ಪುಟ:ಬೆಳಗಿದ ದೀಪಗಳು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಸಂಪೂರ್ಣ-ಕಥೆಗಳು

ಹೊರಗೆ ಬಂದರು. ಇದೇ ಸಂಧಿಯು ಆ ಲೋಕೋತ್ತರ ತರುಣಿಗೆ ತನ್ನ ಮೋಹಿನಿಯ ಪ್ರಭಾವವನ್ನು ನೋಡುವದಕ್ಕೆ ಅನಾಯಾಸವಾಗಿ ದೊರೆಯಿತು. ಅವಳ ಮಧುರ ಗಾಯನವನ್ನು ಕೇಳಿ ಶಹಾಜಾದನಿಗೆ ಆಲ್ಹಾದವಾಯಿತು, ಅವಳ ನೃತ್ಯದಿಂದ ಅವನು ಮೋಹಿತನಾದನು. ಅವಳ ಮೈಕಟ್ಟು ಆಕೃತಿ ಮತ್ತು ನಡಿಗೆಯ ಸೊಬಗು ಇವುಗಳ ಅವಲೋಕನದಿಂದ ಅವಳ ಅಪ್ರತಿಮವಾದ ಸೌಂದರ್ಯದ ಕಲ್ಪನೆಯು ಶಹಾಜಾದನ ಮನಸಿನಲ್ಲಿ ಮರ್ಶಿಮಂತವಾಗಿ ನಿಂತಿತು. ಅವಳ ಅವಯವಗಳ ಮೇಲೆ ನಿಶ್ಚಲವಾಗಿದ್ದ ಅವನ ನೇತ್ರಗಳು ಅವಳ ಸೌಂದರ್ಯರಸದ ಪಾನವನ್ನು ಮನ ಸೋಕ್ತವಾಗಿ ಮಾಡಹತ್ತಿದವು. ಈ ರೀತಿಯಾಗಿ ಶಹಾಜಾದನು ಅವಳ ಕಡೆಗೆ ಏಕಾಗ್ರ ದೃಷ್ಟಿಯಿಂದ ನೋಡುತ್ತಿರುವಾಗ, ಆಕಸ್ಮಿಕವಾಗಿ ಬೀಳುವಂತೆ ಅವಳ ಮೋರೆಯ ಮೇಲಿನ ಬುರಿಕೆಯು ಕೆಳಗೆ ಬಿದ್ದಿತು; ಮತ್ತು ಅವಳ ಲಾವಣ್ಯ ಸಭೆಯು ಸೇಲೀಮನ ಅತ್ಯಂತ ಆತುರವಾದ ನೇತ್ರಗಳಲ್ಲಿ ಪೂರ್ಣವಾಗಿ ನೆಟ್ಟಿತು. ಆ ಕಾಲಕ್ಕೆ ಅವಳಿಂದ ಆತಿ ಮೋಹಕ ತನದಿಂದ ಪ್ರದರ್ಶಿ ಮಾಡಲ್ಪಟ್ಟ ಸಂಭ್ರಮದಿಂದ ಅವಳ ಮುಖಚಂದ್ರವು ಅತಿಶಯವಾಗಿ ಪ್ರಫುಲ್ಲಿತವಾಯಿತು ಆ ಮೃಗಾಕ್ಷಿಯ ಭಯಚಂಚಲವಾದ ದೃಷ್ಟಿಯಿಂದ ಹೊರಟ ಮದನಬಾಣವು ನಿಮಿಷಾರ್ಧದಲ್ಲಿ ಶಹಾಜಾದನ ಅಂತಃಕರಣವನ್ನು ಪ್ರವೇಶ ಮಾಡಿತು. ತನ್ನ ಲಾವಣ್ಯದ ಪ್ರಭೆಯಿಂದ, ಉದ್ದೀಪ್ತನಾದ ಸೇಲೀಮನನ್ನು, ಚಾತುರ್ಯದಿಂದ ತನ್ನ ಮೋಹಜಾಲದಲ್ಲಿ ತೊಡಕಿಸುವ ಪ್ರಯತ್ನವನ್ನು ಅವಳು ಮಾಡುತ್ತಿರಲು, ಸೇಲೀನನಾದರೂ ಸಾಯಂಕಾಲದ ಸಮಯವನ್ನು ಅಲ್ಲಿಯೇ ಸ್ವಸ್ಥವಾಗಿ ಕುಳಿತು ಕಳೆದನು.

ಈ ರೀತಿಯಾಗಿ ತನ್ನ ಮೋಹಜಾಲದ ಪ್ರಭಾವದ ಪ್ರತೀತಿಯನ್ನು ತೆಗೆದುಕೊಳ್ಳುತ್ತಿರುವಾಗ, ತನ್ನ ಮಹತ್ವಾಕಾಂಕ್ಷೆಯಿಂದ ಮುಂದೆ ತನ್ನ ಮೇಲೆ ಮತ್ತು ಇತರ ಜನರ ಮೇಲೆ ಯಾವ ಪ್ರಸಂಗಗಳು ಬಂದೊದಗುವ ಎಂಬದರ ಕಲ್ಪನೆ ಯಾದರೂ ಮೆಹೆರಉನ್ನಿ ಸಾಗೆ ಇದ್ದಿದ್ದಿಲ್ಲ. ಸೇಲೀಮನ ಅಂತಃಕರಣವನ್ನಾದರೂ ಅವಳು ಗೆದ್ದಳು, ಮತ್ತು ಅವನು ಬಾದಶಹನಾದ ಮೇಲೆ ವಿವಾಹವಿಧಿಪೂರ್ವಕ ಅವನ ಅರ್ಧಾಂಗಿಯಾಗಿ ಬಾದಶಾಹಿ ಸಿಂಹಾಸನದ ಅರ್ಧ ಯಜಮಾನತಿಯಾದರೂ ಆದಳೆಂಬ ಮಾತು ನಿಜ; ಆದರೆ