ಪುಟ:ಬೆಳಗಿದ ದೀಪಗಳು.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಸಂಪೂರ್ಣ-ಕಥೆಗಳು

ಕಾಲದಲ್ಲಿಯೇ ನನ್ನನ್ನು ಎಬ್ಬಿಸಿರಿ. ಸೂರ್ಯೋದಯಕ್ಕೆ ಸರಿಯಾಗಿ ಯುದ್ಧವು ಪ್ರಾರಂಭವಾಗತಕ್ಕದ್ದು." ಎಂದು ಆಜ್ಞಾಪಿಸಿ, ಅಪಜಯದ ಭೀತಿಯ ತಿಲಾಂಶವನ್ನಾದರೂ ಕಾಣದವನಾದ ಆ ಸೇನಾನಿಯು ಸ್ವಸ್ಥ ಮನಸ್ಸಿನವನಾಗಿ ಮಲಗಿಕೊಂಡನು. ವಿಚಾರ, ಹಳವಂಡು, ಕನಸುಗಳ ವ್ಯವಧಾನವಿಲ್ಲದೆ ಅವನು ಬೇಗನೆ ನಿದ್ದೆ ಗೈದನು. ಜಗದ್ವಿಖ್ಯಾತರಾದ ವೀರ ಮನಃಪ್ರವೃತ್ತಿಗಳು ಯಾವ ಕಾಲದಲ್ಲಿಯಾಗಲಿ ಯಾವ ದೇಶಗಳಲ್ಲಿಯಾಗಲಿ ಏಕಪ್ರಕಾರವಾಗಿರುವವು. ನಪೊಲಿಯನ್, ಜೂಲಿಯಸ್ ಸೀಜರ, ರಾಮ, ಅರ್ಜುನರೇ ಮುಂತಾದವರು ತಮ್ಮ ತಮ್ಮ ಯುದ್ಧಗಳ ಪರಿಣಾಮದ ನಿಷಯವಾಗಿ ನಿ:ಸಂದೇಹವಾಗಿದ್ದದ್ದರಿಂದ ಅವರ ಚಿತ್ರಕ್ಕೆ ಚಾಂಚಲ್ಯದ ದೋಷವು ತಗಲಲೇ ಇಲ್ಲ.

ಪ್ರಾತಃಕಾಲದಲ್ಲಿಯೇ ಯುದ್ಧಕ್ಕೆ ಪ್ರಾರಂಭವಾಯಿತು, ದರಾಯಸನ ಸೇನೆಯಲ್ಲಿ ಹತ್ತು ಲಕ್ಷ ಜನ ಕಾಲಾಳುಗಳೂ ನಾಲ್ವತ್ತು ಸಾವಿರ ಜನರಾವುತರೂ ಇದ್ದಿರಬೇಕು. ಶಿಕಂದರನ ಕಾಲಾಳುಗಳೆಂದರೆ ನಾಲ್ವತ್ತೇ ಸಾವಿರ ಜನರು. ರಾವುತರು ಏಳುಸಾವಿರ ಜನ. ಇನ್ನೂರಕ್ಕೊಬ್ಬ ಕಾಲಾಳೂ ಆರಕೊಬ್ಬ ಕುದುರೆಯವನೂ ಇದ್ದಂತಾಯಿತು. ಹತ್ತೇ ಜನ ಹಾವಳಿಗಾರರು ಸಂತೆಗೆ ಸಂತೆಯನ್ನ ಬಡ ಕೊಂಡು ಹೋಗುವಂತೆ ಶಿಕಂದರನ ಚುಚ್ಚು ಗೋಲಿನ ವೀರರ ವ್ಯೂಹವು ಶತ್ರುಸೇನೆಯಲ್ಲಿ ನುಗ್ಗಿ ವಿಲಕ್ಷಣವಾದ ಕೊಲೆಯನ್ನು ಮಾಡಲಾರಂಭಿಸಲು, ದರಾಯ ಸನ ಸೇನೆಯು ಕಂಗೆಟ್ಟು ಸತ್ತೆ ಕೆಟ್ಟಿನೆಂದು ಎತ್ತೆತ್ತಲೋ ಓಡಲಾರಂಭಿಸಿತು. ಆದರೆ ಶಿಕಂಡರನ ಸೇನಾಪತಿಯಾದ ಪಾರ್ಮೆನಿಯೋನು ಕಾಡುತ್ತಿರುವ ತಾಣದಲ್ಲಿ ಶತ್ರು ಸೇನೆಯ ರಾವುತರು ಅಟ್ಟಿಬಂದು ಒಳ್ಳೆ ಶೌರ್ಯದಿಂದ ಕಾದಿ ಆ ಸೇನಾಪತಿಯನ್ನು ಮುತ್ತಿರಲಾಗಿ, ಅವನು ತನ್ನನ್ನೂ ತನ್ನ ಬಳಿಯಲ್ಲಿರುವ ಸಾಮಗ್ರಿ ಸಂಚಯವನ್ನೂ ಕಾಯಬೇಕಾಗಿ ಸಹಾಯವನ್ನು ಕಳಿಸಿರೆಂದು ಶಿಕಂದರನಿಗೆ ಹೇಳಿಕಳಿಸಿದನು. ಅದಕ್ಕೆ ಶಿಕಂದರನು ಪ್ರತ್ಯುತ್ತರವಾಗಿ ಹೇಳಿಕಳಿಸಿದ್ದೇನಂದರೆ "ಸಾಮಗ್ರಿಯು ಹೋಗುವದೆಂಬ ಚಿಂತೆ ಮಾಡಬೇಡಿರಿ. ನಿಮ್ಮ ಸಂರಕ್ಷಣವನ್ನೂ ನಿಮ್ಮ ಸೇನೆಪಡೆಯ ಸಂರಕ್ಷಣವನ್ನೂ ನೀವು ಮಾಡಿಕೊಳ್ಳುವಿರೆಂದು ನಾನು ನಿಶ್ಚಯವಾಗಿ ನಂಬಿದ್ದೇನೆ. ಸಾಮಗ್ರಿಯು ಹೋಗಲಿ; ಆದರ