ಪುಟ:ಬೆಳಗಿದ ದೀಪಗಳು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೩೫

ಅವಳಿಂದ ಪ್ರಕಟ ಮಾಡಲ್ಪಟ್ಟ ಈ ಪ್ರೇಮವು, ಮತ್ತು ಶಹಾಜಾದನಿಗೆ ಹಿಡಿದ ಅವಳ ಸೌಂದರ್ಯದ ಹುಚ್ಚು, ಇವುಗಳ ಮೊಟ್ಟ ಮೊದಲಿನ ಪರಿಣಾಮವು ಬಹಳೇ ವಿಪರೀತವಾಯಿತು. ಶಹಾಜಾದಾ ಸೇಲೀಮನ ಮತ್ತು ತನ್ನ ಮಗಳ ಮನೋಗತಗಳು ಆಯಾಸನಿಗೆ ತಿಳಿದ ಕೂಡಲೆ, ಅವನು ವಿಳಂಬ ಮಾಡದೆ, ಈರ ಅಫಗನನ ಸಂಬಂಧವಾಗಿ ತಾನು ಮಾಡಿದ ವಾಗ್ ನಿಶ್ಚಯವನ್ನು ಪ್ರಸಿದ್ಧ ಪಡಿಸಿದನು, ಮೇಹೆಗಉನ್ನಿ ಸಾನ ಕಿವಿಗೆ ಈ ವರ್ತಮಾನವು ಬಿದ್ದ ಕೂಡಲೆ ಅವಳು ಕ್ರೋಧಾವಿಷ್ಟಳಾಗಿ ಅತ್ಯಂತ ದುಃಖಪಟ್ಟಳು ಮತ್ತು ತಂದೆಯ ಯೋಚನೆಯನ್ನು ತಿರುಗಿಸುವದಕ್ಕಾಗಿ ಅನೇಕ ರೀತಿಯಂದ ಅವನಿಗೆ ಬೇಡಿಕೊಂಡಳು. ಆದರೆ ಅದರ ಉಪಯೋಗವು ಎಳ್ಳಷ್ಟಾದರೂ ಆಗಲಿಲ್ಲ. ಇತ್ತ ತನ್ನ ವತಿಯಿಂದ ಬಾದಶಹನು ಮಧ್ಯಸ್ಥಿಯನ್ನು ಮಾಡಬೇಕೆಂದು ಸೇಲೀಮನು ಅಕಬರನಿಗೆ ಬಹಳ ಸರಿಯಿಂದ ಹೇಳಿಕೊಂಡನು. ಈ ಪ್ರಕಾರದ ಅನ್ಯಾಯವು ತನ್ನ ಮಗನ ಸಲುವಾಗಿ ಸಹ ತನ್ನಿಂದಾಗದೆಂದು ಆಕಬರನು ಸ್ಪಷ್ಟವಾಗಿ ಹೇಳಿದನು. ಸೇಲೀಮನಿಗೆ ಲಜ್ಜೆಯಿಂದ ಸ್ವಚ್ಛವಾಗಿರಬೇಕಾಯಿತು. ಇನ್ನು ತನ್ನ ಪ್ರಯತ್ನವು ನಿಷ್ಪಲವಾಗುವದೆಂದು ಯೋಚಿಸಿ, ತಂದೆಯು ನಿಶ್ಚಯಿಸಿದಂತೆ ಮೆಹೆರಉನ್ನಿಸಾ ಇವಳು ಶೇರಆನಗನನ ಅರ್ಧಾಂಗಿಯಾದಳು. ಅವಳ ಮಹತ್ವಾಕಾಂಕ್ಷೆಯ ಪ್ರಶ್ನವನ್ನು ಒಂದು ಬದಿಗಿಟ್ಟರೆ, ತಂದೆಯಿಂದ ಅವಳ ಸಲುವಾಗಿ ಯೋಚಿಸಲ್ಪಟ್ಟ ಪತಿಯು ಅವಳಿಗೆ ಸೇರುತ್ತಿದ್ದಿಲ್ಲ, ಹೀಗೇನಲ್ಲ.

ಸೇಲೀಮನ ವಿನಂತಿಗನುಸರಿಸಿ ವಾಗ್ನಿಶ್ಚಯವನ್ನು ಮುರಿಯುವದಕ್ಕೆ ಶೇರಅಫಗನನು ಒಪ್ಪಿಕೊಳ್ಳಲಿಲ್ಲಾದ್ದರಿಂದ ದರಬಾರದಲ್ಲಿ ಅವನ ವರ್ಚಸ್ವವು ದಿನದಿನಕ್ಕೆ ಕಡಿಮೆಯಾಗಹತ್ತಿತು. ಬಾದಶಹನ ಭೀತಿಯ ಮೂಲಕವಾಗಿ ಸೇಲೀಮನು ಬಹಿರಂಗದಲ್ಲಿ ತನ್ನ ವೈರವನ್ನು ಪ್ರಕಟಮಾಡಲಿಲ್ಲ; ಆದರೂ ದರಬಾರದ ಮತವನ್ನು ಅವನ ವಿರುದ್ದವಾಗಿ ಕಲುಷಿ ಶಮಾಡುವದಕ್ಕೆ ಅವನು ಹಿಂದೆಮುಂದೆ ನೋಡಲಿಲ್ಲ. ಕೊನೆಗೆ ಅಫಗನನು ಬೇಸತ್ತು ಬಂಗಾಲದಲ್ಲಿದ್ದ ತನ್ನ ಜಾಹಗೀರಿಯ ಮೇಲೆ ಹೊರಟು ಹೋದನು; ಮತ್ತು ಅಲ್ಲಿಯ ಸಭೆಬಾರನಿಂದ ಬರದ್ವಾನದ ರಾಜ್ಯ ಕಾರಭಾರವನ್ನು ತನ್ನ ಕಡೆಗೆ ತೆಗೆದುಕೊಂಡನು. ಅಕಬರನ ಮರಣದವರೆಗೆ ಅವನು ಅಲ್ಲಿಯೇ ಇದ್ದನು. ಅಲ್ಲಿ