ಪುಟ:ಬೆಳಗಿದ ದೀಪಗಳು.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C ಸಂಪೂರ್ಣ-ಕಥೆಗಳು ಬಂದು, ಥೋಸ ಇಲ್ಲೀರಿಯಾಗಳ ಜನಾಂಗಗಳನ್ನು ಒಡೆದು ಮಲೆಗೆ ಕೂಡಿಸಿ ಸೇನಾಸಮೇತನಾಗಿ ನೆಟ್ಟನೆ ಥೀಬ್ ಪ್ರಾಂತದಲ್ಲಿ ಒಳನುಗ್ಗಿ ಬ೦ವನು. ಧೂಮಕೇತುವಿನಂತೆ ಭೀಕರವಾಗಿ ಎದ್ದು ಕಾಣಿಸಿ ಬರುವ ಶಿಕಂದರನ ಧ್ವಜ ವನ್ನು ಕಾಣುತ್ತಲೆ ಥೀಬ್ಬ ದವರ ಕೈ ಕಾಲುಗಳು ತಣ್ಣಗಾದವು, ಅವರ ದೇಶ ದಲ್ಲೆಲ್ಲ ಹಾಹಾಕಾರವೆದ್ದಿತು. ಆ ಜನರ ದುರವಸೆಯನ್ನು ಕಂಡು ಶಿಕಂ ದರ ಬಾದಶಹನಿಗೆ ಕನಿಕರ ಬಂದಿತು. ಕ್ಷಮೆ ಬೇಡಿಕೊಂಡು ಆ ಜನರ ತಮ್ಮ ಮನೆಯಲ್ಲಿ ಸುಮ್ಮನೆ ಕುಳಿತರೆ ಕುಳ್ಳಿರಲೆಂದು ಅವನು ಅವರ ಮೈ ಮೇಲೇರಿ ಹೋಗದೆ ಕೆಲಹೊತ್ತು ಸುಮ್ಮನಿದ್ದನು. ಆದರೆ, ಅಥೆನ್ಸದವರು ಅವರನ್ನು ಸುಮ್ಮನಿರಗೆಡಲಿಲ್ಲ ಕೀರ್ತನೆ ಪುರಾಣಶ್ರವಣಜನ್ಯವಾದ ವೀರಾವೇಶವನ್ನಾಂತ ಡಿಮಾನಿಯೇ ಮುಂತಾ.? ವಕ್ತ್ಯೋಜಕ ರಾದ ರಾಮ ಭಟ್ಟ, ಹರಿಭಟ್ಟರು “ಥೆ: ಶ್ವಾನನಗಳನ್ನಿತ್ತು ಆ ಬಡ ಜನರ ಬಾಲ ಒಡ್ಡಮುರಿದು ಯುದ್ಧಕ್ಕೆ ನಿಲ್ಲಿಸಿದರು, ಶಿಕಂದರನಿಗೆ ಏಶಾಸನೊಡನೆ ಯುದ್ದ ಮಾಡುವ ಹವ್ಯಾಸವು. ಗ್ರೀಕ ಜನರೊಡನೆ ಆಟ ಆಡುತ್ತ ಕಾಲ ಕಳೆಯಲು ಅವನಿಗೆ ಅವಕಾಶವಿದ್ದಿಲ್ಲ. ದುದ್ರಾವತಾರವನ್ನು ತೊಟ್ಟು ಆ ಮಹಾವೀರನು ಥೀಬ್ಬದವರ ಮೇಲೆ ಹರಿಬಿದ್ದು ಒಂದೇ ಹೊಡೆತಕ್ಕೆ ಆ ಜನಾಂಗದ ಸೇನೆಯನ್ನು ಸಂಪೂರ್ಣವಾಗಿ ಮುರಿಬಡಿದು, ದಯಾ~ ಕ್ಷಮೆಗಳ ನ್ನೆಷ್ಟು ಮಾತ್ರವೂ ತೋರಿಸದೆ ಆ ದೇಶದಲ್ಲಿರುವ ಗಂಡುಪ್ರಾಣಿಯನ್ನೊಂದೂ ಉಳಿಸದಂತೆ ಕಡಿದುಹಾಕಿಸಿದನು ವಾಚಕರೇ, ಇಓ ಆನೀತಿಯೊಂದು ಹೇಳಿ ಶಿಕಂದರನನ್ನು ನಿಂದಿಸಬೇಡಿರಿ, ರಾಜಕಾರಣಏಶೇಷಗಳಲ್ಲಿ ಹೀಗೆ ಮಾಡಲೇ ಬೇಕಾಗುತ್ತದೆ. ಥೀಬ್ಬದವರು ದುರ್ಬುದ್ಧಿ ಪ್ರೇರಿತರಿ >ಗಿ ಮಾಸಿಡೋನಿಯಾದ ಮೇಲೆ ಸಾಗಿಬರುವ ಆಲೋಚನೆಯನ್ನು ಮಾಡಿದ್ದೊತ್ತಟ್ಟಿಗಿ:ಲಿ, ಶಿಕಂದ ರನು ಏಶಿಯಾದ ಮೇಲೆ ಸಾಗಿ ಹೋದಾಗ ಈ ದುಷ್ಟರು ಅವನ ಪಶ್ಚಾತ್ತ ದಲ್ಲಿ ವಾಸಿಡೋನಿಯಾಕ್ಕೆ ದಾಳಿಯನ್ನು ತರದೆ ಬಿಡುತ್ತಿದ್ದಿಲ್ಲವಷ್ಟೆ ? ಥೀಬ್ಬ ದವರಿಗಾದ ಪ್ರಾಯಶ್ಚಿತ್ತವನ್ನು ಕಂಡು ಉಳಿದ ಗ್ರೀಕ ಜನಾಂಗದವರೆಲ್ಲ ಹಲ್ಲು ಮುರಿದ ಹಾವುಗಳಂತೆ ರಜ್ಜು ಪ್ರಾಯರಾಗಿ ಬಿದ್ದು ಕೊಂಡರು. ಇಷ್ಟೆಲ್ಲ ಕುಚೇಷ್ಟೆಯನ್ನು ಮಾಡಿದ ಅಥೆನ್ಸದವರೇ ಅಭಿಮಾನಶೂನ್ಯರಾಗಿ ಶಿಕಂದರ ನಿಗೆ ಶರಣಾಗತರಾಗಿ ಬಂದು, 'ಪ್ರಭುವೆ, ನೀನೇ ಇಂದ್ರ, ನೀನೇ ಚಂದ್ರ'