ಪುಟ:ಬೆಳಗಿದ ದೀಪಗಳು.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಂದರ ಬಾದಶಹ 2& ಗಳನ್ನು ಕೂಡಿಕೊಂಡು ಪ್ರೇತವನ್ನು ಸ್ಮಶಾನಕ್ಕೆ ಮುಟ್ಟಿಸಿದನು. ಉತ್ತರ ಕ್ರಿಯಾದಿಗಳು ದರಾಯಸನ ಧರ್ಮಾನುಸಾರವಾಗಿ ಒಳ್ಳೆ ವಿಧಾನಪೂರೈಕ ಬಾಗಿ ನಡೆದವು. ಆ ಕಾಲಕ್ಕಾದ ದಾನಧರ್ಮಗಳಿಗೆ ಅಳತೆಯಿಲ್ಲ. ಆ ಸುಸಂಧಿಯಲ್ಲಿ ಶರಣೆಂದು ಬಂದ ದರಾಯಸನ ಸರದಾರರಿಗೆಲ್ಲ ಕ್ಷಮೆ ದೊರ ಕಿತು, ಅವರವರ ವೃತ್ತಿ ಸ್ವಾಸ್ತಿಗಳೆಲ್ಲ ಅವರಿಗೆ ನಡೆದವು. ಆಜ್ಞಾನು ವರ್ತಿಗಳಾಗಿರುವೆನೆಂದು ಹೇಳಿಕೊಂಡವರಿಗೆ ಅವರವರ ಅಧಿಕಾರಗಳು ಕೂಡ ಲ್ಪಟ್ಟವು. ಲೋಕವೆಲ್ಲ ಶಿಕಂದರನನ್ನು ಹೊಗಳಿ ತು, ಕವಿಗಳು ಹಾಡಿದರು. PR Thafa farat antea laga ei annat gat: ay: 11 ದರಣಯಸನ ಅಂತ್ಯವಿಧಿಗಳಾದ ಬಳಿಕ ಶಿಕಂದರ ಬಾದಶಹನು ಕ್ಯಾಸ್ಪಿ ಯನ್ ಸಮುದ್ರದ ದಕ್ಷಿಣತೀರದಲ್ಲಿರುವ ಹಿಕ್ಕ್ಯಾನಿಯವೆಂಬ ಪ್ರಾಂತಕ್ಕೆ ಬಂದು ಅಲ್ಲಿಯ ಪ್ರಜಾಜನರನ್ನೊ ಡಂಬಡಿಸಿ, ಅಫಘಾನಿಸ್ಥಾನದ ಪಶ್ಚಿಮ ಸೀಮೆಯಲ್ಲಿರುವ ಆರ್ಶಕವನ ( ಈಗಿನ ಹೀರಾತ) ಎಂಬ ಪಟ್ಟಣಕ್ಕೆ ಬಿಜಯಮಾಡಿದನು. ಅಲ್ಲಿಯೂ ಪ್ರಜಾಜನರ ಸಂಪೂಜನವನ್ನು ಸ್ವೀಕರಿಸಿ ಕೊಂಚ ದಕ್ಷಿಣಕ್ಕೆ ಸಾಗಿಹೋಗಿ ಪ್ರೊಪದಾಸೀಯವೆಂಬ ಪಟ್ಟಣಕ್ಕೆ ಬಂದನು. ಆ ಪಟ್ಟಣದಲ್ಲಿ ಬಾದಶಹನಿರುವಾಗ ಒಂದು ಶೋಚನೀಯವಾದ ಸಂಗತಿಯು ಸಂಭವಿಸಿತು, ಶಿಕಂದರನು ಆಸಿಯಾಖಂಡದ ಸಾರ್ವಭೌಮನಾದೆದ್ದು ನಿರ್ವಿವಾದವಾದ ಸಂಗತಿಯಷ್ಟೆ ? ಅಲ್ಲಿಯ ಪ್ರಜಾಜನರನ್ನು ಒಡಂಬಡಿಸ. ತಂದಾಗಲಿ, ಪೂರ್ವದೇಶೀಯರಾದ ಪರ್ಶಿಯನ್ನರವೇಷಗಳು ಅಂದವಾಗಿಯ ಸೌಕರ್ಯವುಂಥವಾಗಿವೆಂದಾಗಲೀ ಐಶ್ವರ್ಯ ದ್ಯೋತಕವೆಂದಾಗಲಿ, ಆ ಬಾದಶಹನು ದರಾಯಸನಂಥ ವೇಷಾಲಂಕಾರಗಳನ್ನು ಧರಿಸುತ್ತಲಿದ್ದನು. ಮಾಸಿಡೋನಿಯದ ಕ್ಷುದ್ರರಾಜನಿಗಿಂತ ಅಧಿಕವಾದ ದರ್ಪವು ಸಾರ್ವಭೌಮ ನಾದ ಶಿಕಂದರನಲ್ಲಿ ವ್ಯಕ್ತವಾದದ್ದು ಆಶ್ಚರ್ಯವಲ್ಲ. ಬಾದಶಹನ ವೇಷಾ ಚರಣಗಳು , ಅವನ ಅನುಯಾಯಿಗಳಾದ ಗ್ರೀಕಜಾತಿಯ ( ಮಾಸಿಡೋನಿ, ಯಾದ ) ಅಧಿಕಾರಿಗಳಿಗೆ ಸರಿಬರಲಿಲ್ಲ. ಅವರು ಬಾದಶಹನ ಜೀವಕ್ಕೆ ಅಪಾಯವನ್ನು ಮಾಡತಕ್ಕದ್ದೆಂದು ಒಳಸಂಚು ನಡಿಸಿದರು. ಶಿಕಂದರನ. ಮುಖ್ಯ ಸೇನಾಪತಿಯಾದ ಪಾರ್ಮೆನಿಯೋನ ಮಗನಾದ ಫೀಟನೆಂಬ ಸರದಾರನೇ? ಆ ಸಂಚಿನ ಪ್ರವರ್ತಕನಾಗಿರುವದನ್ನು ಕಂಡು, ಬಾದಶಹನು,