ಪುಟ:ಬೆಳಗಿದ ದೀಪಗಳು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೭೩

ಚಿಂತೆಯನ್ನು ಬಿಟ್ಟು ನೀವು ಯುದ್ಧ ಮಾಡಿರಿ. ಯುದ್ಧವು ಮುಗಿದ ಬಳಿಕ ಶತ್ರುಗಳ ಸರ್ವಸ್ವವನ್ನು ನಾವು ಸ್ವಾಧೀನ ಮಾಡಿಕೊಳ್ಳುವಾಗ ನಮ್ಮ ಸಾಮಗ್ರಿಯಾದರೂ ಕೊನೆಯಲ್ಲಿ ನಮ್ಮದೇ ಆಗುವದು.” ಹುರುಪು ಬಂದ ಹೊತ್ತಿನಲ್ಲಿ ವಿಶ್ರಾಂತಿಯ ಅಪೇಕ್ಷೆಯನ್ನು ಮಾಡದೆ ಶಿಕಂದರನು ಶತ್ರು ಸೇನಾ ಸಂಹಾರವನ್ನು ಮಾಡುತ್ತೆ ದರಾಯಸನಿರುವ ಸ್ಥಳದ ಸಮೀಪಕ್ಕೆ ಬಂದದ್ದನ್ನು ಕಂಡು, ಆ ದೈವಹತನಾದ ಸಾರ್ವಭೌಮನು ಮತ್ತೆ ಓಡಿದನು. ಸೈನ್ಯವೆಲ್ಲಾ ಓಡಿತು. ಓಡಿ ಹೋದರೆ ಶತ್ರುವು ಬಿಡುವನೆ ? ಕಾಲಧಾವತಿಯೋ ಕತ್ತೆಂಭಟ್ಟಾ. ಅಲ್ಪ ಕಾಲದಲ್ಲಿಯೇ ಆ ಓಡುತ್ತಿರುವ ಸೈನ್ಯದ ಇತಿಶ್ರೀಯಾಯಿತೆಂದು ಹೇಳಬೇಕಾಗಿಲ್ಲ. ಗಾಗಾಮೇಲಾದ ಯುದ್ಧದಲ್ಲಿ ದರಾಯಸನು ಸಂಪೂರ್ಣವಾಗಿ ಸೋತುಹೋದನು. ಪರಿಸ್ಥಿತಿಯು ಬುಡ ಮಳಾಗಿಹೋಯಿತು. ಕಳೆದುಹೋದ ಕ್ಷಣದಲ್ಲಿ ಸಾರ್ವಭೌಮನಾಗಿದ್ದ ದರಾಯಸ ಬಾದಶಹನು ಈ ಕ್ಷಣದಲ್ಲಿ ಗತಿಗೇಡಿಯಾಗಿ ಕುಳಿತು ವಿಶ್ರಾಂತಿಯನ್ನು ಹೊಂದಲು ಸ್ಥಳ ಕಾಣದೆಹೋದನು. ಅವನ ಪ್ರಜಗಳೇ ಅವನಿಗೆ ಕುಡಿಯಲು ನೀರು ಕೊಡದಾದರು.

ಗಾಗಾಮಲಾದ ವಿಜಯದ ಕೀರ್ತಿಯೇ ವಿದ್ಯುತ್ ಪ್ರವಾಹದ ವೇಗದಿಂದ ಎಣ್ದೆಸೆಗಳಲ್ಲಿ ಹರಡಿಕೊಂಡು, ಇನ್ನು ಮೇಲೆ ಶಿಕಂದರನೇ ಸಮಸ್ತವಾದ ಪೃಥ್ವಿಗೆ ನಾಥನಾದನೆಂದು ಸಾರಿತು. ಶಿಕಂದರನ ಆಜ್ಞಾಪತ್ರ ಶಾಸನಗಳ ಹಾದಿಯನ್ನು ನೋಡದೆ, ದೇಶದೇಶಗಳಲ್ಲಿಯ ಪ್ರಜಾಜನರು ಶಿಕಂದರನೇ ಸಾರ್ವಭೌಮನೆಂದು ಒಪ್ಪಿಕೊಂಡು, ಅವನಿಗೆ ಸತ್ಕಾರವನ್ನೀಯಲು ಸರ್ವರೂ ಸಿದ್ಧತೆಯನ್ನು ಮಾಡಿಟ್ಟು ಕೊಂಡಿದ್ದರು. ಆ ದಿವಸ ಶಿಕಂದರನಿಗೆ ಆತ್ಯಾನಂದವಾಗಿಹೋಯಿತು. ಸಿಂಧು ನದದಿಂದ ಭೂಮಧ್ಯ ಸ್ಪಮುದ್ರದವರೆಗೆ ಹಬ್ಬಿರುವ ಮಹಾಸಾಮ್ರಾಜ್ಯದ ಅಧಿಪತಿಯೇ ಅವನಾದನು. ಸೈನಿಕನೊಬ್ಬೊಬ್ಬನ ಪಾಲಿಗೆ ಬಂದ ಸುಲಿಗೆಯು ದೊಡ್ಡದೊಂದು ಐಶ್ವರ್ಯವೇ ಆಗಿತ್ತು. ಇನ್ನು ಮುಂದೆ ಯುದ್ಧದ ಚಿಂತೆ ಯಾರಿಗೂ ಇಲ್ಲ. ರಾಜ್ಯದಲೆಲ್ಲ ಮೆರೆಯುತ್ತ ಸಂಚರಿಸುವೆನೆಂಬ ಉಬ್ಬಿ ಉಬ್ಬು ಬಾಬಿಲೋನ ಎಂಬ ಪುರಾತನವಾದ ರಾಜಧಾನಿಗೆ ಶಿಕಂದರಬಾದಶಹನು ಬಿಜಯ ಮಾಡುವನೆಂಬ ವಾರ್ತೆಯನ್ನು ಕೇಳಿ, ಪುರವಾಸಿಗಳು ನಗರ ಶೃಂಗಾರವನ್ನು ಮಾಡಿ