ಪುಟ:ಬೆಳಗಿದ ದೀಪಗಳು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಸಂಪೂರ್ಣ-ಕಥೆಗಳು

ಮೆರೆಯುವ ಕಾಲಕ್ಕೆ ಮಾಸಿಡೋನಿಯಾ ಪಾ೦ತವು ಬಹು ಹೀನವಾದ ಸ್ಥಿತಿಯಲ್ಲಿತ್ತು. ಅಲ್ಲಿಯ ಜನರಲ್ಲಿ ಶೌರ್ಯವಿದ್ದಿಲ್ಲ. ವಿದ್ಯೆಯಿದ್ದಿಲ್ಲ, ಕಲಾ ಕೌಶಲ್ಯಗಳಿಲ್ಲ. ಇಂಥ ದೇಶವನ್ನೇ ಬೆಳಿಸಿ ಬಲಿಸಿ ಮುಂದಕ್ಕೆ ತಂದವರೆಂದರೆ ನಮ್ಮ ಚರಿತ್ರ ನಾಯಕನಾದ ಶಿಕಂದರಬಾದಶಹನೂ ಅವನ ತಂದೆಯಾದ ಫಿಲ್ಲಿಪರಾಜನು. ತಂದೆಮಕ್ಕಳೀರ್ವರೂ ಅಸಾಧಾರಣರಾದ ಪುರುಷಸಿಂಹರು. ಅವರಲ್ಲಿ ಹೆಚ್ಚಿನವನಾವ ಕಡಿಮೆಯವನಾವನೆಂಬದನ್ನು ಹೇಳಲಿಕ್ಕಾಗದು. ಫಿಲ್ಲಿಪರಾಜನ ತಂದೆಯಾದ ಆಮಂತರಾಜನ ಕಾಲಕ್ಕೆ ಥೀಬ್ಸ ಜನಾಂಗದವರು ಬಹು ಪ್ರಬಲರಾಗಿ ಮರೆಯುತ್ತಿದ್ದರು. ಅಮಂತರಾಜನ ತರುವಾಯದಲ್ಲಿ ಫಿಲ್ಲಿಪನ ಅಣ್ಣನಾದ ಪರ್ದಿಕನು ರಾಜನಾಗಿರುವಾಗ ಮಾಸಿಡೋನಿಯಾದವರಿಗೂ ಥೀಬ್ಸದವರಿಗೂ ಯುದ್ಧವಾಗಿ ಫಿಲ್ಲಿಪನು ಸೋತು ಥೀಬ್ಸದ ಸೇನಾಪತಿಯಾದ ಓಲಾಪೀಡನ ಬಂದಿಯಾಗಿ ಹೋದನು (ಕ್ರಿಪೂರ್ವದಲ್ಲಿ ೩೬೦). ಫಿಲ್ಲಿಪನ ಪೂರ್ವಜನ್ಮದ ಸುಕೃತವೇ ಬಂದಿವಾಸದಿಂದ ಅವನಿಗೆ ವಾ೦ಛಿತಾರ್ಥವನ್ನೀಯುವದಾಯಿತು.

ಆ ಕಾಲಕ್ಕೆ ಥೀಬ್ಸ ಸಂಸ್ಥಾನವೇ ಶೌರ್ಯ ಧೈರ್ಯ ವಿದ್ಯೆ ಬುದ್ಧಿ ಕಲಾಕೌಶಲ್ಯ ಮುಂತಾದ ಉಚ್ಛ್ರಿತವಾದ ಗುಣಗಳಿಗೆ ತವರ್ಮನೆಯಾಗಿತ್ತು. ಅಥೆನ್ಸವ ಪಂಡಿತರೂ ಸ್ಪಾರ್ಟಾದ ಕಡುಗಲಿಗಳ ಈಜಿಪ್ತ ಆಯೋನಿಯಾಗಳಲ್ಲಿಯ ಸಾಹಸಿಗಳಾದ ವರ್ತಕರೂ ಅಲ್ಲಿ ತಮ್ಮ ಪ್ರಸ್ಥಗಳನ್ನು ಬೆಳೆಸಿಕೊಂಡಿದ್ದರು. ಅಂಥ ಸುಸಮಯದಲ್ಲಿ ಫಿಲ್ಲಿಪನು ಅಲ್ಲಗೆಗೆ ರಾಜಕೀಯ ಬಂದಿಯಾಗಿ ಬಂದನು. ಇಪ್ಪತ್ತು-ಇಪ್ಪತ್ತೆರಡು ವರ್ಷದ ನವತರುಣನಾದ ರಾಜಕುಮಾರನವನು. ಬುದ್ಧಿಶಾಲಿಯೂ ಉತ್ಸಾಹಯುತನೂ ಮಹತ್ವಾಕಾಂಕ್ಷಿಯೂ ಆಗಿದ್ದ ಫಿಲ್ಲಿಪನು ಥೀಬ್ಸದಲ್ಲಿ ಸಿಕ್ಕಬಹುದಾದ ವಿದ್ಯೆ ಕಲೆಗಳನ್ನೆಲ್ಲ ಎರಡೂ ಕೈಗಳಿಂದ ಬಳಿಬಳಿದು ಕಟ್ಟಿಕೊಳ್ಳಲಾರಂಭಿಸಿದನು. ಸ್ವಯಂ ವ್ಯಕ್ತಿ ವೀರನಾದ ಆ ರಾಜಕುಮಾರನು ಸಾಮಾನ್ಯನಾದ ಸೈನಿಕನಂತೆ ಹಗಲಿರುಳು ದುಡಿದು ಯುದ್ಧಕಲೆಯ ಶಿಕ್ಷಣವನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡನು. ಥೇಚ್ಛದ ಭೀಷ್ಮನಾದ ಇಸಾಮಿನಂದನೆಂಬವನು ಸೇನೆಯಲ್ಲಿಯೂ ರಾಜ್ಯ ದಾಡಳಿತದಲ್ಲಿಯ ಮಾಡಿದ ಸುವ್ಯವಸ್ಥೆಗಳನ್ನು ನಿಲ್ಲಿಸನು ಲಕ್ಷಪೂರ್ವಕವಾಗಿ ನೋಡಿಕೊಂಡನು. ಪಂಡಿತರಾದ ವಕ್ತಾಜನರ