ಪುಟ:ಬೆಳಗಿದ ದೀಪಗಳು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಸಂಪೂರ್ಣ-ಕಥೆಗಳು

ಮಾತಾಡಿದೆ? ನಾನು ದಾಸೀಪುತ್ರನೆಂದು ತಿಳಿದಿರುವೆಯಾ?” ಎಂದು ಗದ್ದರಿಸಿ ಕೇಳಿದನು. ತನ್ನ ಹೊಸಮಾವನ ಅಪ್ರತಿಷ್ಠೆಯು ಹೀಗೆ ತನ್ನ ಸಮಕ್ಷದಲ್ಲಾಡದ್ದನ್ನು ಕ೦ಡು ಫಿಲ್ಲಿಪರಾಜನಿಗೆ ಅತಿಶಯವಾದ ಸಂತಾಪವಾಯಿತು. ಹಿಂದುಮುಂದು ನೋಡದೆ ಅವನು ತನ್ನ ಸಿಂಹಾಸನದಿಂದೆದ್ದು ಖಡ್ಗವನ್ನೆತ್ತಿ ಯುವರಾಜನನ್ನು ಅಲ್ಲಿಯೇ ಸಂಹರಿಸಬೇಕೆಂದು ಸಾಗಿಬರುವಷ್ಟರಲ್ಲಿ ಕಾಲು ಜಾರಿ ಧಡಮ್ಮನೆ ಬಿದ್ದು ಬಿಟ್ಟನು. ಆಗ ಶಿಕಂದರನು ತಂದೆಯ ಅಪಹಾಸಮಾಡಿ ನಕ್ಕು ನೋಡಿದಿರಾ, ಯುರೋಪದಿ೦ದ ಏಸಿಯಾದ ಮೇಲೆ ಸಾಗಿ ಹೋಗಿತಕ್ಕವನಾದ ಈ ಮನುಷ್ಯನು ತನ್ನ ಆಸನದಿಂದೆದ್ದು ಮೂರು ಹೆಜ್ಜೆ ಬರುವಷ್ಟರಲ್ಲಿ ಉರುಳಿಹೋದನು!" ಎಂದು ನುಡಿದವನೇ ನಿ೦ತಕಾಲಮೇಲೆ ತಂದೆಯ ರಾಜ್ಯವನ್ನು ಬಿಟ್ಟು ಹೊರಟಿದು ಹೋಗಿ ಇಲ್ಲೀರಿಯಾ ಸಂಸ್ಥಾನದಲ್ಲಿ ನಿಂತುಕೊಂಡನು. ಅಪಮಾನಸಂತಪ್ಪಳದ ಆಲಿಂಪಿಯಾ ರಾಣಿಯು ಕೂಡ ಗಂಡನ ರಾಜ್ಯವನ್ನು ಬಿಟ್ಟು ತನ್ನ ತಮ್ಮನ ರಾಜ್ಯಕ್ಕೆ ತೆರಳಿದಳು. ಈ ಸಂಗತಿಷದ ಸ್ವಲ್ಪ ದಿವಸಗಳಲ್ಲಿಯೇ ಪಾಸಾನಿಯನೆಂಬ ನೀಚನೊಬ್ಬನು ರಾಜಮಾರ್ಗದಲ್ಲಿ ಬರುವ ನಿಲ್ಲಿಸರಾಜನನ್ನು ಕಡಿದು ಕೊಂದುಹಾಕಿದನು. ಆ ಕೊಲೆ ಯನ್ನು ಆಲಿಂಪಿಯಾ ರಾಣಿಯೇ ಮಾಡಿಸಿದಳೆಂದು ತತ್ಕಾಲೀನರಾದ ಹಲವು ಜನ ಇತಿಹಾಸಕಾರರು ಅವಳ ಮೇಲೆ ಆರೋಪ ದೊರಿಸಿದ್ದಾರೆ. ಆದರೆ ಆ ಅನರ್ಥಕರವಾದ ಕೊಲೆಯಲ್ಲಿ ಶಿಕಂದರ ರಾಜಕುಮಾರನ ಅಂಗವು ಎಷ್ಟು ಮಾತ್ರವೂ ಇದ್ದಿಲ್ಲವೆಂಬದು ಎಲ್ಲ ಇತಿಹಾಸಕಾರರ ಏಕವಾಕ್ಯವಾದ ಅಭಿಪ್ರಾಯವು.

"ಗೂಳಿ ಬಿದ್ದ ಬಳಿಕ ಆಳಿಗೊಂದು ಕಲ್ಲು” ಎಂಬಂತೆ ಫಿಲ್ಲಿಪನ ಪಾದಾಕ್ರಾಂತರಾದ ಗ್ರೀಕ ಸಂಸ್ಥಾನಿಕರೆಲ್ಲರೂ, ದರ್ಪಹಗೆನಾದ ಆ ರಾಜನು ಆ ಸತ್ಯವನ್ನು ಹೊಂದಿದನೆಂಬ ವಾರ್ತೆಯನ್ನು ಕೇಳಿ ಸಂತೋಷದ ಉಬ್ಬಿನಿಂದ ಕೊಬ್ಬಿ, ಇನ್ನು ಮಾಸಿಡೋನಿಯಾದ ರಾಜ್ಯವನ್ನು ಮುರಿದು ಹರಗಿಬಿಡಬೇಕೆಂಬ ಹವಣಿಗೆ ಬಿದ್ದರು. ಡಿಮಾನಿಯೇ ಮುಂತಾದ ಅಥೆನ್ಸದ ವಾಚಾಲರು ಜಗಲಿ ಜಗಲಿಗಳನ್ನೇರಿಕೊಂಡು ಸ್ವದೇಶಾಭಿಮಾನೋ ತೇಜಕವಾದ ವ್ಯಾಖ್ಯಾನಗಳನ್ನು ಕೊಟ್ಟು ಫಿಲ್ಲಿಪನ ಮರಣದ ಸುಸಂಧಿ