ಪುಟ:ಬೆಳಗಿದ ದೀಪಗಳು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಸಂಪೂರ್ಣ-ಕಥೆಗಳು

"ಹುರ್ ! ಹುಯ್ !" ಎಂದು ಆರ್ಭಟಿಯಿಂದ ಕೂಗಾಡುತ್ತೆ ಹೊಳೆಯನ್ನು ದಾಟಿಯೇ ಬಿಟ್ಟರು. ಇವರು ಹೊಳೆ ದಾಟುವಷ್ಟರಲ್ಲಿಯೇ ಶತ್ರು ಸೇನೆಯು ಅಲ್ಲಿಗೆ ಬಂದಿತು. ಕೂಡಲೆ ಭಯಂಕರವಾದ ಕದನವೆಸಗಿತು. ಈ ಸಮಯದಲ್ಲಿ ತನ್ನ ಸೇನೆಯು ಹಿಂಜರಿದರೆ ಘಾತವೇ ಎಂದು ಕಂಡು ಕೊಂಡವನಾದ ಶಿಕಂದರ ರಾಜನು, ಹಿಂದೆ ಮುಂದೆ ನೋಡದೆ ಶತ್ರು ಸೇನೆಯ ಮಧ್ಯದಲ್ಲಿ ಹೊತ್ತು ವೀರಗರ್ಜನೆಯನ್ನು ಮಾಡುತ್ತೆ ಖಡ್ಗವನ್ನೆತ್ತಿ ಜಾರ-ಗಡಳದ ಕೊಲೆಯನ್ನೆಬ್ಬಿಸಿದನು. ಅವನಿಗೆ ಜೀವದ ಅಂಜಿಕೆಯಲ್ಲಿ! ರಾಜನ ಸಾಹಸವನ್ನು ಕಂಡು ಸೈನ್ಯದವರಲ್ಲೆಲ್ಲ ಮಿತಿಮೀರಿದ ಸ್ಫೂರ್ತಿ ತುಂಬಿತು. ಆ ಭಟರ ಶಸ್ತ್ರಗಳ ಭಯಂಕರವಾದ ಪ್ರಹಾರಗಳಿಗೆ ಶತ್ರು ಸೇನೆಯು ಈಡಾಗಲಿಲ್ಲ. ಹೊಡೆತವನ್ನು ತಾಳಲಾರದೆ ಅವರು ಹಿಂದಿರುಗಿ ಓಡಲಾರಂಭಿಸಿದರು. ಅಲ್ಲಿಂದೇನು ಕೇಳುವದು? ಮಾಸಿಡೋನಿಯಾದ ವೀರರು ಉದ್ರಿಕ್ತರಾಗಿ ಶತ್ರುಗಳ ಬೆನ್ನಟ್ಟಿ ಹೋಗಿ ಅವರನ್ನು ಜಡೆಜಡೆದು ಕಡಿದರು. ಯುದ್ಧವು ಮುಗಿಯಿತು. ವಿಜಯಲಕ್ಷ್ಮಿಯು ಬಹು ಪ್ರಿತಳಾಗಿ ಶಿಕಂದರ ಮಹಾರಾಜನ ಕೊರಳಿಗೆ ಮಾಲೆ ಹಾಕಿದಳು.

ಜಯವು ವಿಜಯಿಗೆ ಸ್ಫೂರ್ತಿಯನ್ನೀಯುತ್ತಿತ್ತು. ಅಪಜಯವು ಶತ್ರುಗಳ ಸತ್ವವನ್ನೇ ಹರಣಮಾಡಿಕೊಂಡಿತು. ರಣರಂಗದಲ್ಲಿ ನಿಂತು ಶಸ್ತ್ರಾಸ್ತ್ರಗಳ ದರ್ಶಿಸಹವಾದ ಪ್ರಕಾರಗಳನ್ನು ಹೇಗಾದರೂ ಸಹಿಸಿಕೊಳ್ಳಬಹುದಾದರೂ, ಅಪಜಯದ ವಾರ್ತಾಮಾತ್ರದಿಂದಲೇ ಪರಬಲದ ತೇಜಸ್ಸೆಲ್ಲ ಅಡಗಿಹೋಗಿ ಅದು ಇದ್ದರೂ ಸತ್ತಂತೆಯೆ ಆಗುವದು. ವಿಜಯಿಯಾದ ಶಿಕಂದರನು ಮೇಲೇಯದಿಂದ ಮುಂದಕ್ಕೆ ಸಾಗಿಹೋಗಿ ಸಾರ್ದಿ ಎಂಬ ಕೋಟೆಗೆ ಸಾಗಿಬರುವೆನೆಂಬ ಸುದ್ದಿಯನ್ನು ಕೇಳಿದ ಮಾತ್ರದಿಂದಲೆ ಅಲ್ಲಿದ್ದ ಶತ್ರು ಸೇನೆಯು ಎದೆಯೊಡಕೊಂಡು ಕೋಟೆಯನ್ನು ಬಿಟ್ಟು ಓಡಿ ಹೋಗಿತ್ತು. ಮತ್ತೆ ಆ ಮಹಾವೀರರು ದಕ್ಷಿಣಕ್ಕೆ ಸಾಗಿ ಇಫೇಜವೆಂಬ ಕೋಟೆಗೆ ಬರುವಷ್ಟರಲ್ಲಿಯೇ ಅದೂ ಅವನ ಹಸ್ತಗತವಾಗಿಹೋಯಿತು. ಹೀಗೆ ಏಜಿಯನ್ ಸಮುದ್ರದಂಡೆಯಲ್ಲಿರುವ ಎಲ್ಲ ಪಟ್ಟಣಗಳು ಕೈಸನ್ನೆ ಮಾಡಿ ಶಿಕಂದರರಾಜನನ್ನು ಕರಕೊಂಡಂತೆ ಮಾಡಿದವು. "ಇನ್ನ೦ತೂ ನಮಗೆ ಶತ್ರುಗಳ ಹಡಗುಪಡೆಯ ಭೀತಿಯು ಇಲ್ಲದಾಯಿತೇ!” ಎಂದು ಉದ್ಗಾರ