ಪುಟ:ಬೆಳಗಿದ ದೀಪಗಳು.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೬೧

ಎಂದು ಹೊಗಳಿದರು.

ಹೀಗೆ ಗೃಹಕಲಹಗಳ ಜಂಜಡವೆಲ್ಲ ಬಯಲಾದ ಬಳಿಕ, ಪ್ರತಾಪಶಾಲಿಯಾದ ರಘುರಾಜನಂತಿರುವ ಶಿಕಂದರ ರಾಜನು ವಿಶ್ವಜಿತ್ತನ೦ಥದೇ ಒಂದು ದೊಡ್ಡ ಆಧ್ವರವನ್ನು ಮಾಡಿ, ಯೋಗಿ ತತ್ವಜ್ಞಾನಿಗಳನ್ನೂ, ಕವಿಜನ ಪಂಡಿತರನ್ನೂ, ಅತಿರಥ ಮಹಾರಥಿಗಳನ್ನೂ, ರಾಜಪುತ್ರ ಸರದಾರರನ್ನೂ ಬಹುಮಾನ ಪಾರಿತೋಷಕಾದಿಗಳಿಂದ ಸಂತೋಷಗೊಳಿಸಿದನು. ಆ ಧನಸಂತರ್ಪಣದಲ್ಲಿ ಶಿಕ೦ದರ ಮಹಾರಾಜನ ಭಾಂಡಾರದಲ್ಲಿದ್ದ ಮಣಿಮೌಕ್ತಿಕ ಧನಕನ ಕಾದಿಗಳ ಅಪರಿಮಿತವಾದ ರಾಶಿಗಳೆಲ್ಲ ನಿಃಶೇಷವಾಗಿ ಸವೆದುಹೋದವು. ಅವನ್ನು ಕಂಡು ಪರ್ದಿಕನೆಂಬ ಕೋಶಾಧಿಪತಿಯು ರಾಜನನ್ನು ಕುರಿತು "ಮಹಾರಾಜ, ಹೀಗೆ ಇದ್ದ ಸಂಪತ್ತೆಲ್ಲ ತೊಳೆದುಹೋದ ಬಳಿಕ ತಮ್ಮಗೇನು ಉಳಿಯುವದು? ” ಎಂದು ಕೇಳಲಾಗಿ, ಶಿಕಂದರನು ಆತ್ಮತುಷ್ಟಿಯಿಂದ ನಕ್ಕು "ಯಾಕೆ ಕೋಶಾಧಿಪರೆ, ಮುಂದಾಗುವ ಗಳಿಕೆಯೆಲ್ಲ ನನ್ನದೇ ಅಲ್ಲವೆ?” ಎಂದು ಕೇಳಿದನು.

ಬಳಿಕ ಜಗಜ್ಜಿಗೀಷುವಾದ ರಾಜನು ತನ್ನ ರಾಜ್ಯ ರಕ್ಷಣದ ಭಾರವನ್ನು ಅಂತ್ಯ ಪೇತರನೆಂಬ ಕಡುಗಲಿಯಾದ ಸೇನಾಪತಿಯೊಬ್ಬನ ಮೇಲೆ ಹೊರಿಸಿ ತಾನು ಅಪರಿಮಿತವಾದ ಸೇನೆಯನ್ನು ಕಟ್ಟಿಕೊಂಡು ಪರ್ಶಿಯಾದ ಮಾರ್ಗ ಹಿಡಿದು ನಡೆದನು (ಕ್ರಿ. ಪೂ. ೩೩೪). ವಿಜಯೋತ್ಸುಕವಾದ ಅವನ ಸೇನೆಯ ಅವನೂ ಭರದಿಂದ ಪಯಣದ ಮೇಲೆ ಪಯಣವನ್ನು ಮಾಡುತ್ತೆ ಹದಿನಾರೇ ದಿವಸಗಳಲ್ಲಿ ಮಾಸಿಡೋನಿಯಾದಿಂದ ಗ್ಯಾಲಿಪೋಲಿ ದ್ವೀಪಕಲ್ಪದಲ್ಲಿರುವ ಸೆಸ್ಟಾಸ ಎಂಬ ಪಟ್ಟಣಕ್ಕೆ ಬಂದು ಬಿಟ್ಟರು. ಆ ಪಟ್ಟಣದ ಸಮೀಪಲ್ಲಿಯೇ, ಯುರೋಪ, ಏಶಿಯಾಖಂಡಗಳ ಸೀಮೆಯಾಗಿದ್ದ ಹಲೆಸ್ಪಾಂಟವೆಂಬ ಸಾಮುದ್ರಮುನಿಯಿರುವದು. ಧರ್ಮಾರ್ಥ ಕಾಮಮೋಕ್ಷಾದಿಗಳನ್ನು ಸಾಧಿಸಿಕೊಳ್ಳಲಪೇಕ್ಷಿಸುವ ಜನರು ಮಹಾತೀರ್ಥಗಳ ಸನ್ನಿಧಾನದಲ್ಲಿ ಪಾರ್ವಣಶ್ರಾದ್ಧಗಳನ್ನು ಮಾಡುತ್ತಿರುವಂತೆ, ಶಿಕಂದರ ರಾಜನಾದರೂ ತಾನು ಕೈಕೊಂಡಿರುವ ಮಹತ್ಕಾರ್ಯದ ಸಿಧ್ಯರ್ಥವಾಗಿ ಹೆಲೆಸ್ಪಾಂಟನೆಂಬ ಆ ತೀರ್ಥರಾಜನ ಸನ್ನಿಧಾನದಲ್ಲಿ ಪಾರ್ವಣಶ್ರಾದ್ಧವನ್ನು ಮಾಡಿ, ರತ್ನಖಚಿತವಾದ ಸುವರ್ಣ ಕಲಶದಲ್ಲಿ ತುಂಬಿಟ್ಟ ಮದಿರಾ ರಸದಿಂದ