ಪುಟ:ಬೆಳಗಿದ ದೀಪಗಳು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಂದರ ಬಾದಶಹ

ಶಿಷ್ಯತ್ವವನ್ನು ವಹಿಸಿ ಅವನು ಶೋತೃಗಳ ಮನಸ್ಸುಗಳನ್ನು ತನ್ನೆಡೆ ಅಕ ಷಿಸಿಕೊಳ್ಳುವಂಥ ವಾಶ್ಚಾಪಲ್ಯವನ್ನು ಗಳಿಸಿಕೊಂಡನು. ವಿನಯಾನ್ವಿತನ, ಸುಂದರನೂ, ಪ್ರಸನ್ನ ವದನನ ಆಗಿದ್ದ ಫಿಲ್ಲಿಪನ ಬಯಕೆಯನ್ನು ಪೂರೈಸ ದಿದ್ದ ಜನರೇ ಇರಲಿಲ್ಲ, ಸಾಧುವಾಗಿ ತೋರುವ ತನ್ನ ಬಹಿರಂಗದ ಆಡಂ ಬರಕ್ಕೆ ಬೆನ್ನಾ ಸರವೆಂದು ನೆನೆದು ಅವನು ಪ್ರಸಂಗಬಂದಾಗ ಕುಟಲನೀತಿಯ ಆಶ್ರಯವನ್ನಾದರೂ ಮಾಡಿಕೊಳ್ಳುವದರಲ್ಲಿ ಹಿಂದು ಮುಂದು ನೋಡಿದವ. ನಲ್ಲ. ಆRIA BYTAuಳಗೆ ಕೆಜಿಗೆ 1 ಈg fkaraai., ಎಂದು ನಿಂದಾ ವ್ಯಂಜಕವಾದ ನುಡಿಗಳನ್ನಾಡುವವರಾದ ನಾವು ಆರ್ಯಜನರು ಕೆಟ್ಟು ಹೋದೆವು. ಫಿಲ್ಲಿಪರಾಜನು ಮುಂದಕ್ಕಾದವನು ಆಗಿಹೋಗಿ ಅಜರಾಮರ ಬಾದ ಕೀರ್ತಿಯನ್ನು ಪಡೆದನು. ಹೀಗೆ ವಿದ್ಯಾ ಸಂಪನ್ನ ನಾದ ಫಿಲ್ಲಿನ ರಾಜಕುಮಾರ ಥೀಬ್ಬದಿಂದ ಬಿಡುಗಡೆಯನ್ನು ಹೊಂದಿ ತನ್ನ ದೇಶವಾದ ನಾಸಿಡೊನಿಯಾಕ್ಕೆ ಬರುವಷ್ಟ ರಲ್ಲಿ ತೆರವಾಗಿದ್ದ ಸಿಂಹಾಸನವು ಆವನ ಮಾರ್ಗ ಪ್ರತೀಕ್ಷೆ ಮಾಡುತ್ತಲಿತ್ತು, ಅವನ ಅಣ್ಣನಾದೆ ಪರ್ದಿಕರಾಜನು ಪರರಾಯರೊಡನೆ ಯುದ್ಧ ಮಾಡುವಾಗ ಮಡಿದುಹೋಗಿದ್ದನು, ಪ್ರಜರೆಲ್ಲರೂ ಫಿಲ್ಲಿಪನನ್ನು ಆದರದಿಂದ ಸಿ೦ಹಾ ಸನದ ಮೇಲೆ ಕುಳ್ಳಿರಿಸಿದರು. ಅನಲ ಸನಾದ ಆ ರಾಜನು ಇಡಮಾಡದೆ ತನ್ನ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಂಟುಮಾಡಿ ಪ್ರಜರಲ್ಲಿ ವಿದ್ಯಾ ಪ್ರಸಾರ ವಾಗುವಂತೆ ಮಾಡಿದನು. ದೊಡ್ಡದೊಂದು ಸೇನೆಯನ್ನು ಕೂಡಿಸಿ ಅದಕ್ಕೆ ಯುದ್ಧ ಕಲೆಯನ್ನು ಚೆನ್ನಾಗಿ ಕಲಿಸಿದನು. ಚುಚ್ಚು ಗೋಲಿನ (ಬರ್ಚಿದು) ಭಟ ಇದೊಂದು ಚಮತ್ಕಾರವಾದ ವ್ಯೂಹವನ್ನು ( ಫ್ಯಾಲಾಕ್ಷ ಇವನೇ ನಿರ್ಮಿಸಿದವನು. ಫಿಲ್ಲಿಪನ ಕೈ ಕೆಳಗೆ ವಿನೂತನವಾದ ಯುದ್ಧ ಕಲೆಯನ್ನು ಕಲಿತುಕೊಂಡ ಅವನ ಸೇನೆಯು ಸಮಗ್ರವಾದ ಗ್ರೀಸದೇಶಕ್ಕೆ ಮಾರಿದ್ದಾ ಯಿತು, ಮಾಸಿಡೋನಿಯಾದ ಪೂರ್ವಕ್ಕಿದ್ದ ಫೋಸ (ಬಲ್ಗರಿಯಾದ ಪೂರ್ವ ಭಾಗ+ ಈಗಿನ ಯುರೋಪದ ತುರ್ಕ ಸ್ಥಾನ) ದೇಶವನ್ನೂ ಪಶ್ಚಿಮಕ್ಕಿದ್ದ ಇತ್ತೀರಿಯಾ ದೇಶವನ್ನೂ ದಕ್ಷಿಣಕ್ಕೆ ಥೀಬ್, ಅಥೆನ್ಸ ಮುಂತಾದ ಸಂಸ್ಥಾನ ಗಳನ್ನೂ ಫಿಲ್ಲಿಪನು ಹೊಡೆದು ಕೆಡವಿ ಮಣಿಸಿದನು. ಕುದ್ರವಾದದ್ದೆನ್ನಿಸಿ ಕೊಳ್ಳುತ್ತಿದ್ದ ಮಾಸಿಡೋನಿಯಾ ಸಂಸ್ಥಾನವು ಫಿಲ್ಲಿಪನ ಆಳಿಕೆಯಲ್ಲಿ