ಪುಟ:ಬೆಳಗಿದ ದೀಪಗಳು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಸಂಪೂರ್ಣ-ಕಥೆಗಳು

ಆ ದ್ರೋಹಿಯಾದ ತರುಣನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ವಿಧಿಸಿದನು. ಫೀಲೋಟನು ಶಿಕಂದರನ ಕೈಕೆಳಗಿನ ನಾಮಾಂಕಿತನಾದ ದಳವಾಯಿಯಾಗಿದ್ದನು. ವೀರರೆಲ್ಲರ ಮೇಲೆ ಆ ಬಾದಶಹನ ಪ್ರೇಮವಿರುವಂತೆಯೇ ಫೀಲೋಟನ ಮೇಲಾದರೂ ಇತ್ತು. ವಿಶೇಷವಾದ ಪ್ರೇಮವೂ ಇತ್ತು. "ಆತಿ ಪರಿಚಯಾದವಜ್ಞಾ" ಎಂಬಂತೆ ಫೀಲೋಟನು ಶಿಕಂದರನೊಡನೆ ಹೆಮ್ಮೆಯಿಂದ ವರ್ತಿಸುತ್ತಿದ್ದನು. "ಅಹಂಕಾರಕ್ಕೆ ಉದಾಸೀನತೆಯೇ ಮಟ್ಟು ” ಎಂಬದನ್ನರಿತು ಶಿಕಂದರನು ಫೀಲೋಟನ ಅಪ್ರಾಸಂಗಿಕವಾದ ಅಸಭ್ಯ ವರ್ತನೆಗಳನ್ನು ಲಕ್ಷಿಸದಿದ್ದದ್ದಕ್ಕಾಗಿ ಆ ಉನ್ಮತ್ತನಾದ ತರುಣನು ರಾಜನಿಗೆ ದ್ರೋಹವನ್ನು ಕಲ್ಪಿಸಬೇಕೆಂದು ಮಾಡಿದ ಅಪರಾಧಕ್ಕಾಗಿ ಅವನಿಗಾದ ಶಾಸನವು ಉಚಿತವಾದದ್ದೇ ಸರಿ. ಆದರೆ ಇದರಿಂದ ಒಂದು ಅನರ್ಥವುಂಟಾಯಿತು. ಮಗನಿಗೆ ದೇಹಾಂತ ಶಾಸನವಾದ ವರ್ತಮಾನವನ್ನು ಕೇಳಿ ತಂದೆಯಾದ ಪಾರ್ಮೆನಿಯೊ ಸೇನಾಪತಿಯು ಸಿಟ್ಟಾಗಿ ಬಂಡು ಮಾಡುವನೆಂಬುದನ್ನು ತರ್ಕಿಸಿ, ಶಿಕಂದರನ ಬಳಿಯಲ್ಲಿರುವ ಅಧಿಕಾರಿಗಳೆಲ್ಲರೂ ಕೂಡಿ ಪಾರ್ವನಿಯೋನಿಗಾದರೂ ದೇಹಾಂತ ಶಾಸನವೇ ಆಗ ತಕ್ಕದ್ದೆಂದು ನಿರ್ಣಯಿಸಿದರು. ಆಗಿನ ಪರಿಸ್ಥಿತಿಯಾದರೂ ಚಮತ್ಕಾರವಾದದ್ದಾಗಿತ್ತು. ಆದಾಗಲೇ ತಾನು ಗೆದ್ದು ಕೊಂಡಿರುವ ಹೊಸ ರಾಜ್ಯದಲ್ಲಿ ತನ್ನ ಸೇನಾಪತಿಯ ಬಂಡುಗಾರನಾಗಿ ನಿಂತುಕೊಂಡರೆ ಸೆರಗಿನಲ್ಲಿ ಬೆಂಕಿಯನ್ನೇ ಕಟ್ಟಿಕೊಂಡಂತಾಗುವದೆಂದು ನೆನೆದು, ಶಿಕಂದರನಾದರೂ ಅನಿರ್ವಾಹಕ್ಕಾಗಿ ಅಧಿಕಾರಿಗಳ ನಿರ್ಣಯಕ್ಕೆ ಅನುಮೋದನವನ್ನಿತ್ತನು. ಆ ಸಮಯದಲ್ಲಿ ಪಾರ್ವನಿಯೊ ಸೇನಾಪತಿಯು ರಾಜನ ಪ್ರತಿನಿಧಿಯಾಗಿ ಟೈಗ್ರಿಸ ನದೀತೀರದಲ್ಲಿರುವ ಎಕ್ಬಟಾನಾ ಪಟ್ಟಣದಲ್ಲಿದ್ದು ಕೊಂಡು ರಾಜ್ಯದ ವವ್ಯಸ್ಥಾ ನಿರೀಕ್ಷಣವನ್ನು ಮಾಡುತ್ತಿದ್ದನು, ಆ ವೃದ್ಧನಾದ ಮಹನೀಯನನ್ನು ಶಿಕಂದರನ ಕಡೆಯಿಂದ ಬಂದ ಅಧಿಕಾರಿಯೊಬ್ಬನು ಕೆಲವೊಂದು ವಿಷದಿಂದ ತಂಬುವಿನಿಂದ ಹೊರಗೆ ಕರೆದಾಕ್ಷಣವೇ ಕೊಲೆಗಡುಕರು ಅಲ್ಲಿಯೇ ಅವನನ್ನು ಕಡಿದುಹಾಕಿದರು (ಕ್ರಿ.ಪೂ.೩೩೦ ). ನಿಘೃರ್ಣವಾದ ರಾಜಕಾರಣವೆ, ನಿನಗೆ ತಲೆಯೊಡೆದವರೂ ಒಂದೇ, ಔಷಧೋಪಚಾರಗಳನ್ನು ಮಾಡಿದವರೂ ಒಂದೇ ಅಲ್ಲವೆ ? ಫಿಲ್ಲಿಪರಾಜನನ್ನೂ ಶಿಕಂದರನನ ಏಕನಿಷ್ಠೆಯಿಂದ