ಪುಟ:ಬೆಳಗಿದ ದೀಪಗಳು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಸಂಪೂರ್ಣ-ಕಥೆಗಳು

ಸಮಯವಿದೇ ಎಂದು ತಿಳಿದು, ಶಿಕಂದರನು ನೆಟ್ಟಗೆ ರಥದ ಬಳಿಗೆ ಹೋಗಿ ತನ್ನ ಖಡ್ಗದಿಂದ ಆ ಗ್ರ೦ಥಿಯನ್ನು ಕಚ್ಚನೆ ಕಡಿದು ನೊಗವನ್ನು ಕಡೆಗೆ ಚಿಮ್ಮಿ ಬಿಟ್ಟನು. ಆ ಗಂಟನ್ನು ಉಚ್ಚಲಿ, ಕಡಿದುಹಾಕಲಿ, ಗ್ರಂಥಿಭೇದನವಾದದ್ದಂತೂ ಸರಿಯೇ. ಇಲ್ಲವೆಂದು ಹೇಳಲು ಆಸ್ಥಾನಪಂಡಿತರಿಗೆ ಹಳೆ ಹೊಸ ವ್ಯಾಕರಣಗಳ ಪ್ರಕರಣಗಳಲ್ಲಿ ಸಾಧಾರಗಳಲ್ಲಿಯೂ ಸಿಗದ್ದಕ್ಕಾಗಿ ಶಿಕಂದರನು ಗ್ರಂಥಿಛೇದನವನ್ನು ಮಾಡಿದನೆಂದು ಅವರು ಅನಿರ್ವಾಹಕ್ಕಾಗಿ ಒಪ್ಪಿಕೊಂಡರು. ಅಹಲ್ಯೆಯಯ ಮದುವೆಯ ಕಾಲಕ್ಕೆ ಗೌತಮನು ಈಯುತಿರುವ ಆಕಳಿಗೆ ಪ್ರದಕ್ಷಿಣೆಯನ್ನು ಹಾಕಿ ಭೂಪ್ರದಕ್ಷಿಣೆ ಮಾಡಿದ ಶ್ರೇಯಸ್ಸು ಪಡೆದ ಯುಕ್ತಿಯಂಥ ಯುಕ್ತಿಯನ್ನೆ ಶಿಕಂದರನು ಮಾಡಿದನು. ಇಂಥ ಚಮತ್ಕಾರವಾದ ಯುಕ್ತಿಗೆ ಇಂಗ್ಲಿಶ್ ಭಾಷೆಯಲ್ಲಿ ಗಾರ್ಡೀಯ ಗ್ರಂಥಿ ಛೇದನ (To cut the Gordian kitot ) ಎಂದು ಹೇಳುತ್ತಾರೆ. ಹೇಗೇ ಆಗಲಿ, ಆ ಗ್ರಲಥಿಛೇದನಕ್ಕಾಗಿ ಶಿಕಂದರನೇ ಮುಂದಾಗತಕ್ಕ ಚಕ್ರವರ್ತಿಯೆಂದು ಗಾರ್ಡಿಯಾ ಗ್ರಾಮದ ಸಾಧು ಸಂತರು ನುಡಿದರು. ಅವನು ಮಾಡಿದ ಗ್ರಂಥಿಭೇದನವು ಯಥೋಕ್ತವಾಗಲಿಲ್ಲವೆಂದು ಕೆಲವರು ಅಭಿಪ್ರಾಯಪಟ್ಟರೂ, ಶಿಕಂದರನು ಆ ಕೆಲಸವನ್ನು ಇನ್ನೊಬ್ಬರಿಗೆ ಉಳಿಸಲಿಲ್ಲವಾದ್ದರಿಂದ, [ಗ್ರಂಥಿಯೇ ಕಡಿದು ಹೋದ ಬಳಿಕ ಉಚ್ಚುವದಿನ್ನೇನು?] ಅವನೇ ಸಾರ್ವಭೌಮನೆಂದು ಆ ಜನರಾದರೂ ಒಪ್ಪಿಕೊಂಡರು. ಅರ್ಥಾತ್ ಆ ಪ್ರಾಂತದಲ್ಲ ದರಾಯಸನಿಗಿಂತಲೂ ಭಾವೀ ಸಾರ್ವಭೌಮನಾದ ಶಿಕಂದರನಿಗೆಯೇ ಹೆಚ್ಚಿನ ಮಾನಮರ್ಯಾದೆಗಳು ನಡೆದವು. ಸಂತತಿಯನ್ನು ಬಯಸಿದ ಸತಿಯರ ಸಮಾಧಾನಕ್ಕಾಗಿ, ಮನೆಗೆ ಹೋದ ಭಟರ ಮಾರ್ಗಪ್ರತೀಕ್ಷೆಗಾಗಿ ರಾಜನು ಗಾರ್ಡಿಯಾ ಪಟ್ಟಣದಲ್ಲಿಯೇ ಕೆಲಕಾಲ ತಳ ಊರಿಕೊಂಡು ಕುಳಿತನು.

ಆ ಭಟರು ಮರಳಿ ಬರುವಾಗ ತಮ್ಮೊಡನೆ ಇನ್ನೂ ಅನೇಕ ಸಹಸ್ರ ಸಂಖ್ಯಾತರಾದ ವೀರರನ್ನು ಕಟ್ಟಿಕೊಂಡು ರಾಜನ ಸನ್ನಿಧಾನಕ್ಕೆ ಬಂದ ಕೂಡಲೆ, ಮತ್ತೆ ಹೊಸ ಮಾರ್ಗಕ್ರಮಣಕ್ಕೆ ಪ್ರಾರಂಭವಾಯಿತು. ಆಪ್ರತಿ ರಥನಾದ ಶಿಕಂದರ ಮಹಾವೀರನು ದಿನಕ್ಕೊಂದು ಹೊಸ ಪ್ರದೇಶವನ್ನು ಗೆದ್ದು ಕೊಳ್ಳುತ್ತೆ ಪೂರ್ವಾಭಿಮುಖವಾಗಿ ಸಾಗಿಹೋಗಿ, ತುರ್ಕಸ್ಥಾನದ