ಪುಟ:ಬೆಳಗಿದ ದೀಪಗಳು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೩೯

ಶುಶ್ರೂಷೆಯಿಂದ ಕೆಲವು ದಿವಸಗಳಲ್ಲಿ ಅವನ ಗಾಯಗಳು ತುಂಬಿಬಂದು ಪ್ರಕೃತಿಯು ಮೊದಲಿನಂತಾಯಿತು, ಈ ಅಲೌಕಿಕ ಧೈರ್ಯದ ಕೃತ್ಯವನ್ನು ಸಾವಿರಾರು ಜನರು ನೋಡಿದ್ದರಿಂದ ಶೇರಅಫಗನನ ಶೌರ್ಯದ ಕೀರ್ತಿಯು ನಾಲ್ಕೂ ಕಡೆಗೆ ಹಬ್ಬಿತು. ತನ್ನ ಉದ್ದೇಶವು ಸಫಲವಾಗಲಿಲ್ಲೆಂದು ಬಾದಶಹನಿಗೆ ಮಾತ್ರ ಅತ್ಯಂತ ಖೇದವೆನಿಸಿತು. ಆದರೆ ಅವನ ನಿಶ್ಚಯವು ಸ್ಥಿರವಾಗಿ ಉಳಿದು, ನಿರಾಶೆ ಮತ್ತು ಫಜೀತಿ ಇವುಗಳ ಯೋಗದಿಂದ ಅವನ ಇಚ್ಛೆಯು ಮಾತ್ರ ದ್ವಿಗುಣಿತವಾಯಿತು.

ಯಾವ ಪ್ರಯತ್ನದಿಂದಾದರೂ ಮೇಹರಉನ್ನಿಸಾ ಇವಳನ್ನು ತನ್ನ ಹಸ್ತಗತಮಾಡಿಕೊಳ್ಳುವ ಉದ್ದೇಶದಿಂದ ಜಹಾಂಗೀರನು ಮತ್ತೊಂದು ಉಪಾಯವನ್ನು ಯೋಚಿಸಿದನು. ತನ್ನ ಪ್ರಕೃತಿಯು ಮೊದಲಿನಂತಾದ ಕೂಡಲೆ, ಶೇರಅಫಗನನು ಬಾದಶಹನ ದರ್ಶನಕ್ಕಾಗಿ ಹೋದನು. ಬಾದಶಹನು ಅವನ ಮೇಲೆ ಸ್ತುತಿಯ ದೃಷ್ಟಿಯನ್ನು ಮಾಡಿ ತನ್ನ ಪ್ರೇಮವನ್ನು ವ್ಯಕ್ತಪಡಿಸಿದನು. ಶೇರಆನಗನನಿಗೆ ಬಾದಶಹನ ಕಾಪಟ್ಯವು ಕಂಡುಬರಲಿಲ್ಲ. ಅವನನ್ನು ಹಾಗೆ ಕೊಲ್ಲಬೇಕೆಂಬ ಯುಕ್ತಿಯನ್ನು ಬಾದಶಹನು ಮೊದಲೇ ರಚಿಸಿಟ್ಟಿದ್ದನು. ಶೇರಅಫಗನನಿಗೆ ಒಂದು ಚಿಕ್ಕ ಸಂದಿಯಲ್ಲಿ ಎದುರಾಗಿ, ಜನರಿಗೆ ಕೇವಲ ಆಪಘಾತದಂತೆ ತೋರುವ ಹಾಗೆ ಅವನ ಮೇಲೆ ಒಂದು ದೊಡ್ಡ ಮದೋನ್ಮತ್ತ ಆನೆಯನ್ನು ಹಾಕಿ, ಅವನ ಪ್ರಾಣವನ್ನು ತೆಗೆದುಕೊಳ್ಳುವದಕ್ಕೆ ಬಾದಶಹನು ಒಬ್ಬ ಮಾವುತನಿಗೆ ಹೇಳಿದ್ದನು

ಪಾಲಿಕೆಯಲ್ಲಿ ಕುಳಿತು ಆ ಶೂರ ಸರದಾರನು ತನ್ನ ಮಂದಿರಕ್ಕೆ ಮರಳಿ ಹೋಗುತ್ತಿರುವಾಗ, ಒಂದು ಸಂದಿಯ ಕೊನೆಗೆ ಒಂದು ಆನೆಯು ನಿಂತಿದ್ದು ಮಾರ್ಗವು ಪ್ರತಿಬಂಧಿತವಾಗಿದೆಂದು ಕಂಡಕೂಡಲೆ, ಆನೆಯನ್ನು ಬದಿಗೆ ಮಾಡುವದರ ಸಲುವಾಗಿ ಅವನು ತನ್ನ ಸೇವಕರಿಗೆ ಅಪ್ಪಣೆಯನ್ನು ಮಾಡಿದನು. ಆದರೆ ಆ ಸೇವಕರು ಭಯಭೀತರಾಗಿ ತಮ್ಮ ಒಡೆಯನ ಆಪ್ಪಣೆಯನ್ನು ಲಕ್ಷಕ್ಕೆ ತಾರದೆ, ಅವನು ಕೂತಿದ್ದ ಪಾಲಿಕೆಯನ್ನು ನೆಲಕ್ಕೆ ಚಲ್ಲಿ ಓಡಿಹೋದರು. ಸೇವಕ ಜನರ ಈ ಹೇಡಿತನದ ಕೃತ್ಯವನ್ನು ನೋಡಿ, ಶೇರಅಫಗನನು ಚಟ್ಟನೆ ಎದ್ದು ಒಂದು, ತೀಕ್ಷ್ಮವಾದ ಕತ್ತಿಯನ್ನು ಒರೆಯೊಳಗಿಂದ ಹೊರಗೆ ತೆಗೆದು ಆನೆಯ ಸೊಂಡೆಯ ಮೇಲೆ ಭ೦ದು ಬಲವಾದ