ಪುಟ:ಬೆಳಗಿದ ದೀಪಗಳು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಸಂಪೂರ್ಣ-ಕಥೆಗಳು

ನೋಟದವರೂ, ಗಾಯಕ ವಾರಾಂಗನೆಯರೂ ಕೂಡಿ ಎಷ್ಟು ಜನವಿತ್ತೆಂದು ಹೇಳಲು ಲೆಕ್ಕವೆಲ್ಲಿ ಯುದ್ಧ ಮಾಡಲು ಅನುಕೂಲವಾದ ಸ್ಥಳವನ್ನು ದರಯಸನು ಹಿಡುಕೊಳ್ಳಬೇಕೆನ್ನುವಷ್ಟರಲ್ಲಿಯೇ ಶಿಕಂದರನು ಆ ಸ್ಥಳವನ್ನು ತಾನು ಜಾಗ್ರತೆಯಿಂದ ಹಿಡುಕೊಂಡು ನಿಂತನು. ಸಿರಿಯಾ ಪ್ರಾಂತದಲ್ಲಿ (ಭೂಮಧ್ಯ ಸಮುದ್ರದ ದಂಡೆಯ ಮೇಲೆ) ಇರುವ "ಯಶಸ್ ” ಎಂಬ ಗ್ರಾಮದ ಬಳಿಯಲ್ಲಿ ದೊಡ್ಡ ಯುದ್ಧವಾಯಿತು. ಈ ಯುದ್ಧದಲ್ಲಿ ಮತ್ತೆ ಶಿಕಂದರನು ಜೀವದ ಅಂಜಿಕೆಯನ್ನು ಬಿಟ್ಟು ಶತ್ರುಸೇನೆಯಲ್ಲಿ ಹೊಕ್ಕು. ಅಖಂಡವಾಗಿ ಆರಿಭಟರನ್ನು ಕಡಿಕಡಿದು ಹಾಕುತ್ತಿರುವದನ್ನು ಪ್ರತ್ಯಕ್ಷವಾಗಿ ನೋಡಿ ಸೈನಿಕರೆಲ್ಲರಲ್ಲಿಯೂ ವೀರಾವೇಶವು ತುಂಬಿತು. ಒಬ್ಬೊಬ್ಬನ ಮೈಯಲ್ಲಿ ಆನೆಯ ಬಲವು ಬಂದಂತಾಯಿತು. ನಲ, ನೀಲ, ಅಂಗದ, ಆಂಜನೇಯ ಮುಂತಾದ ವಜ್ರಕಾಯರಾದ ವೀರರು ಕಲ್ಲುದುಂಡೆ ಕೊಂಬೆಕೋಲುಗಳಿಂದ ಜಗದ್ದಲಣನಾದ ರಾವಣೇಶ್ವರನ ಅಕ್ಷೌಹಿಣೀ ಗಣ್ಯವಾದ ರಾಕ್ಷಸ ಸೇನೆಯನ್ನು ನುಗ್ಗು ನುಸಿಯಾಗಿ ಮಾಡಿಕೊಟ್ಟಿರಲು, ತತ್ಸಮಾನರಾದ ವೀರರು ಶಸ್ತ್ರಾಸ್ತ್ರಗಳ ಪ್ರಯೋಗನೈಪುಣ್ಯವನ್ನು ಸಂಪಾದಿಸಿ ಸ್ಫೂರ್ತಿಯಿಂದ ಕಾದುತ್ತಿರಲು, ಸುಖದ ಪಿಂಡದವರಾದ ಪಾರಸೀಕ ಸೈನಿಕರ ಪಾಡೇನು? ಫಿಲ್ಲಿಪರಾಜನ ಹೊಸ ಕ್ಲಪ್ತಿಯಾದ "ಫ್ಯಾಲ್ಯಾಂಕ್ಸ” ಎಂಬ ಚುಚ್ಚು ಗೋಲಿನ ಭಟರ ಚಮತ್ಕಾರವಾದ ವ್ಯೂಹವು ಸಂಚರಿಸುವ ಗಿರಿಯಂತೆ ಪಾರಸೀಕರ ಸೇನೆಯಲ್ಲಿ ಹೊಕ್ಕು, ತೀಕ್ಷ್ಯವಾದ ತ್ರಿಶೂಲಗಳ ಸಂತಾನದಿಂದ ಇರಿಯುತ್ತ ಬರಲಾಗಿ, ದರಾಯಸನ ಮಹಾಸೇನೆಯು ಸೋತು ಜರ್ಜರಿತವಾಗಿ ಹಿಂಜರಿಯಲಾರಂಭಿಸಿತು. ಇನ್ನೇನು, ಘಾತವಾಯಿತೆಂದು ನೆನೆದು ದರಾಯಸ ಮಹಾರಾಯನು ತನ್ನ ದಿವ್ಯವಾದ ರಥದಿಂದಿಳಿದು ಕುದುರೆಯನ್ನು ಏರಿಕೊಂಡವನೇ ಪಲಾಯನಕ್ಕಾರಂಭಿಸಿದನು. ಕೇಳುವದೇನು? ಯಥಾ ರಾಜಾ ತಥಾ ಪ್ರಜಾ! ರಾಜನನ್ನು ಕಂಡು ಸೇನೆಯ ಓಡಲಾರಂಭಿಸಿತು. ಓಡಿ ಹೋಗುವ ಹೇಡಿಗೆಕೇಡು ತಪ್ಪಿದ್ದುಂಟೆ ? ಶಿಕಂದರನ ಸೇನೆಯವರು ಆ ಕ್ಷುದ್ರ ಜೀವಿಗಳನ್ನು ಹಿಡಿಹಿಡಿದು ಕಡಿದುಹಾಕಿದರು. ಲಕ್ಷಾವಧಿ ಜನರ ಕೊಲೆಯಾಗಿಹೋಯಿತು. ಆ ದುರ್ದೈವಿಗಳೆಲ್ಲರೂ ರಣಾಂಗಣದಲ್ಲಿ ಗಟ್ಟಿಯಾಗಿ ನಿಂತುಕೊಂಡು ಕಾದಿ ಸತ್ತಿದ್ದರೆ ಇತಿಹಾಸದಲ್ಲೇನು ಹೆಚ್ಚು ಕಡಿಮೆ