ಪುಟ:ಬೆಳಗಿದ ದೀಪಗಳು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಸಂಪೂರ್ಣ-ಕಥೆಗಳು

ಯಂತೊಪ್ಪುವ "ಅಲೆಕ್ಝಾಂಡ್ರಿಯಾ” ಎಂಬ ಪಟ್ಟಣವನ್ನು ಶಿಕಂದರನು ಕಟ್ಟಿಸಿದನು (ಕ್ರಿ. ಪೂ. ೩೭೭). ಆ ಪಟ್ಟಣವು ಈ ಕಾಲಲ್ಲಿ ಅನುಭವಿಸುತ್ತಿರುವಷ್ಟು ಘನತೆಗೇರುವದೆಂಬದನ್ನು ಶಿಕಂದರನು ಎಣಿಸಿದ್ದನೋ ಇಲ್ಲವೋ ಎಂಬದನ್ನು ಹೇಳಲಿಕ್ಕಾಗದಿದ್ದರೂ ತಾನು ಕಟ್ಟಿದ ಪಟ್ಟಣವು ವ್ಯಾಪಾರದ ದೊಡ್ಡದೊಂದು ಪಡಿಮೂಲೆಯಾಗುವದೆಂಬದನ್ನು ಆ ಚತುರನು ನಿಃಸಂದೇಹವಾಗಿ ನಂಬಿದ್ದನೆಂಬದರಲ್ಲಿ ಸಂದೇಹವಿಲ್ಲ.

ಶಿಕಂದರನು "ತಯ್ಯಾರ” ಕೋಟೆಗೆ ಲಗ್ಗೆಯನ್ನಿಕ್ಕಿದಾಗ ಹತಾಶನಾದ ದರಾಯಸ ಬಾದಶಹನು ಅವನೊಡನೆ ಸಾಮ ದಾನಗಳ ಸಂಧಾನವನ್ನು ನಡೆಸಿದನು. “ಸ್ವರ್ಗಾದಪಿ ಗರೀಯಸೀ,” ಸ್ವರ್ಗಾನಂದಕ್ಕಿಂತ ಹೆಚ್ಚಿನ ಆನಂದವನ್ನಿಳಿಯುವವಳಾದ ತಾಯಿಯ, ಹೊರಗಿನ ಪ್ರಾಣಿಗಳೇ ಆದ ಪ್ರಿಯ ಭಾರ್ಯೆಯೂ ಶತ್ರುವಿನ ಸೆರೆಯಲ್ಲಿರುವ ವ್ಯಸನವು ದರಾಯಸನ ಎದೆಯಲ್ಲಿ ಒಳಿತಾಗಿ ಕಳೆಯುತ್ತಿತ್ತು. ಮೇಲಾಗಿ ತನಗಿನ್ನು ಗೆಲವಿಲ್ಲವೆಂಬ ದುಗುಡವಾದರಾ ಆವನನ್ನು ಒಳಿತಾಗಿ ಬಾಧಿಸುತ್ತಿತ್ತು. “ಸರ್ವನಾಶ ಸಮುಪ್ಪನ್ನೇ ಅರ್ಥ೦ ತ್ಯಜತಿ ಪಂಡಿತಃ" ಎಂಬಂತೆ ಸರ್ವವೂ ಕೈ ಬಿಟ್ಟು ಹೋಗುವ ಕಾಲದಲ್ಲಿ ಬುದ್ಧಿವಂತನಾದವನು ತಾನಾಗಿ ಆರ್ಧವನ್ನು ಕೊಟ್ಟು ಆರ್ಧವನ್ನು ರಕ್ಷಿಸಿಕೊಳ್ಳತಕ್ಕದ್ದೆಂಬ ನ್ಯಾಯಕ್ಕನುಸಾರವಾಗಿ ಶಿಕಂದರನಿಗೆ ಅರ್ಧ ರಾಜ್ಯವನ್ನೂ, ತಾಯಿ ಹೆಂಡಿರನ್ನು ಬಿಟ್ಟುಕೊಡುವದಕ್ಕಾಗಿ ಇಪ್ಪತ್ತು ಲಕ್ಷ ತೊಲೆ ಬಂಗಾರವನ್ನೂ ಕೊಡುವದಲ್ಲದೆ, 'ವರ್ಷಣಾ' ಎಂಬ ತನ್ನ ದೂರಸಂಪನ್ನೆ ಯಾದ ಮಗಳನ್ನು ಕೊಡಲೊಪ್ಪಿ ಯುದ್ಧ ವನ್ನು ನಿಲ್ಲಿಸಬೇಕೆಂದು ಬೇಡಿಕೊಂಡನು. ಈ ಸಾಮ ದಾನಗಳ ಸಂಧಾನಗಳನ್ನು ಎಷ್ಟು ಮಾತ್ರವೂ ಆದರಿಸದೆ ಶಿಕಂದರನಂ ಅವುಗಳನ್ನು ಒಮ್ಮೆಲೆ ನಿರಾಕರಿಸಿ ಬಿಟ್ಟನು. ಆಗ ಪಾರ್ವನಿಯೋ ಸೇನಾಪತಿಯ ವಿಸ್ಮಯಪಟ್ಟು ನುಡಿದದ್ದು: “ನಾನೇ ಶಿಕಂದರ ರಾಜನಾಗಿದ್ದರೆ ದರಾಯಸನ ಸಂಧಾನಗಳನ್ನು ಮನ್ನಿಸುತ್ತಿದ್ದೆನು.” ಅದಕ್ಕೆ ಶಿಕಂದರನು ನಕ್ಕು ಪ್ರತ್ಯುತ್ತರವಾಗಿ," ನಾನು ಪಾರ್ಮೇನಿಯೋನಾಗಿದ್ದರೂ ದರಾಯಸನ ಸಂಧಾನಗಳನ್ನು ಮನ್ನಿಸದೆ ಇರುತ್ತಿದ್ದಿಲ್ಲ' ಎಂಬ ಅಪಹಾಸೋಕ್ತಿಯನ್ನಾಡಿದನು. ಎಲ್ಲವೂ ನಷ್ಟ ಪಾಗಿಹೋಗುವ ಕಾಲ ಬಂದಾಗ ಅರ್ಧವನ್ನು ಬಿಟ್ಟುಕೊಡುವದು