ಪುಟ:ಬೆಳಗಿದ ದೀಪಗಳು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಸಂಪೂರ್ಣ-ಕಥೆಗಳು

ಗ್ರೀಸದ ಅಗ್ರೇಸರವಾದ ಸಂಸ್ಥಾನವಾಗಿ ಮೆರೆಯಲಾರಂಭಿಸಿತು.

ಸಕಲ ಗ್ರಹಗಳು ಉಚ್ಚ ಸ್ಥಾನದಲ್ಲಿರುವಾಗ ಫಿಲ್ಲಿಸ ರಾಜನಿಗೆ ಪುತ್ರೋತ್ಸವವಾಯಿತು. ಆ ಸುಪುತ್ರನೇ ಜಗದ್ವಿಖ್ಯಾತನಾದ ಅಲೆಕ್ ಝಾಂಡರನು (ಶಿಕಂದರ ಬಾದಶಹನು). ಶಿಕಂದರನ ತಾಯಿಯಾದ ಆಲಿಂಪಿಯಾ ರಾಣಿಯ ಎಪೀರ ಎಂಬ ಪುರಾತನವಾದ ರಾಜವಂಶದಲ್ಲಿ ಹುಟ್ಟಿದವಳು; ತಂದೆಯಂತೂ ಚಂಡವಿಕ್ರಮನಾದ ಫಿಲ್ಲಿಪರಾಜನು. ಅಂಥ ತಾಯಿ-ತಂದೆಗಳ ಹೊಟ್ಟೆಯಲ್ಲಿ ಹುಟ್ಟಿದವನಾದ ಶಿಕಂದರನು ಲೋಕೋತ್ತರನಾದ ವೀರನಾದನೆಂಬದು ಸಹಜವೇ. ಶಿಕಂದರ ರಾಜಕುಮಾರನ ಶಿಕ್ಷಣ ಪೋಷಣಗಳ ಕ್ರಮವು ಒಳ್ಳೆ ಆಸ್ಥೆಯಿಂದಲೂ ವ್ಯವಸ್ಥೆಯಿಂದಲೂ ನಡೆಯಿತೆಂದು ಹೇಳಬೇಕಾಗಿಲ್ಲ. ಮಗನ ಶಿಕ್ಷಣದ ವಿಷಯದಲ್ಲಿ ಫಿಲ್ಲಿಪರಾಜನಿಗೆ ಹೆಚ್ಚಾದ ಆಸ್ಥೆಯಿರುವದು ಆಶ್ಚರ್ಯವಲ್ಲ. ಆದರೆ ಕ್ಷಾತ್ರಧರ್ಮಾಭಿಮಾನಿನಿಯಾದ ಅವನ ತಾಯಿಯು, ತನ್ನ ಮಗನು ಲೋಕೈಕವೀರನಾಗಬೇಕೆಂದೆಣಿಸಿ ಬಹು ಸಾಹಸಪಡುತ್ತಿದ್ದಳು. ಅದಕ್ಕಾಗಿ ಆಲಿಂಪಿಯಾ ರಾಣಿಯು ಶಿಕಂದರನ ಶಿಕ್ಷಣದ ಮೇಲ್ವಿಚಾರಣೆಯ ಕೆಲಸವನ್ನು ತನ್ನ ಆಪ್ತನಾದ ಲಿಯೋನೀನನೆಂಬ ವೀರನಿಗೆ ಒಪ್ಪಿಸಿದ್ದಳು ಹದಿಮೂರು ವರ್ಷದವನಾಗುವಷ್ಟರಲ್ಲಿ ಶಿಕ೦ದರನು ದೃಢಾಂಗನ, ಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿ ಅತಿತನೂ, ಧೈರ್ಯಶಾಲಿಯೂ ಆಗಿ ತೋರಿದನು. ಮುಂದೆ ಅವನ ಮಾನಸಿಕ ಶಿಕ್ಷಣದ ಕೆಲಸವು ಜತದ್ವಿಖ್ಯಾತ ತ್ವಜ್ಞಾನಿಯಾದ ಅರಿಸ್ಟಾಟಲನ ಕಡೆಗೆ ಬಂದಿತು. ಬಂಗಾರಕ್ಕೆ ಕುಂದಣವನ್ನಿಟ್ಟ ಹಾಗಾಯಿತು. ಹದಿನಾರು ವರ್ಷದ ನವತರುಣನಾದ ಕಂದರ ಯುವರಾಜನು ಸೇನಾಧುರಂಧರನಾದ ವೀರನೂ ಉದಾತ್ತ ಪಿಚಾರದ ರಾಜಕುಮಾರನೂ ಆಗಿ, ಎಲ್ಲರ ಆದರಕ್ಕೂ ಪ್ರೀತಿಗೂ ಪಾತ್ರನಾದನು, ಫಿಲ್ಲಿಪರಾಜನ ಉಚ್ಛಯವನು ಸಹಿಸದವರಾದ ಅಥೆನ್ ಹಾಗು ಫೀ ಸಂಸ್ಥಾನಗಳವರು ಪ್ರಬಲವಾದ ಸೇನೆಯನ್ನು ಕಟ್ಟಿಕೊಂಡು ಮಾಸಿಡೋನಿಯಾದ ಮೇಲೆ ಸಾಗಿ ಬಂದಾಗ, ಹದಿನಾರು ವರುಷದ ಎಳೆಪ್ರಾಯದವನಾದ ಶಿಕಂದರ ರಾಜಕುಮಾರನು ತನ್ನ ತಂದೆಯ ಕೈ ಕೆಳಗೆ ಸೇನಾಪತಿಯಾಗಿ ಯುದ್ಧಮಾಡುತ್ತಿದ್ದನು. "ಚರೋನಿಯಾ ” ಎಂಬ ಸ್ಥಳದಲ್ಲಿ ಯುದ್ಧವು ನಡೆದಿರಲು,