಿಗೆ ಒಯ್ಯುವ ಆವಸರವು ಪೃಥ್ವಿರಾಜನಿಗೆ ಇದ್ದದ್ದರಿಂದ ಸೊತಷ್ಟು ಸೋತು, ಗೆದ್ದಷ್ಟು ಗೆದ್ದವನಾಗಿ ಹಾಗೂ ಹೀಗೂ ಮಾಡಿ ಒಂದಾವರ್ತಿ ತನ್ನ ಕಾಮಿನಿಯೊಡನೆ ದಿಲ್ಲಿಗೆ ಬಂದು ಮುಟ್ಟಿದನು.

ಪೃಥ್ವೀರಾಜನ ಸೈನಿಕರಲ್ಲಿ ಅನೇಕರು ಕ್ಷತರಾಗಿ ಮಾರ್ಗದಲ್ಲಿ ಬಿದ್ದುಕೊಂಡಿದ್ದರು. ಕ್ಷಾತ್ರ ಕುಲಕಲಕನಾದ ಪುರಮಲ್ಲನು ನಿರಾಶ್ರಿತರಾಗಿ ಬಿದ್ದಿರುವ ಆ ಬಡ ಜನರನ್ನು ಹಿಡಿದು, ಕಟಕರು ಕುರಿಗಳನ್ನು ಕೊಲ್ಲುವಂತೆ, ಕನಿಕರವಿಲ್ಲದೆ ಕಡಿಸಿ ಚಲ್ಲಿಸಿದನು. ಹೃದಯದ್ರಾವಕವಾಗಿರುವ, ಆ ರಾಕ್ಷಸೀ ದುಷ್ಕೃತ್ಯದ ವರ್ತಮಾನವನ್ನು ಕೇಳಿ ಪೃಥ್ವಿರಾಜನು ಅತಿಶಯವಾಗಿ ಸಂಪತ್ತು ನಾಗಿ ಸಿಡಿಲಿನಂತೆ ಗಡಗಡನೆ ಗರ್ಜಿಸಿ ಪುರಮಲ್ಲನನ್ನು ರಸಾತಲಕ್ಕೆ ಮೆಟ್ಟಿಯೇ ತೀರುವೆನೆಂದು ಪ್ರತಿಜ್ಞೆ ಮಾಡಿ ಮಹೋಬಾ ಪಟ್ಟಣದ ಮೇಲೆ ಸಾಗಿಬಂದನು.

ದಿಲೀಶ್ವರನ ಸೇನಾಸಮುದ್ರವು ಪುಶ ಮಲ್ಲನ ರಾಜ್ಯದಲ್ಲಿ ಭೋರಿಟ್ಟು ಸೇರಿ ನಹಿಪ್ರತಿಯಾದ ಕೊಲೆಯನ್ನು ಮಾಡಲಾರಂಭಿಸಿತು. ಪೃಥ್ವೀರಾಜ ನಾರು, ಅವನಿಗೆದುರಾಗಿ ನಿಲ್ಲಲು ಪುರಮಲ್ಲನೆಷ್ಟರವನು!

        ಚೇಳಿನ ಮಂತ್ರವು ಗೊತ್ತಿಲ್ಲಾ
        ಹೋಗಿ ಹಿಡಿದ ಹಾವಿನ ಬಾಲಾ

ಎಂಬಂತೆ ಆವಿಮರ್ಶಕಾರಿಯಾದ ಆ ಪುರಮಲ್ಲನು ಇನ್ನೇನು ಗತಿಯೆಂದು

ಬಾಯಿಬಿಡುತ್ತೆ ತನ್ನ ಮಂತ್ರಿಗಳೊಡನೆ ಆಲೋಚಿಸಬಂದನು. ಹೀಗೆ