ಪುಟ:ಬೆಳಗಿದ ದೀಪಗಳು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಸಂಪೂರ್ಣ-ಕಥೆಗಳು

ಗಡ್ಡಕ್ಕೆ ಉರಿಹತ್ತಿದ ಸಮಯದಲ್ಲಿ ಯಾರೇನು ಮಾಡುವರು? ಆಗ ಪುರಮಲ್ಲನ ರಾಣಿಯಾದ ಮಲುಂದದೇವಿಯು ಪತಿಯನ್ನು ಒತ್ತಟ್ಟಿಗೆ ಕರೆದು ಅಂದದ್ದು : "ಹೇಗಾದರೂ ಮಾಡಿ ಅಲಾಉದಿಲ್ಲರನ್ನು ಕರಿಸಿಕೊಳ್ಳಿರಿ. ಆ ರಣಧುರಂಧರರಿಲ್ಲದೆ ಈಗಿನ ದುರ್ಧರವಾದ ಪ್ರಸಂಗವು ನೀಗುವಂತಿಲ್ಲ. ವೃಥಾಭಿಮಾನಕ್ಕೀಡಾಗುವ ಸಮಯವಿದಲ್ಲ. ಜಸ್ಸರಾಜನ ಮಕ್ಕಳು ಬರುವವರೆಗೆ ಆವಧಿಯನ್ನು ಕೊಡಬೇಕೆಂದು ದಿಲ್ಲಿಯ ಸಾರ್ವಭೌಮನಿಗೆ ಹೇಳಿಕೊಂಡರೆ, ಮಹಾವಂಶಸಂಭವನಾದ ಪೃಥ್ವೀರಾಜನು ಒಡಂಬಡದೆ ಇರಲಿಕ್ಕಿಲ್ಲ."

ಸೂರ್ಯಚಂದ್ರ ಅಗ್ನಿಯೇ ಮುಂತಾದ ದೇವತಾಸಂಭವರ ವಂಶಜರಾದ ಆ ಕಾಲದ ರಜಪೂತರು ಧರ್ಮಯುದ್ಧಕ್ಕೆ ತಲೆಬಾಗಿ ನಡೆಯುವರಾದ್ದರಿಂದ ಪೃಥ್ವಿರಾಜನು, ಪುರಮಲ್ಲನು ಕೇಳಿಕೊಂಡ ಅವಧಿಯನ್ನು ಕೊಡಲಿಕ್ಕೆ ಸಂತೋಷದಿಂದ ಒಪ್ಪಿಕೊಂಡನು. ಜಗ್‌ನುಷನೆಂಬ ವಾಕ್ಚತುರನಾದ ಚಾರಣನನ್ನು ಅಲಾಉದಿಲ್ಲರ ಮನವೊಲಿಸಿ ಅವರನ್ನು ಕರತರುವದ ಕ್ಯಾಗಿ ಕಳಿಸೋಣವಾಯಿತು. ಅನುನಯದಲ್ಲಿ ನಿಪುಣನಾದ ಆ ಚಾರಣನು ಹೊಟ್ಟೆಯೊಳಗಿನ ಹರಳು ಕರಗಿಸುವಂಥ ಕರುಣಾಜನಕವಾದ ನುಡಿಗಳಿಂದ ಅಲಾಉದಿಲ್ಲರನ್ನು ಕುರಿತು ನುಡಿದದ್ದು: “ಮಹಾನುಭಾವರೆ, ಭೀಮಾರ್ಜುನವಿಗೆ ಸಮಾನರಾದ ನಿಮ ೦ಥ ಮಹಾವೀರರು ಬದುಕಿರುವಾಗಲೆ ಶತ್ರುಗಳು ಒಂದು ನಿಮ್ಮ ಜನ್ಮಭೂಷಿಯಾದ ಮಹೊಬಾ ಪ್ರಾಂಶವನ್ನು ಹೊಕ್ಕು ಆದನ್ನು ಧ್ವಂಸ ಮಾಡುತ್ತಿರುವದನ್ನು ಅರಿತು ನೀವಿಲ್ಲಿ ನಿಶ್ಚಿಂತರಂತೆ ಕುಳಿತಿರಬಹುದೆ ? ನಿಮ್ಮ ಬೆಂಬಲವಿಲ್ಲದ್ದಕ್ಕಾಗಿ ಜಸ್ಟರಾಜರ ಪರಮ ಸ್ನೇಹಿತರಾದ ಬೀರಸಿಂಗ ನರಸಿಂಗ ಮುಂತಾದ ವೃದ್ದ ವೀರರೆಲ್ಲರೂ ಪೃಥ್ವೀರಾಜನ ಶಸ್ತ್ರಾಸ್ತ್ರಗಳ ಕಠೋರವಾದ ಪ್ರಕಾರಗಳಿಗೆ ಈಡಾಗದೆ ಮಡಿದುಹೋದರು. ಪರಮ ರಮಣೀಯವಾದ ಶ್ರೀಶವಹ ಪಟ್ಟಣವು ಸುಟ್ಟು ಬೂದಿಯಾಗಿ ಹೋಯಿತು. ಮನೆಮನೆಗಳಲ್ಲಿ ಪತಿವಿಯೋಗದ ದುಃಖದಿಂದ ಅಳುತ್ತಿರುವ ವಿಧವೆಯರ ಘೋರತರವಾದ ಆರ್ತ ಸ್ವರವು ಕೇಳುವವರ ಎದೆಗಳನ್ನು ಸೀಳಿ ಹೋಳಾಗಿ ಮಾಡುತ್ತಿರುವದು. ಈ ಸಮಯದಲ್ಲಿ ನೀವು ವಿಳಂಬ ಮಾಡದೆ ನಿಮ್ಮ ಜನ್ಮಭೂಮಿಯ ಮಾನರಕ್ಷಣೆಗಾಗಿ ಹೋರಟು ಬನ್ನಿರಿ."