ಪುಟ:ಬೆಳಗಿದ ದೀಪಗಳು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೬೭

ಕೇಂದ್ರ ಸ್ಥಾನವಾದ ಅಂಕಿರಾ ಎಂಬ ನಗರಿಯನ್ನು ಆಕ್ರಮಿಸಿಕೊಂಡನು. ಗೆದ್ದ ಪ್ರಾಂತಗಳನ್ನೆಲ್ಲ ನುಂಗಿ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ತೇಗಿ ಸಮಾಧಾನವನ್ನು ತಳೆದ ಬಳಿಕ ಶಿಕಂದರನು ಮತ್ತೆ ದಕ್ಷಿಣಾಭಿಮುಖಸಾಗಿ ಹೊರಟು, ಅಬಾಧಿತನಾಗಿ ಸಿಲೀಸಿಯಾ ಎಂಬ ಪ್ರಾಂತವನ್ನು ಹೊಕ್ಕನು. ವೃಷಾಚಲ (ಟಾರಸ್)ವೆಂಬ ಪರ್ವತವನ್ನಿಳಿದು ಕೆಳಗಿನ ಮರುಭೂಮಿಯಲ್ಲಿ ಬಂದ ಕೂಡಲೆ, ಶಿಕಂದರನಿಗೆ ದೂಷಿತವಾದ ಜ್ವರದ ಭಾವನೆಯಾಗಿದ್ದರೆ ತಾರುಣ್ಯದ ಮದದಲ್ಲಿ ಅವನು ಅಲ್ಲಿರುವ ಕಾಯದನುವೆಂಬ ನದಿಯ ತಣ್ಣಗಿನ ನೀರಲ್ಲಿ ಹಾಕಿಕೊಂಡು ಈಜಾಡಿದ್ದರಿಂದ ಅವನಿಗೆ ಅಸಾಧ್ಯವಾದ ಜ್ವರ ಬಂದಿತು. ರಾಜನು ಬದುಕುವನೋ ಇಲ್ಲವೋ ಎಂಬ ದೊಡ್ಡ ಚಿ೦ತೆ ! ಪರಿವಾರದಲ್ಲಿರುವ ಚಿಕಿತ್ಸಕನಾದ ವೈದ್ಯನು ಶಿಕಂದರನಿಗೆ ಒಳ್ಳೇ ನಿದಾನ ಪೂರ್ವಕವಾಗಿ ಔಷಧೋಪಚಾರಗಳನ್ನು ನಡಿಸಿರಲು, ಕುಚೋದ್ಯಗಾರನೊಬ್ಬನು "ವೈದ್ಯನು ದರಾಯಸ ಬಾದಶಹನ ಸಂಚಿನಲ್ಲಿ ಸೇರಿ ರಾಜರಿಗೆ ವಿಷ ಪ್ರಯೋಗವನ್ನು ಈ ದಿವಸ ಮಾಡತಕ್ಕವನಿದ್ದಾನೆ” ಎಂದು ಪತ್ರ ಬರೆದಿದ್ದನ್ನು. ಆ ಪತ್ರಕ್ಕೆ ಲೇಖಕನ ಸಹಿಸೂತ್ತಾದಿಗಳಿದ್ದಿಲ್ಲ. ಶಿಕಂದರನಿಗೆ ಆ ಸತ್ಯದ ಆಶಯದಲ್ಲಿ ವಿಶ್ವಾಸವಾಗಲಿಲ್ಲ. ಕಷಾಯದ ಬಟ್ಟಲವನ್ನು ವೈದ್ಯನು ತಂದು ಕೊಡುತಲೆ ರಾಜನು ಅದನ್ನು ತನ್ನ ಬಾಯಿಗೆ ಹಚ್ಚಿ, ವೈದ್ಯನ ಮುಂದೆ ಆ ಪತ್ರವನ್ನು ಚೆಲ್ಲಿ ಕೊಟ್ಟನು. ಆ ಭಿಷಗ್ವರ್ಯನು ಅತ್ತ ಆ ಪತ್ರವನ್ನು ಓದುವಷ್ಟರಲ್ಲಿ ಇತ್ತ ಆ ನೃಪತ್ರೆನು ಕಷಾಯವನ್ನು ಕುಡಿದು ಬಟ್ಟಲನನ್ನು ಡಬ್ಬ ಹಾಕಿದನು. ರಾಜನ ಸವಿಶ್ವಾಸ ಕೃತಿಯನ್ನು ಕಂಡು ವೈದ್ಯನ ಕಣ್ಣುಗಳಲ್ಲಿ ಆನಂದಾಶ್ರುಗಳುದುರಿದವು. ರಾಜನಾದರೂ ಪ್ರಸನ್ನ ವದನನಾಗಿ ನಕ್ಕನು. ದೇವರು ಆ ವೈದ್ಯ ರೋಗಿಗಳ ಗುಣಕ್ಕೆ ಮೆಚ್ಚಿ, ಬೇಗನೆ ವ್ಯಾಧಿಯ ಪರಿಹಾರವನ್ನು ಮಾಡಿದನು. ಅಲ್ಲಿಂದವನು ಮುಂದಕ್ಕೆ ಸಾಗುವಷ್ಟರಲ್ಲಿ, ದರಾಯಸನು ದೊಡ್ಡ ಸೇನೆಯೊಂದಿಗೆ ಶಿಕಂದರನಿಗೆದಿರುಗಿ ಬರುತ್ತಿರುವನೆಂಬ ವಾರ್ತೆ ಬಂದಿತು. ಮಾವುತ ರಾವುತರೂ ಕಾಲಾಳುಗಳೂ ಕೂಡಿ ಆರು ಲಕ್ಷ ಜನ ಯುದ್ಧ ಮಾಡುವ ಭಟರು ಆ ಪಾರಸೀಕನಾದ ಸಾರ್ವಭೌಮನ ಸುತ್ತಲು ನೆರೆದಿದ್ದರು. ಆ ಜನರಲ್ಲದೆ ಕೂಲಿಕಾರ ರಥಕಾರರೂ, ಅಡಿಗೆ ನೀರಿನವರೂ, ಕಮಾರ ಶಿಕಲಿಗಾರರೂ, ಅಂಗಡಿಗಾರ ಸಿಂಪಿಗರೂ, ಆಟ