ಪುಟ:ಬೆಳಗಿದ ದೀಪಗಳು.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಸಂಪೂಣ೯-ಕಥೆಗಳು

ಆಘಾತವನ್ನು ಮಾಡಲು, ಆ ಕ್ಷಣವೇ ಆದು ಕತ್ತರಿಸಿ ನೆಲಕ್ಕೆ ಬಿದ್ದಿತು. ವೇದನೆಯನ್ನು ಸಹಿಸಲಾರದೆ ಆನೆಯು ಚೀರಾಡಹತ್ತಿ, ನೆಲಕ್ಕೆ ಬಿದ್ದು ತತ್ ಕ್ಷಣವೇ ಪ್ರಾಣವನ್ನು ಬಿಟ್ಟಿತು. ಅಲ್ಲಿ ನಡೆಯತಕ್ಕ ಸಂಗತಿಗಳು ತನ್ನ ದೃಷ್ಟಿಗೋಚರವಾಗಬೇಕೆಂಬ ಯೋಜನೆಯಿಂದ ಒಂದು ಬದಿಗೆ ನಿಂತಿದ್ದ ಬಾದಶಹನು ಶೇರಆನಗನನ ಪರಾಕ್ರಮವನ್ನು ನೋಡಿ ಚಕಿತನಾಗಿ, ಲಟ್ಟೆಯಿಂದ ತನ್ನ ಅರಮನೆಗೆ ಹೊರಟುಹೋದನು. ಆ ನಿಷ್ಕಪಟಯಾದ ಸರದಾರನು, ಪುನಃ ಬಾದಶಹನ ಭೆಟ್ಟಿಯಾದಾಗ್ಗೆ ನಡೆದ ಸಂಗತಿಗಳನ್ನೆಲ್ಲ ನಿವೇದನೆ ಮಾಡಿದನು. ಬಾದಶಹನು ಅವನ ಸಾಮರ್ಥ್ಯದ ಮತ್ತು ಶೌರ್ಯದ ಸ್ತುತಿಯನ್ನು ಯಥೇಚ್ಛವಾಗಿ ಮಾಡಿ, ತಾನು ರಚಿಸಿದ ವ್ಯೂಹದೊಳಗಿಂದ ಅವನು ಪಾರಾದ ಬಗ್ಗೆ ಮನಸಿನೊಳಗೆ ಒಂದೇ ಸಮನೆ ತಳಮಳಿಸಹತ್ತಿದನು.

ಜೀವದ ಮೇಲೆ ಬಂದೊದಗಿದ ಈ ಪ್ರಸಂಗಗಳಲ್ಲಿ ಬಾದಶಹನ ಅ೦ಗವಿರುವದೆಂದು ಆ ಸರಸ್ವಭಾವದ ಶೇರಅಫಗನಿಗೆ ಸಂಶಯವಾದರೂ ಬರಲಿಲ್ಲ. ಆದರೆ ಧೂರ್ತಳಾದ ಅವನ ಹೆಂಡತಿಯ ಲಕ್ಷ್ಯಕ್ಕೆ ಇದರ ಮರ್ಮವು ತೋಚಿ, ತ್ವರಿತವಾಗಿ ಬಂಗಾಲಕ್ಕೆ ಹೋಗುವದಕ್ಕಾಗಿ ತನ್ನ ಗಂಡನಿಗೆ ಬೇಡಿಕೊಂಡಳು. ಅತ್ತ ಹೋದರೆ ತಮ್ಮ ವೈರಿಯ ಖಂಗಿನ ಕೃತಿಗಳಿಂದ ತನ್ನ ಪತಿಯ ರಕ್ಷಣವಾಗುವ ಸಂಭವವಾದರೂ ವಿಶೇಷವಾಗಿರುವದೆಂದು ಅವಳು ವಿಚಾರಿಸಿದಳು, ಮುಂದೆ ಆರು ತಿಂಗಳುಗಳ ವರೆಗೆ ಯಾವದಾದರ ವಿಶೇಷವಾದ ಸಂಗತಿಯು ಸಂಭವಿಸಲಿಲ್ಲ; ಅದರಿಂದ ಬಾದಶಹನು ತನ್ನ ಮೇಲಿನ ಲೋಭವನ್ನು ಬಿಟ್ಟಿರಬಹುದು, ಅಥವಾ ಅವನಿಗೆ ಕೃತಕರ್ಮದ ಪಶ್ಚಾತ್ತಾಪವಾಗಿ ಇನ್ನು ಮುಂದೆ ಇವರ ಗೊಡವಿಗೆ ಹೋಗಬಾರದೆಂದು ನಿಶ್ಚಯ ಮಾಡಿರಬಹುದಾಗಿ ಅವಳು ಯೋಚಿಸಿದಳು.

ಬಂಗಾಲದ ಸುಭೇದಾರನಾದ ಕುತುಬಶಹನು ಬಾದಶಹನಿಗೆ ಬಾಲ್ಯದಲ್ಲಿ ಸ್ತನಪಾನ ಮಾಡಿಸಿದವಳ ಮಗನಾಗಿದ್ದನು. ಅವನಿಂದ ಜಹಾಂಗಿರನ ದುಷ್ಟ ಬುದ್ಧಿಯು ಪುನಃ ಜಾಗೃತವಾಗಹತ್ತಿತು. ಶೇರಆಫಗನನ ಕೊಲೆಯ ಸಲುವಾಗಿ ಕುತುಬಶಹನು ನಾಲ್ವತ್ತು ಜನ ಕೊಲೆಗಾರರನ್ನು ಸಿದ್ಧಪಡಿಸಿ ಯೋಗ್ಯವಾದ ಸಂಧಿಯನ್ನು ನಿರೀಕ್ಷಣ ಮಾಡುತ್ತ ಕುಳಿತಿದ್ದನು. ಒಂದು