ಪುಟ:ಬೆಳಗಿದ ದೀಪಗಳು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೩೭

ಯಾದರೂ ಅವನಿಗೆ ಆಗಿರಬಹುದೆಂಬ ತಿಳುವಳಿಕೆಯಿಂದ ಶೇಹರಅಫಗನನು ದಿಲ್ಲಿಗೆ ಹೋಗಿದ್ದನು; ಆದರೆ, ತನ್ನ ತಿಳುವಳಿಕೆಯು ತಪ್ಪಿನದೆಂದು ಅವನಿಗೆ ಮುಂದೆ ಕಂಡುಬಂದಿತು.

ತನ್ನ ಪ್ರತಿಸ್ಪರ್ಧಿಯನ್ನು ನಾಶಪಡಿಸಿ ತನ್ನ ಮನೋಗತವಾದ ಸ್ತ್ರೀಯನ್ನು ಕೈವಶ ಮಾಡಿಕೊಳ್ಳುವ ನಿಶ್ಚಯವನ್ನು ಬಾದಶಹನು ಮಾಡಿದ್ದನು. ಅವನ ಮನಸಿಗೆ ಅವಳ ವಿಸ್ಮರಣೆಯು ಎಂದೂ ಆಗಿದ್ದಿಲ್ಲ ಮತ್ತು ಅವಳನ್ನು ತನ್ನಾ ಕೆಯನ್ನಾಗಿ ಮಾಡಿಕೊಳ್ಳುವ ಆಶೆಯಾದರೂ ಅವನ ಮನಸಿನೊಳಗಿಂದ ಎಂದೂ ಹೋಗಿದ್ದಿಲ್ಲ. ತನ್ನ ಮನೋಗತವನ್ನು ಸಾಧಿಸಿಕೊಳ್ಳುವದಕ್ಕಾಗಿ ಅವನು ಯೋಚಿಸಿದ ಮಾರ್ಗವು ಮಾತ್ರ ಅವನ ಯೋಗ್ಯತೆಗೆ ಕುಂದು ತರುವಂಥದಾಗಿತ್ತು.

ಹುಲಿಯ ಬೇಟೆಯಲ್ಲಿ ಶೇರ ಅಫಗನನನ್ನು ಗಂಡಾಂತರದ ಪ್ರಸಂಗದಲ್ಲಿ ಚಾಚಿ ಅವನನ್ನು ನಾಶಮಾಡುವ ಮೊದಲನೆಯ ಯುಕ್ತಿಯನ್ನು ಬಾದಶಹನು ಯೋಚಿಸಿದನು. ನಿಡರಬರಿಯ ಅರಣ್ಯದಲ್ಲಿ ಒಂದು ಭಯಂಕರವಾದ ಹುಲಿಯು ಬಂದಿರುವ ಸುದ್ದಿ ಯು ಬಂದೊದಗಿತು ಈ ಹುಲಿಯು ಹಳ್ಳಿಕೊಳ್ಳೆಯೊಳಗಿನ ಅನೇಕ ದನಕರುಗಳನ್ನು ನಾಶಮಾಡಿತ್ತು, ಮೇಲಾಗಿ ಕೆಲವು ಜನರನ್ನಾದರೂ ಕೊಂದು ತಿಂದಿತ್ತು. ಈ ಹುಲಿಯ ಬೇಟೆಯ ಸಲುವಾಗಿ ಬಾದಶಹನು ಸ್ವತಃ ಹೊರಟನು. ಆವನ ಮುಖ್ಯ ಮುಖ್ಯ ಸರದಾರರೂ, ಶೇರಅಫಗನನೂ ಅವನನ್ನು ಹಿಂಬಾಲಿಸಿದರು. ಆ ಕಾಲದ ಬೇಟೆಯ ಪದ್ಧತಿಗನುಸರಿಸಿ ಎಷ್ಟೋ ಮೈಲುಗಳ ವರೆಗೆ ನಾಲ್ಕೂ ದಿಕ್ಕಿನಿಂದ ಸುತ್ತುಗಟ್ಟುತ್ತ ಬೇಟೆಗಾರರು ಆಡವಿಯನ್ನು ಹೊಕ್ಕರು, ಹುಲಿಯು ತನ್ನ ಸ್ಥಾನವನ್ನು ಬಿಟ್ಟು ಗುಡುಗುಹಾಕುತ್ತ ಮುಂದೆ ಬರಹತ್ತಿತು. ಹುಲಿಯ ಗುಡುಗು ಸ್ಪಷ್ಟವಾಗಿ ಕೇಳಬರಹತ್ತಿದ ಕೂಡಲೆ, ಬಾದಶಹನ ಜನರು ಧಾವಿಸಹತ್ತಿದರು. ಎಲ್ಲ ಸರದಾರರು ಏಕತ್ರ ಮಿಲಿತರಾದ ಬಳಿಕ, ಹುಲಿಯ ಮೈ ಮೇಲೆ ಒಬ್ಬನೇ ಸಾಗಿ ಹೋಗಿ ಅದರ ಮೇಲೆ ಹಲ್ಲೆ ಮಾಡುವ ಸಮರ್ಥನು ನಿಮ್ಮೊಳಗೆ ಯಾವನಿರುವನೆಂದು ಬಾದಶಹನು ಪ್ರಶ್ನೆ ಮಾಡಿದನು. ಈ ಪ್ರಶ್ನೆಯನ್ನು ಕೇಳಿದ ಕೂಡಲೆ, ಮವರು ಸರದಾರರು ಮುಂದೆ ಬಂದು ಹುಲಿಯ ಮೇಲೆ ಸಾಗಿ ಹೋಗುವದಕ್ಕೆ ಅಪ್ಪಣೆಯನ್ನು ಬೇಡಿಕೊಂಡರು. ಇದು ನಡೆದಿರು