ಪುಟ:ಬೆಳಗಿದ ದೀಪಗಳು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೬೫

ತೆಗೆದವನೇ ಶಿಕಂದರನು ಪೂರ್ವೋತ್ತರವಾದ ದಿಶೆಯಿಂದ ತುರ್ಕಸ್ಥಾನದ ಹೊಟ್ಟೆ ಹೊಗಲಾರಂಭಿಸಿದನು. ಅಲ್ಲಿಯಾದರೂ ಯುದ್ಧವೆಲ್ಲಿ? ನಗರ ನಗರಿಗಳ ನಿವಾಸಿಗಳು ಊದಿಸುತ್ತ ಬಾರಿಸುತ್ತ ಶಿಕಂದರನನ್ನು ಎದಿರ್ಗೊಂಡ ತಮೂರಿಗೆ ಕರಕೊಂಡು ಹೋಗಲಾರಂಭಿಸಿದರು. ಒಂದು ಪಟ್ಟಣದರಂತೂ ರತ್ನಖಚಿತವಾದ ಕಿರೀಟವನ್ನು ಮಾಡಿಸಿ ಶಿಕಂದರರಾಜನ ಉತ್ತಮಾಂಗವನ್ನು ಅಲಂಕರಿಸಿದರು. ಏಸಿಯಾ ಖಂಡದ ನಿವಾಸಿಗಳವರು! ತಮ್ಮ ರಾಜನಾರೋ, ತಾವು ಸನ್ಮಾನವನ್ನು ತೋರಿಸುತ್ತಿರುವದಾಗೆ! ಅಭಿಮಾನವೆಲ್ಲಿ?

ಚಳಿಗಾಲವು ಬಂದಿತು. ದರಾಯಸನ ಪ್ರಜರಿಂದಂತೂ ಶಿಕಂದರನಿಗೆ ಎಷ್ಟು ಮಾತ್ರವೂ ತೊಂದರೆಯಿರಲಿಲ್ಲ; ಆದರವೇ ಕಂಡುಬಂದಿತು. ಇನ್ನು ಭಯವೆಂದರೆ ಶತ್ರುಸೇನೆಯ ಭಯವೇ ಭಯವು. ಆದರೂ ಚಳಿಗಾಲವು ನೀಗಿ ಹೋಗುವವರೆಗೆ ದರಾಯಸನು ಯುದ್ಧದ ಉಸಾಬರಿಯನ ಮಾಡುವಂತಿಲ್ಲ. ನೆಲ ಮೆತ್ತಗೆ ಕಂಡರೆ ಮೊಳಕೈಯಿಂದ ಅಗಿಯಬಹುದಂತೆ. ಶಿಕಂದರನು ತನ್ನ ಸೇನೆಯಲ್ಲಿರುವ ವಿವಾಹಿತರಾದ , ಭಟರೆಲ್ಲರು ಊರಿಗೆ ಹೋಗಿ ತಮ್ಮ ತಮ್ಮ ಹೆಂಡಿರ ಮೊರೆ ನೋಡಿ ಬರಲೆಂದು ಅವರೆಲ್ಲರಿಗೂ ಅಪ್ಪಣೆ ಕೊಟ್ಟು, ಉಳಿದಷ್ಟು ಸೇನೆಯೊಡನೆಯೇ ಮುಂದೆ ಮುಂದೆ ಹೆಜ್ಜೆಯನ್ನಿಕುತ್ತ ತುರ್ಕಸ್ಥಾನದ ನಡುಗರ್ಭದ ಕಡೆಗೆ ನಡೆದನು. ವಸಂತ ಕಾಲವು ಸಮೀಪಿಸುವಷ್ಟರಲ್ಲಿ ಅವರು ಫ್ರಿಜಿಯಾ ಎಂಬ ಪ್ರಾಂತದಲ್ಲಿ ಸೇರಿ ಅಲ್ಲಿಯ ಪ್ರಸಿದ್ಧವಾದ ಗಾರ್ಡಿಯಾ ಎಂಬ ಪಟ್ಟ ಣವನ್ನು ಹಿಡಕೊಂಡರು. ಆ ಪ್ರಾಚೀನವಾದ ಪಟ್ಟಣದಲ್ಲಿ ಪೂರ್ವಕಾಲದ ಪುಣ್ಯಾತ್ಮನಾದ ಒಬ್ಬ ರಾಜನ ರಥವಿದ್ದಿತು. ದೇವತಾಪುರುಷನ ಪವಿತ್ರವಾದ ರಥವೇ ಅದೆಂದು ಭಾವಿಸಿ ಅಲ್ಲಿಯ ಜನರು ಅದನೆಂದು ಮಂದಿರದಲ್ಲಿರಿಸಿ ಪೂಜಿಸುತ್ತಿದ್ದರು. ಆ ಬಂಡಿಯ ಉದ್ದಿಗೆಗೆ ನೊಗವನ್ನು ಹಗ್ಗದಿಂದ ಕಟ್ಟಿ, ಕಟ್ಟಿದ ಸ್ಥಳದಲ್ಲಿ ಬ್ರಹ್ಮಗಂಟಿನಂಥ ಗಂಟು ಹಾಕಿ, ಹಗ್ಗದ ತುದಿಯನ್ನು ಅಡಗಿಸಿಬಿಟ್ಟಿದ್ದರು. ಆ ಗಂಟು ಉಚ್ಚುವರಿ ಉಚ್ಚುವಂತೆಯೇ ಇದ್ದಿಲ್ಲ.

ಗ್ರಂಥಿಛೇದನವನ್ನು ಮಾಡಿದ ಜಾಣನು ಸಮಗ್ರವಾದ ಆಸಿಯಾ ಖಂಡದ ಸಾರ್ವಭೌಮನಾಗತಕ್ಕವನೆಂಬದೊಂದು ಆಖ್ಯಾಯಿಕಯು ಇತ್ತು. ಜನರನ್ನು ಮರುಳುಗೊಳಿಸುವ