ಪುಟ:ಬೆಳಗಿದ ದೀಪಗಳು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

ಕ್ರಿಸ್ತಶಕದ ಪ್ರಾರಂಭಕ್ಕೆ ಮುಂಚಿತವಾಗಿ ನಾಲೈದು ನೂರು ವರ್ಷಗಳಿ೦ದ ಯುರೋಪದಲ್ಲಿ ಅತಿ ಘನತೆಗೇರಿದ ಜನಾಂಗವೆಂದರೆ ಗ್ರೀಕರದು. ಆ ಗ್ರೀಸದೇಶವೆಲ್ಲ ಕೂಡಿದರೆ ಒಂದು ಅಂಗೈಯಷ್ಟು ಪ್ರಾಂತನಾಗಿದ್ದರೂ ಆ ಕಾಲದಲ್ಲಿ ಅದರ ಮಹಿಮೆಯನ್ನು ಹಿಡಿದವರಿದ್ದಿಲ್ಲ. ಜಗತ್ತಿಗೆ ಮಾರಿದ ವೀರರೆಂದರೆ ಆ ಗ್ರೀಕರೇ ; ಲೋಕೋತ್ತರರಾದ ತತ್ವಜ್ಞಾನಿಗಳೆಂದರೆ ಅವರೇ. ಗಣಿತ, ಜ್ಯೋತಿಷ, ಪದಾರ್ಥವಿಜ್ಞಾನ ಮುಂತಾದ ಉಪಯುಕ್ತ ಶಾಸ್ತ್ರಗಳ ಸಂಸ್ಥಾಪಕರಾರೆಂದು ಕೇಳಿದರೆ ಅವರನ್ನೇ ತೋರಿಸಬೇಕಾಗಿತ್ತು. ನಾವೆಗಳನ್ನು ಕಟ್ಟಿ ಭೀತಿಯಿಲ್ಲದೆ ದ್ವೀಪ ದ್ವಿಪಾಂತರಗಳಿಗೆ ಕಡಲುಪಯಣ ವನ್ನು ಮಾಡಿದ ಸಾಹಸಿಗಳಲ್ಲಿ ಗ್ರೀಸದವರೇ ಅಗ್ರಗಣ್ಯರು. ವಕತ್ವ ಶಕ್ತಿಯುಳ್ಳ ರಾ - ನೀತಿಜ್ಞರೆಂದರೆ ಗ್ರೀಕರಲ್ಲದೆ ಮತ್ತೊಬ್ಬರಿಲ್ಲ. ಅಸಾಧಾರಣರಾದ ಕವಿಗಳವರು ; ನಿಷ್ಣಾತರಾದ ಶಿಲ್ಪಿಗಳು, ಇತಿಹಾಸಲೇಖನವು ಅವರಿಂದಲೇ ಮೊದಲು ಹುಟ್ಟಿತು. ಆದರೂ, ಆ ಗ್ರಿಸ ದೇಶದಲ್ಲಿ ಸ್ವತಂತ್ರ ಸ್ವತಂತ್ರವಾದ ಅನೇಕ ಸಂಸ್ಥಾನಗಳು. ಸ್ಪಾರ್ಟಾ, ಅಥೆನ್ಸ, ಥೀಬ್ಸ, ಮಾಸಿಡೋನಿಯಾ, ಇಲ್ಲೀರಿಯಾ ಮುಂತಾದ ಜನಾಂಗದವರೆಲ್ಲ ಗ್ರೀಕರೇ ಆಗಿದ್ದರೂ ಅವರಲ್ಲಿ ಒಬ್ಬರ ನೆರಳು ಒಬ್ಬರಿಗೆ ಸರಿಬರುತ್ತಿದ್ದಿಲ್ಲ. ಇಂದು ಸ್ಪಾರ್ಟಾದ ವೀರರು ಪ್ರಬಲರಾಗಿ ಉಳಿದ ಗ್ರೀಕರನ್ನು ತನ್ನ ಅಂಕಯಲ್ಲಿಟ್ಟು ಕೊಂಡಿದ್ದರೆ, ನಾಳೆ ಅಥೆನ್ಸದವರು ತಮ್ಮ ಯುಕ್ತಿವಾದ, ರಾಜ ನೀತಿ, ಕೌಟಿಲ್ಯ, ವಕ್ರತ್ವ, ಪರಾಕ್ರಮಾದಿಗಳ ಬಲದಿಂದ ಉಳಿದವರ ತಲೆ ಯಮೇಲೆ ಕೈ ಆಡಿಸಿದರು. ಒಮ್ಮೆ ಥೀಬ್ಬದವರು ಪ್ರಬಲರಾದರೆ, ಮತ್ತೊಮ್ಮೆ ಮಾಸಿಡೋನಿಯಾದ ಹಿಂದುಳಿದ ಜನಾಂಗವು ಜಿಗಿದು ಮುಂದಕ್ಕೆ ಬಂದು ತನ್ನ ವಿಲಕ್ಷಣವಾದ ತೇಜಸ್ಸಿನಿಂದ ಲೋಕವನ್ನು ಬೆರಗು ಮಾಡಿಕೊಟ್ಟಿತು.

ಈಗಿನ ಸರ್ನಿಯಾ ಹಾಗೂ ಬಲ್ಗೇರಿಯಾದ ಪಶ್ಚಿಮದ ಅರ್ಧಭಾಗ ಕೂಡಿ ಆಗುವ ಪ್ರಾಂತಕ್ಕೆ ಪೂರ್ವಕಾಲದಲ್ಲಿ ಮಾಸಿಡೋನಿಯಾ ಎಂಬ ಹೆಸರು. ಸ್ಪಾರ್ಟಾ ಅಥೆನ್ಸ ಮುಂತಾದ ಸಂಸ್ಥಾನಗಳು ಅತ್ಯುಚ್ಛಿತವಾಗಿ