ಪುಟ:ಬೆಳಗಿದ ದೀಪಗಳು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹನು

೫೭

ಶಿಕಂದರನ ಶೌರ್ಯ ಸಾಹಸಗಳಿಂದಲೇ ಶತ್ರುಗಳು ಸಂಪೂರ್ಣವಾಗಿ ಸೋತು ಹೋದರು. ಹದಿನಾರು ವರ್ಷದ ಬಾಲಕನು ಕಂಡಿರಾ! ನಮ್ಮಲ್ಲಿ ಅಂಥವನನ್ನು ಮುಲಕೀಪರೀಕ್ಷೆಗೆ ಕೂಡ ಕರಕೊಳ್ಳಲಿಕ್ಕಿಲ್ಲ ! ಹದಿನಾರು ವರ್ಷದ ಬಾಲಕನೇ ಥೀಬ್ಬ ಅಥೆನ್ಸಗಳಂಥ ಎರಡು ಬಲಾಧ್ಯವಾದ ಸಂಸ್ಥಾನಗಳ ಸಂಯುಕ್ತ ವಾದ ಸೇನೆಯನ್ನು ಸ್ವಪರಾಕ್ರಮದಿಂದ ಸೋಲಿಸಿ ಮುರಿದು ಹಾಕಿದನು.

ಗ್ರೀಕ ಜನಾಂಗದವರೆಲ್ಲರ ಬಗ್ಗು ಬಡಿದ ಬಳಿಕ ಫಿಲ್ಲಿಪ ರಾಜನು ಏಸಿಯಾಖಂಡದ (ಭೂಮಧ್ಯ ಸಮುದ್ರದಿಂದ ಸಿಂಧು ನದವ ವರೆಗಿರುವ) ಸಾರ್ವಭೌಮನಾದ ದರಾಯಸ ಬಾದಶಹನ ಮೇಲೆ ದಂಡೆತ್ತಿ ಹೋಗಬೇಕೆಂದು ವಿಚಾರಮಾಡಿ ಒಳ್ಳೆ ಸಿದ್ದತೆಯನ್ನು ಮಾಡತೊಡಗಿದನು. ಸೇನೆಯನ್ನು ಅತಿಶಯವಾಗಿ ಬೆಳಿಸಿ ತಾನೇ ನಿಂತು ಅದಕ್ಕೆ ಯುದ್ಧ ಶಿಕ್ಷಣವನ್ನು ಕೊಡುತ್ತಿದ್ದನು. ಸಾಮೋಪಚಾರದಿಂದ ಗ್ರೀಕ ಸಂಸ್ಥಾನಿಕರೆಲ್ಲರ ಸಹಾನುಭೂತಿಯನ್ನು ಗಳಿಸಿಕೊಂಡನು. ವಿಖ್ಯಾತರಾದ ಸೇನಾನಾಯಕರೊಡನೆ ಸ್ನೇಹ ಸಂಬಂಧಗಳನ್ನು ಬೆಳಿಸಿದನು. ಇದೇ ಉದ್ದೇಶದಿಂದಲೇ ನಿಲ್ಲಿಸಲು ಅಟ್ಟಾಲನೆಂಬ ಸೇನಾಪತಿಯ ಮಗಳಾದ ಕ್ಲಿಯೋಪಾತ್ರಾ ಎಂಬ ಸುಂದರಿಯನ್ನು ಮದುವೆ ಮಾಡಿ ಕೊಂಡನು. ಆದರೆ ಈ ಮದುವೆ ಮಾತ್ರ ಫಿಲ್ಲಿಪ ರಾಜನ ಇತಿಶ್ರೀಯ ಕಾರಣವಾಯಿತು. ವಿವಾಹ ಸಮಾರಂಭವು ನಡೆದಾಗ ಫಿಲ್ಲಿಸನು ತನ್ನ ಆಪ್ತರಿಷ್ಟರದೊಂದು ದೊಡ್ಡ ಬಳಗವನ್ನು ಕೂಡಿಸಿಕೊಂಡು ಮಧುಮಾನೋತ್ಸವವನ್ನು ನಡೆಸಿದ್ದನು ಆ ಸಮಯದಲ್ಲಿ ಕ್ಲಿಯೋಪಾತ್ರೆಯ ತಂದೆಯಾದ ಅಟ್ಟಾಲನು ಕಿಂಚಿತ್ ಮದಿರೋನ್ಮತ್ತನಾಗಿ ತನ್ನ ಕೈಯಲ್ಲಿಯ ಚಷಕವನ್ನು (ಪಾನಪಾತ್ರವನ್ನು) ಮೇಲಕ್ಕೆತ್ತಿ ಹಿಡಿದು ಈ ನನ್ನ ಮಗಳ ಹೊಟ್ಟೆಯಲ್ಲಿ ಫಿಲ್ಲಿಪರಾಜನ ವಂಶಾಭಿವೃದ್ಧಿ ಕರನಾದ ಸುಪುತ್ರನು ಹುಟ್ಟಲಿ !” ಎಂದು ಆಶೀರ್ವದಿಸಿ, ಚಷಕದಲ್ಲಿಯ ಮಧುರಸವನ್ನು ಸೇವಿಸಿದನು. ಆ ವಚನವನ್ನು ಕೇಳಿ ಅಲ್ಲಿಯೇ ಕುಳಿತಿದ್ದ ಶಿಕಂದರನಿಗೆ ಅಸಾಧ್ಯವಾದ ಕೋಪ ಬಂದಿತು. ಅವನು ತನ್ನ ಕೈಯಲ್ಲಿರುವ ರತ್ನಖಚಿತವಾದ ಪಾನಪಾತ್ರವನ್ನು ಅಟ್ಟಾಲನೆ ಮೋತಿಗೆ ಒಳಿತಾಗಿ ಹೇರಿ “ದುರಾತ್ಮನೆ, ಫಿಲ್ಲಿಪರಾಜನ ಔರಸಪುತ್ರನಾದ ನಾನು ಇಲ್ಲಿ ಕುಳಿತಿರಲು ನೀನೇನು