ಪುಟ:ಬೆಳಗಿದ ದೀಪಗಳು.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶ

೭೯

ಸೇವಿಸಿದವನಾದ ಆ ಪಾರ್ಮೆನಿಯೋನಿಗೆ ಇಂಥ ಫಲಪ್ರಾಪ್ತಿಯೆ? ಪಾರ್ಮೆನಿಯೋನ ಕೊಲೆಯ ಕಲಂಕವು ಶಿಕಂದರ ಬಾದಶಹನ ಆತ್ಯುಜ್ವಲವಾದ ಕೀರ್ತಿಗೆ ದುರ್ನಿವಾರವಾಗಿ ತಗಲಿಕೊಂಡಿದ್ದು, ಆತನ ಇತಿಹಾಸವನ್ನು ಲೋಕವು ಮರೆಯುವವರೆಗೂ ಆ ಕಲಂಕವು ಜನರ ಕಣ್ಣುಗಳಿಗೆ ಕಟ್ಟಿದಂತಾಗಿ ಉಳಿಯುವದು.

ಅಲ್ಲಿಂದಲಾ ಬಾದಶಹನು ಸಮಗ್ರವಾದ ಅಫಗಾನಿಸ್ಥಾನದಲ್ಲಿ ಸಂಚರಿಸಿ ತಾರ್ತರೀ ದೇಶಕ್ಕೆ ಹೋದನು. ಅಲ್ಲಿಯಾದರೂ ಅವನಿಗೆ ವಿಶೇಷವಾದ ಆತಂಕವಾಗಲಿಲ್ಲ. ಹೋಗ್ಲಿಯಾನಾ ಎಂಬ ಕೋಟೆಯವರು ಮಾತ್ರ ಶಿಕಂದರನಿಗೆ ಬೇಗನೆ ಒಳಗಾಗಲಿಲ್ಲ. ಕೋಟೆಯು ಅಸಾಧ್ಯವಾದ ಪರ್ವತದ ಅತ್ಯುನ್ನತವಾದ ಶಿಖರದ ಮೇಲೆ ಕಟ್ಟಿದ್ದಾಗಿತ್ತು. ಒಳಗೆ ಯಥೇಷ್ಟವಾದ ನೀರಿನ ಸಂಚಯವೂ ವಿಪುಲವಾದ ಅನ್ನ ಸಾಮಗ್ರಿಯ ಕುಂಬಿರುವದರಿಂದ ತಮಗೆ ಶಿಕಂದರನಿಂದ ಭಯವಿಲ್ಲೆಂದು ಆ ಜನರು ದೃಢವಾಗಿ ನಂಬಿದ್ದರು, “ನನಗೆ ಶರಣು ಬನ್ನಿರಿ ಇಲ್ಲವಾದರೆ ನಿಮಗೆ ಪ್ರಾಯಶ್ಚಿತ್ತವನ್ನು ವಿಧಿಸದೆ ಬಡೆನೆ”೦ದ ಬಾದಶಹನು ಹೇಳಿ ಕಳಿಸಲಾಗಿ ಅಲ್ಲಿಯ ದುರ್ಗಾಧಿಪತಿಯು ಅಪಹಾಸಗೈದು ನಕ್ಕು “ ಶಿಕಂದರನಿಗೆ ಪಕ್ಕಗಳಿದ್ದರೆ ನಮ್ಮ ಕೋಟೆಗೆ ಹಾರಿಬರುವನಷ್ಟೆ?" ಎಂದು ಪ್ರತ್ಯುತ್ತರವನ್ನಿತ್ತನು. ಸುತ್ತಲಿನ ಪ್ರಾಂತವೆಲ್ಲ ತನ್ನದಾಗಿರಲು ಆ ಕೋಟೆಯವರ ಹೆಮ್ಮೆಯಷ್ಟ ರದೆಂದು ಶಿಕ೦ದರನು ನಂಬಿದ್ದರೂ ಆ ಅಲ್ಪ ಜನರು ತನಗೆ ಅಣಕಿಸಿದರೆಂಬ ಮುಳ್ ಬೇನೆಗಾಗಿ ಅವನು ಆ ಕೋಟೆಯನ್ನು ತೆಗೆದುಕೊಂಡೇ ಮುಂದಕ್ಕೆ ಸಾಗತಕ್ಕದ್ದೆಂಬ ಪ್ರತಿಜ್ಞೆ ಮಾಡಿದನು. ಸಂಗಡಲೇ ಅನೇಕ ಜನ ಸಾಹಸಿಗಳು ರಾತ್ರಿಯ ಕಗ್ಗತ್ತಲೆಯಲ್ಲಿ ಹೊರಟು ಆ ಪರ್ವತವನ್ನು ಸುತ್ತು ಹಾಕಿ ಕೋಡುಗಲ್ಲುಗಳ ಸಂದಿನಲ್ಲಿ ಕಬ್ಬಿಣದ ಗೂಟಗಳನ್ನು ಒಡೆದು ಹತ್ತುತ್ತಲೂ ಆಧಾರ ಕಂಡಲ್ಲಿ ನೂಲೇಣಿಗಳನ್ನು ತೊಡಕಿಸುತ್ತಲೂ ಆ ಗಿರಿಯ ಮಸ್ತಕವನ್ನೇರಿ ಕೋಟೆಯ ಗೋಡೆಗೆ ಬಂದುಬಿಟ್ಟರು, ಗಗನಚುಂಬಿತವಾದ ಆ ಗಿರಿಶೃಂಗವನ್ನೇರಿದವರಿಗೆ ಕೋಟೆಯ ಗೋಡೆಗಳ ಪಾಡೇನು? ಆ ವೀರರು ಹಾವುಗಳ೦ತೆ ಗೋಡೆಗಳನ್ನೇರಿ, ಅಲ್ಲಿ ಶಿಕಂದರಬಾದಶಹನ ಧ್ವಜಾರೋಹಣವನ್ನು ಮಾಡಿ ಹುಯ್ಲಿಟ್ಟು ಕೂಗಿದರು. ಆ ಅಮಾನುಷವಾದ ಕೃತ್ಯವನ್ನು ಕಂಡು