ಪುಟ:ಬೆಳಗಿದ ದೀಪಗಳು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಸಂಪೂರ್ಣ-ಕಥೆಗಳು

ವಷ್ಟರಲ್ಲಿ, ಬಾದಶಹನು ಮನಸ್ಸಿನಲ್ಲಿ ಯೋಚಿಸಿದಂತೆ, ಶೇರಅಫಗನಿಗೆ ಸ್ಪುರಣವು ತುಂಬಿ, ಇವತ್ತಿನ ವರೆಗೆ ಸಂಪಾದಿಸಿದ ಕೀರ್ತಿಯನ್ನು ಈ ಕಾಲಕ್ಕೆ ಹೋಗಗೊಡಬಾರದೆಂಬ ವಿಚಾರದಿಂದ ಆವನು ಮುಂದೆ ಬಂದು ಅಂದದ್ದೆನಂದರೆ, "ಶಸ್ತ್ರಪಾಣಿಯಾಗಿ ಪಶುಗಳ ಮೇಲೆ ಹಲ್ಲೆ ಮಾಡುವದು ವಿಶೇಷ ಪುರುಷಾರ್ಥದ್ದಾಗಿರದೆ ಅನ್ಯಾಯದ್ದಾಗಿದೆ. ಈಶ್ವರನು ಹುಲಿಗಳಿಗೆ ಅವಯವಗಳನ್ನು ಕೊಟ್ಟಂತೆ ಮನುಷ್ಯನಿಗಾದರೂ ಕೊಟ್ಟಿದ್ದಾನೆ. ಮೇಲಾಗಿ ತನ್ನ ಶಕ್ತಿಯ ಉಪಯೋಗವನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದರ ವಿಷಯಕವಾಗಿ ಮನುಷ್ಯನು ಈಶ್ವರನಿಂದ ವಿಚಾರಶಕ್ತಿಯನ್ನು ಪಡೆದಿದ್ದಾನೆ.”

ಈ ವಿಧಾನಕ್ಕೆ ಉಳಿದ ಸರದಾರರು ಆಕ್ಷೇಪವನ್ನು ತೆಗೆದು ಅಂದದ್ದೇನಂದರೆ, "ಹುಲಿಯ ಶಕ್ತಿಯಕಿಂತ ಮನುಷ್ಯನ ಶಕ್ತಿಯು ಸ್ವಾಭಾವಿಕ ವಾಗಿಯೇ ಕಡಿಮೆ ಇರುವದು; ಅದಕ್ಕಾಗಿ ಅದರ ನಾಶವನ್ನು ಶಸ್ತ್ರದಿಂದಲೇ ಮಾಡತಕ್ಕದ್ದು."

"ಈ ಮಾತು ನಿಜವಾದದ್ದಲ್ಲವೆಂದು ನಿಮಗೆ ಈಗಲೇ ತಿಳಿದು ಬರುವದು” ಹೀಗೆ ಶೇರಆಫಗನನು ನುಡಿದು, ತನ್ನ ಕೈಯೊಳಗಿನ ಕತ್ತಿ ಢಾಲನ್ನು ಬದಿಗೆ ಒಗೆದು ಬರಿಗೈಯಿಂದ ಹುಲಿಯ ಮೇಲೆ ಸಾಗಿಹೋಗುವದಕ್ಕೆ ಸಿದ್ಧನಾದನು. ಪರಿಣಾಮದಲ್ಲಿ ಘಾತಕವಾಗಿ ತೋರುವ ಈ ಅವಿಚಾರದ ಕೃತ್ಯದಿಂದ ಅವನನ್ನು ಪರಾಲ್ಮುಖಮಾಡುವ ಪ್ರಯತ್ನವನ್ನು ಬಾದಶಹನು ಬಹಿರಂಗವಾಗಿ ಮಾಡಿದರೂ ಅಲ್ಲಿ ನಡೆದ ಸಂಗತಿಯಿಂದ ತನ್ನ ಮನಸ್ಸಿನಲ್ಲಿ ಆನಂದಪಡುತ್ತಿದ್ದನು. ಅವನ ಧೈರ್ಯದ ಸ್ತುತಿಮಾಡಬೇಕೋ ಅಥವಾ ಅವನ ಮುರ್ಖತನದ, ನಿಷೇಧಮಾಡಬೇಕೋ ಎಂಬ ಸಂಶಯದಲ್ಲಿ ಬಾದಶಹನು ಮುಳುಗಿಹೋದನು. ಶೇರಅಫಗನನಿಗೂ ಮತ್ತು ಹುಲಿಗೂ ದ್ವಂದಯುದ್ಧವು ಪ್ರಾರಂಭವಾಯಿತು. ಬಹಳ ಹೊತ್ತಿನ ವರೆಗೆ ಅತ್ಯಂತ ಭಯಂಕರವಾದ ಕುಸ್ತಿಯಾಗಿ ಕೊನೆಗೆ ಆ ಹಿಂಸ್ರ ಪಶುವು ತನ್ನ ಪ್ರಾಣವನ್ನು ಬಿಟ್ಟಿತು. ಅರ್ಥಾತ್ ಶೇರಅಫಗನನಿಗೆ ಜಯವು ಪ್ರಾಪ್ತವಾಯಿತು. ಅನೇಕ ಸ್ಥಳಗಳಲ್ಲಿ ಗಾಯಗಳಾಗಿ ಅವುಗಳೊಳಗಿಂದ ವಿಶೇಷವಾಗಿ ರಕ್ತ ಸ್ರಾವವಾದ್ದರಿಂದ ಸರದಾರ ಶೇರಅಫಗನನು ತೀರ ದಣಿದುಹೋಗಿದ್ದನು. ಬಾದಶಹನು ಅವನನ್ನು ಅವನ ಮಂದಿರಕ್ಕೆ ಮುಟ್ಟಿಸಿದನು. ಮಹೆರಉನ್ನಿಸಾನ