ಪುಟ:ಬೆಳಗಿದ ದೀಪಗಳು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೬೯

ಯಾಗುತ್ತಿತ್ತೆಂಬುದನ್ನು ಯಾರೇನು ಹೇಳಬಲ್ಲರು? ಸಾರಾಂಶ, ಶಿಕಂದರನು “ಯಶಸ್" ಕಾಳಗದಲ್ಲಿ ಯಶಸ್ವಿಯಾದನು (ಕಿ.ಪೂ.೩೩೩).

ದರಾಯಸನು ಅಪಜಯವನ್ನೂ ತನ್ನ ಪ್ರಾಣವನ್ನೂ ಸಂಗಡ ಕಟ್ಟಿಕೊಂಡು ಓಡಿಹೋದನಷ್ಟೇ, ಹೊರತಾಗಿ ತನ್ನ ರಾಜ್ಯಲಕ್ಷ್ಮಿ ಧನಲಕ್ಷ್ಮಿ ಗೃಹಲಕ್ಷ್ಮಿಯರೆಲ್ಲರನ್ನು ಶಿಕಂದರನ ಸ್ವಾಥೀನಕ್ಕೆ ಬಿಟ್ಟು ಕೊಟ್ಟು ನಡೆದನು. ಮುಖ್ಯ ದರಾಯಸನ ಪ್ರಿಯಪತ್ನಿ ಯಾದ ಅಷ್ಟತೀರೆಯೂ, ಅವನ ತಾಯಿಯಾದ ಸೇಸಿಗಾಂಬೆಯ ಶಿಕಂದರನ ಸೆರೆಯಾಳುಗಳಾದರು. ಅಂತಃಪುರದಲ್ಲಿಯ ಮುತ್ತು ರತ್ನಗಳ ಮೊಟ್ಟೆಗಳೂ, ರಾಜನ ಜಂಗಮ ಭಾಂಡಾರದಲ್ಲಿರುವ ಸುವರ್ಣ ನಾಣ್ಯಗಳ ಅನೇಕವಾದ ರಾಶಿಗಳೂ, ರೇಶಿಮೆ ಜರತಾರೆಯ ತ೦ಬು ಡೇರೆಗಳೂ, ಆನೆ ಕುದುರೆ ಬಂಡಿ ಎತ್ತುಗಳೂ ಶಿಕಂದರನ ಸ್ವಾಧೀನವಾದವು. "ಯಶೋ" ಕ್ಷೇತ್ರದಲ್ಲಾದ ವಿಜಯದ ಮೂಲಕವಾಗಿ ಮಾಸೊಪೊಟಾಮಿಯಾದ ಪಶ್ಚಿಮಕ್ಕಿರುವ ಸಮಗ್ರವಾದ ತುರ್ಕಸ್ಥಾನವು ಮಾಸಿಡೋನಿಯಾದ ರಾಜನ ಆಧಿಪತ್ಯಕ್ಕೊಳಗಾಗಿ ಹೋಯಿತು. ಕಾವಿನಲ್ಲಿ ಕಾವೆಂದು ತಿಳಿದು ಶಿಕಂದರನು ಭೂಮಧ್ಯ ಸಮುದ್ರದ ದಂಡೆಯ ಮೇಲಿರುವ ಕೋಟೆ, ಪಟ್ಟಣ, ಬಂದರಗಳನ್ನೆಲ್ಲ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಉದ್ಯೋಗವನ್ನು ನಡಿಸಿದನು. ಅವನು "ಉಫ್" ಎಂದು ಊದಿದ ಕೂಡಲೆ ಸಿದ್ಧನ ಎಂಬ ಕೋಟೆಯ ಭದ್ರವಾದ ಗೋಡೆಗಳು ಹಾರಿಹೋದವು. ತೀರಕ್ಕೆ ಸಮೀಪದಲ್ಲಿಯೇ ಚಿಕ್ಕದಾದ ನಡುಗಡ್ಡೆಯಲ್ಲಿರುವ "ತೈಯ್ಯಾರ” (Tyre)ಎಂಬ ಕೋಟೆಯು ರಾವಣನ ಲಂಕೆಯಂತೆ ಬಹು ಭದ್ರವಾಗಿತ್ತು. ಆದರೆ ಕೃಶಾಂತನಿಗೂ ನಿಶಾಂತವಿಕ್ರಮನಿಗೂ ಈ ಲೋಕದಲ್ಲಿ ಈಡಾಗದಿರುವ ವಸ್ತುವಾವದು ? ಅರ್ವಾಚೀನನಾದ ಆ ಶಿಕಂದರಾಖ್ಯನಾದ ರಾಮನು "ತೈಯ್ಯಾರ”ವೆಂಬ ಲಂಕೆಯ ವರೆಗೆ ಸೇತುಬಂಧನವನ್ನು ಮಾಡಿ ಆ ಕೋಟೆಯನ್ನು ಗೆದ್ದು ಕೊಂಡನು (೩೩೭). ಮುಂದೆ ಸಮುದ್ರ ತೀರದ ದಿಗ್ವಿಜಯವು ಸುಲಭವಾಗಿ ಸಾಗಿತು. ಗಾಝಾ, ಪೆಲೂಜೆಯ ಬಂದರಗಳನ್ನು ತೆಗೆದುಕೊಂಡರೆ ಬೇಡೆಂದು ಹೇಳುವಂಥ ಆಗಸೆಯವನು ಕೂಡ ಇದ್ದಿಲ್ಲ. ಆಮೇಲೆ ಹಸನ್ಮುಖಳಾದ ಮಿಶ್ರದೇಶದ ನೀಲಗಂಗೆಯು ಶಿಕಂದರ ರಾಜನಿಗೆ ಸ್ವಾಗತವನ್ನಿತ್ತಳು. ಆ ನದಿಯ ಮುಖದ ಬಳಿಯಲ್ಲಿಯೇ ಮೂಗುತಿ