ಪುಟ:ಬೆಳಗಿದ ದೀಪಗಳು.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೬೩

ಪ್ರಬಲವಾದ ಶತ್ರುಸೇನೆಯು ತನ್ನ ರಾಜ್ಯದಲ್ಲಿ ಬಂದಿಳಿಯುವ ವರೆಗೆ ದರಾಯಸ ರಾಜನ ಅಧಿಕಾರಿಗಳು ನಿಶ್ಚಿಂತರಾಗಿ ಕುಳಿತಿರುವ ಪ್ರಮಾದವನ್ನು ಕಂಡು, ನನಗಿನ್ನು ಅಪಜಯವೇ ಇಲ್ಲವೆಂದು ಖಂಡಿತವಾಗಿ ತಿಳಿದು ಶಿಕಂದರ ರಾಜನು ನಿರ್ಭಿತನಾಗಿ ಒಳದೇಶದಲ್ಲಿ ಜಾಗ್ರತೆಯಿಂದ ಪ್ರವೇಶ ಮಾಡಲಾರಂಭಿಸಿದನು. ಹೇಳದೆ ಕೇಳದೆ ತಮ್ಮ ದೇಶದಲ್ಲಿ ಆಗಂತುಕನಾಗಿ ಶಿಕಂದರನು ಸೇನೆಯನ್ನು ಕಟ್ಟಿಕೊಂಡು ಬಂದಿರುವನೆಂಬ ವಾರ್ತೆಯನ್ನು ಕೇಳಿ, ಲಿಡಿಯಾ ಆಯೋನಿಯಾ ಎಂಬ ಪ್ರಾಂತಗಳ ಕ್ಷತ್ರಪರು [ದರಾಮಸನ ಸುಭೇದಾರರು] ಎಚ್ಚತ್ತವರಾಗಿ ಶಿಕಂದರನ ಮಾರ್ಗನಿರೋಧ ಮಾಡಬೇಕೆಂದು ಸೇನೆಯನ್ನು ಕಟ್ಟಿಕೊಂಡು ಗ್ರಾನಿಕಾ ಎಂಬ ಹೊಳೆಯ ದಂಡೆಯ ಮೇಲಿರುವ ಝೇಲೇಯವೆಂಬ ಗ್ರಾಮದ ಸಮಾಜದಲ್ಲಿ ನಿಂತುಕೊಂಡಿದ್ದರು. ಅಲ್ಲಿ ಗ್ರಾನಿಕಾ ನದಿಯು ಕಾಲೊಳೆಯಾಗಿದ್ದಿಲ್ಲ. ಒತ್ತಟ್ಟಿಗೆ ಎದೆಮಟ, ಒಟ್ಟಿಗೆ ಕುತ್ತಿಗೆಮಟ, ಮತ್ತೊಟ್ಟಿಗೆ ಈಸಿಗೆಯಗಿರುವ ಆ ಹೊಳೆಯ ನೀರು ಒಳ್ಳೆ ಸೆಳವಿನಿಂದ ಹರಿಯುತ್ತಿತ್ತು. ಆಚೆಯ ದಂಡೆಯ ಮೇಲೆಯೇ ಶತ್ರುಸೇನೆಯ ಶಿಬಿರವು. ಅ೦ತಿರುವ ಪರಿಸ್ಥಿತಿಯನ್ನು ಕಂಡು ಶಿಕಂದರನ ಸೇನಾಪತಿಯಾದ ಪಾರ್ಮೆನಿಯೋನೆಂಬವನು ರಾಜನಿಗೆ ಅಂದದ್ದು “ಪ್ರಭುಗಳೆ, ಹೊಳೆ ದಾಟುವದನ್ನು ನಾಳಿಗೆ ನೋಡೋಣ; ಇದು ಹೊತ್ತಲ್ಲ.” ಆ ಮಾತು ಕೇಳಿ ರಾಜನು ನಕ್ಕು "ಏನು ಹೇಳುವಿರಿ ನಾಯಕರೆ ? ಸಮುದ್ರವನ್ನು ಸಹಜವಾಗಿ ಉಲ್ಲಂಘಿಸಿ ಬಂದವರಾದ ನಮಗೆ ಈ ಕ್ಷುದ್ರವಾದ ನದಿಯು ದುಸ್ತರವಾಯಿತೆ?" ಎಂದು ನುಡಿದು "ಭಟರೆ, ನೋಡುವಿರೇನು? ಶುಭಸ್ಯ ಶೀಘ್ರಂ" ಎಂದು ಸೈನ್ಯದವರನ್ನು ಹುರಿದುಂಬಿಸಿ ನಿಂತಕಾಲ ಮೇಲೆ ರಾವುತರ ಪಡೆಯನ್ನು ಹೊಳೆಗೆಡವಿದನು. ರಾವುತರು ನಡುಹೊಳೆಗೆ ಬಂದು ಅಲ್ಲಿ ಆಳವಾಗಿದ್ದ ನೀರಿಗೆ ಹೆದು ಹಿಂಜರಿಯಲಾರಂಭಿಸಿದರು. ಶಿಕಂದರ ರಾಜನು ತನ್ನ ಕುದುರೆಯನ್ನು ಆರ್ಭಟೆಯಿಂದ ಓಡಿಸಿಕೊಂಡು ಬಂದು 'ಧೈರ್ಯಂ ಸರ್ವತ್ರ ಸಾಧಕಂ' ಎಂದವನೇ ನೀರಿನ ಸೆಳವು ಈಸಿಗೆಗಳನ್ನು ಲಕ್ಷಿಸದೆ, ಹೊಳೆ ಬಿದ್ದು ಸಾಹಸದಿಂದ ದಾಟಿ, ಆಚೆಯ ದಂಡೆಗೆ ಹೋದನು. ರಾಜನ ಸಾಹಸವನ್ನು ಕಂಡು, ಪ್ರೋತ್ಸಾಹಿತರಾದ ರಾವುತರೆಲ್ಲರೂ ಧರ್ಮಜಯವೆಂದವರೇ ಆ ತಮ್ಮ ವೀರಾಗ್ರೇಸರನ ಬೆನ್ನು ಬಿಡದೆ