ಪುಟ:ಬೆಳಗಿದ ದೀಪಗಳು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಸಂಪೂರ್ಣ-ಕಥೆಗಳು

ನರಾಧಮನೊಬ್ಬನು ಆ ತನ್ನ ಅನ್ನದಾತನನ್ನು ಬಂದಿವಾಸದಲ್ಲಿರಿಸಿದನು. ಸೂರ್ಯನು ಅವನ ಮೋತಿಯನ್ನು ಸುಟ್ಟನು; ಚಂದ್ರನು ಅವನ ದೇಹದಲ್ಲಿ ಸುಂದು ಹುಟ್ಟುವಂತೆ ಮಾಡಿದನು; ವಾಯುವು ದರಾಯಸನ ಜಡೆಗಟ್ಟಿದ ಗಡ್ಡದಲ್ಲಿ ಮಣ್ಣು ತೂರಿದನು. ಲೋಕಕ್ಕೆ ಭೀಷಣನಾಗಿದ್ದ ಯಮದೇವನೊಬ್ಬನೇ ದರಾಯಸನಿಗೆ ಒಳ್ಳೆಯವನು. ಅವನೇ ಆ ದುರ್ದೈವಿಯ ದುಃಖಗಳ ಪರಿ ಮಾರ್ಜನವನ್ನು ಮಾಡತಕ್ಕವನು. ದರಾಯಸನಾದರೂ ನೀನೇ ಗತಿಯೆಂದು ಅವನಿಗೆ ಶರಣಾಗತನಾದನು. ಬಾದಶಹನ ಹಸ್ತಾಕ್ಷರ ರಾಜಮುದ್ರೆಗಳ ಉಪಯೋಗವನ್ನು ಮಾಡಿ, ಉಳಿದ ಕ್ಷತ್ರಪರಿಂದ ಏನಾದರೂ ಪ್ರಾಪ್ತಿಯನ್ನು ಮಾಡಿಕೊಳ್ಳಬೇಕೆ೦ತಲೂ ಶಿಕಂದರ ಬಾದಶಹನು ಕೇಳಿದಾಗ ಅವನನ್ನು (ದರಾಯಸವನ್ನು ) ಸ್ವಾಧೀನ ಮಾಡಿ ಏನಾದರೂ ಸಂಭಾವನೆಯನ್ನು ಪಡೆಯಬೇಕೆಂದೂ ಆಲೋಚಿಸಿ ಆ ಸ್ವಾಮಿದ್ರೋಹಿಯಾದ ಬೇರುಸ್ಸೆನು ದರಾಯಸನನ್ನು ಸೆರೆಯಲ್ಲಿ ಹಿಡಿದಿದ್ದನು. ದರಾಯಸನ ಬೇರುಸೃನೂ ಕೂಡಿ ಶಿಕಂದರನ ವಿರುದ್ಧವಾಗಿ ಬಂಡುಮಾಡುವರೆಂಬ ವಾರ್ತೆಯನ್ನು ಕೇಳಿ ಶಿಕಂದರನು ಬ್ಯಾಕ್ಟಿಯಾ ಪ್ರಾಂತಕ್ಕೆ ಬರಲಾಗಿ ಬೇರುಸನು ಬೆದರಿ ಓಡಿದನು. ಓಡುವಾಗ ದರಾಯಸನನ್ನು ಸಂಗಡ ಕಟ್ಟಿ ಕೊಂಡು ಹೋಗಬೇಕೆಂಬ ಯೋಚನೆಯನ್ನು ಮಾಡಲು ಅದಕ್ಕೆ ದರಾಯಸನು ಒಪ್ಪಲಿಲ್ಲಾರಿಂದ ಆ ಘಾತಕನು ದೈವಹಠನಾದ ಆ ಸಾರ್ವಭೌಮನನ್ನು ಖಡ್ಗದಿಂದಿರಿದು ತಾನು "ಗಚ್ಛ" ಮಾಡಿದನು. ಶಿಕಂದರಬಾದಶಹನು ದರಾಯಸನಿದ್ದಲ್ಲಿಗೆ ಬರುವಷ್ಟರಲ್ಲಿ ಆ ಗತವೈಭವನಾದ ರಾಜನು ಗತಪ್ರಾಣನಾಗಿ ಗತಿ ಇಲ್ಲದೆ ಬಿದ್ದು ಕೊಂಡಿದ್ದನು. ಆ ಹೃದಯದ್ರಾವಕವಾದ ನೋಟವನ್ನು ನೋಡಿ ಶಿಕಂದರನು ದುಃಖಾರ್ತನಾಗಿ ಕಣ್ಣೀರು ಸುರಿಸಿದನು ಅಸ್ತವ್ಯಸ್ತವಾಗಿ ಬಿದ್ದಿರುವ ಆ ಮಹಾರಾಯನ ಪ್ರೇತಕ್ಕ ಶಿಕಂದರ ಬಾದಶಹನು ತನ್ನ ಅನರ್ಘವಾದ ಉತ್ತರೀಯವನ್ನು ಹೊಚ್ಚಿ "ಬಂಧುವೆ, ನನಗೆ ಶರಣಾಗತನಾಗಿ ಬಂದಿದ್ದರೆ, ನಿನಗಿಂಥ ಶೋಚನೀಯವಾದ ಗತಿಯು ಸರ್ವಥಾ ಪ್ರಾಪ್ತವಾಗುತ್ತಿಲ್ಲ' ಎಂಬ ಉದ್ದಾರವನ್ನು ತೆಗೆದು, ಪ್ರೇತಕ್ಕೆ ಅಂತ್ಯ ವಿಧಿಯಾಗಿಲೆಂದು ತನ್ನ ಸೇನಾಪತಿಗೆ ಆಜ್ಞಾ ಪಿಸಿದನು, ಮಹಾರಾಜನಿಗುಚಿತವಾದ ಸ್ಮಶಾನಯಾತ್ರೆಯಾಯಿತು. ಸ್ವತಃ ಶಿಕಂದರನು ಸಕಲರಾದ ಅಧಿಕಾರಿ,