ಪುಟ:ಬೆಳಗಿದ ದೀಪಗಳು.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೭೧

ಜಾಣತಣವಾಗಿದ್ದರೂ ಎಲ್ಲವೂ ಕೈವಶವಾಗುವ ಕಾಲದಲ್ಲಿ ಅರ್ಧವನ್ನು ಬಿಟ್ಟು ಕೊಡುವದು ಮೂರ್ಖತನವೇ ಸರಿ.

ಶಿಕಂದರನು ಮಿಶ್ರ ದೇಶ (ಈಜಿಪ್ತ)ವನ್ನು ತನ್ನದಾಗಿ ಮಾಡಿಕೊಂಡು ಮರಳಿ ಜಲಮಾರ್ಗವಾಗಿ "ತೈಯ್ಯಾರ"ಕ್ಕೆ ಬಂದು, ಅಲ್ಲಿಂದ ಮೆರೆಯುತ್ತೆ ಮೆರೆಯುತ್ತೆ ಒಳದೇಶದಲ್ಲಿ ಸಾಗಿಬಂದನು. ಅಲ್ಲಿಯ ನಗರದೇವತೆಗಳು ಆ ವಿಜಯಿಯಾದ ರಾಜನಿಗೆ ಮೆಚ್ಚಿ ಕೈ ಸನ್ನೆ ಮಾಡಿ ಮಾಡಿ ಕರೆಯುತ್ತಿರುವಂತೆ ಕಂಡವು. ಪಾಲಸ್ತಾನದೊಳಗೆ ಹಾಯು ಅವನು ಇಫ್ರಾಯತೀ ನದೀತೀರದಲ್ಲಿರುವ ಶಾಹಶಾಕವೆಂಬ ಪಟ್ಟಣವನ್ನು ಕೈವಶ ಮಾಡಿಕೊಂಡು ಮಸಾ ಪಾದಾಮಿಯಾ ಪ್ರಾಂಶವನ್ನಾಕ್ರಮಿಸಿಕೊಂಡು ನದೀ ತೀರದಲ್ಲಿರುವ 'ನಿನವೇ' ಎಂಬ ಪುರಾಣಪ್ರಸಿದ್ಧವಾದ ಪಟ್ಟಣಕ್ಕೆ ಅಪ್ರತಿಹತವಾಗಿ ಬಿಜಯಂ ಮಾಡಿದನು. ಅಲ್ಲಿ ಬರುತ್ತಲೇ, ದರಾಯಸನು ಹಾಗೂ ಹೀಗೂ ಮಾಡಿ ಮತ್ತೊಂದು ಪ್ರಚಂಡವಾದ ಸೇನೆಯನ್ನು ನೆರವಿಕೊಂಡು 'ಗಾಗಾವಲಾ” ಎಂಬ ಸ್ಥಳದಲ್ಲಿ ಯುದ್ಧಕ್ಕೆ ಸನ್ನದ್ಧನಾಗಿರುವನೆಂಬ ವಾರ್ತೆಯನ್ನು ಶಿಕಂದರನು ಕೇಳಿದನು.

ಒಂದು ದಿನ ರಾತ್ರಿಯಲ್ಲಿ ಶಿಕಂದರ ರಾಜನು ತನ್ನ ತಂಬುವಿನಲ್ಲಿ ಸುಖವಾಗಿ ಮಲಗಿಕೊಂಡಿರುವಾಗ, ಸೇನಾಪತಿಯು ವ್ಯಗ್ರಚಿತ್ತನಾಗಿ ಬಂದು ರಾಜನನ್ನು ಲಗಬಗೆಯಿಂದ ಎಚ್ಚರಿಸಿದನು, ಏನು ಸಮಾಚಾರವೆಂದು ರಾಜನು ಎಚ್ಚತ್ತು ಕೇಳಲಾಗಿ “ಪ್ರಭೋ, ದರಾಯಸನ ಸೇನೆಯು ನಮ್ಮ ಶಿಬಿರದ ಕಡೆಗೆ ಸಾಗಿಬರುವಂತೆ ಕಾಣುತ್ತದೆ. ನೋಡಿದಿರಾ, ಲಕ್ಷಾವಧಿ ದೀವಟಿಗೆಗಳಿಂದ ಪ್ರಜ್ವಲಿತವಾದ ಭೂಪ್ರದೇಶವೇ ಇತ್ತ ಕಡೆ ನಡೆಸರುವಂತೆ ಭಾಸವಾಗುತ್ತದೆ” ಎಂದು ಸೇನಾಪತಿಯು ಬೆಸಗೊಂಡನು, ರಾಜನು ಮಂದಸ್ಮಿತನಾಗಿ "ಇದಕಿಷ್ಟೇಕೆ ಉದ್ವಿಗ್ನರಾದಂತೆ ತೋರುವಿರಿ? ವಿಜಯಶ್ರೀಯು ತಾನಾಗಿ ಬೆಳಕು ಮಾಡಿಕೊಂಡು ನಮ್ಮನ್ನು ಇದಿರುಗೊಳ್ಳಲಿಕ್ಕೆ ಬರುತ್ತಿರುವಳು. ದರಾಯಸಬಾದಶಹನು ತನ್ನ ಅಪರಿಮಿತವಾದ ಸೇನೆಯನ್ನು ಕಟ್ಟಿಕೊಂಡು ನಮ್ಮಿಂದ ದೂರದೂರವಾಗಿ ಸಂಚರಿಸುತ್ತೆ ಕಣ್ಣು ಮುಚ್ಚಣಿಕೆಯ ಆಟವನ್ನು ಹೂಡಿದ್ದರೆ ನಮಗೆಷ್ಟು ತೊಂದರೆಯಾಗುತ್ತಿತ್ತೆಂಬುದರ ಅರಿಕೆನಿವಂಗುಂಟೋ ? ಹೋಗಿರಿ, ಜಾಗರೂಕರಾಗಿ ಕಾದುಕೊಂಡಿದ್ದು ಪ್ರಾತಃ