ಪುಟ:ಬೆಳಗಿದ ದೀಪಗಳು.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ಸಂಪೂರ್ಣ-ಕಥೆಗಳು

ಕೋಟೆಯೊಳಗಿನವರು ಬೆರಗಾಗಿ ಬೆದರಿ ಶಿಕಂದರನಿಗೆ ಶರಣಾಗತರಾದರು, ಈ ಸಮಾಚಾರವನ್ನರಿತಬಳಿಕಂತೂ ಹೇಡಿಗಳೂ ಶೂರರೂ ಕೂಡಿಯೇ ವಿಸ್ಮಯಗೊಂಡು ಶಿಕಂದನು ನಿಜವಾಗಿ ದೇವಶಾಂಶನ ಅಜೇಯನೂ ಆದ ಮಹತ್ಮನೆಂದು ಖಂಡಿತವಾಗಿ ನಂಬಿದರು. ಮುಂದೇನು? ಮತ್ತೆ ಸಿಂಗರದ ಮೆರವಣಿಗೆಯೆ?. ಹಾಗೆ ಮರೆಯುತ್ತೆ ಮೆರೆಯುತ್ತೆ ಬಾದಶಹನು ಶಕೀಲಾ (ತಕ್ಷಶಿಲಾ) ಎಂಬ ಹಿಂದೂ ರಾಜನ ರಾಜಧಾನಿಗೆ ಬಂದನು. ಆ ರಾಜನು (ಅವನ ಹೆಸರು ಕಲ್ಯಾಣನು) ಹಿಂದಸ್ಥಾನದ ಫುರುರಾಜನ (ಪೋರಸನ) ತಮ್ಮನು. ಕಲ್ಯಾಣನು (ಕಲ್ಯಾನಸನು) ಪುರುರಾಜನಿಗೆ ಅಂಜಿ, ದರಾಯಸನ ಆಶ್ರಯದಲ್ಲಿದ್ದು ಶ್ರವೃತ್ತಿಯಿಂದ ಜೀವಿಸುತ್ತಿದ್ದನು. ಶಿಕಂದರನ ಆಗಮನವು ಆ ದ್ರೋಹಿಯಾದ ಕಲ್ಯಾಣನಿಗೆ ಇಷ್ಟವೇ ಆಯಿತು. ಅವನು ಆ ಪರದೇಶಸ್ಥನಾದ ಅಭಿಯೋಗಿಯನ್ನು ಆದರದಿಂದ ಸತ್ಕರಿಸಿ ಅವನ ಕೈಯಿಂದ ತನ್ನ ಅಣ್ಣನ ಪರಾಭವವನ್ನು ಮಾಡಿಸುವಂಥ ಕುಮಾರ್ಗವನ್ನವಲಂಬಿಸಿದನು. ಶಿಕಂದರನು ಕಲ್ಯಾಣನ ಸಹಾಯದಿಂದ ಆಟಕ ನದಿಯನ್ನು ದಾಟಿಬಂದು ಪಂಜಾಬದಲ್ಲಿ ಸೇರಿದನು. ವೀರಾಗ್ರೇಸರನಾದ ಪುರುರಾಯನು ಸರಬಂದ ನಿರೋಧವನ್ನು ಮಾಡಲಿಕ್ಕೆ ದೊಡ್ಡದೊಂದು ಸೇನೆಯನ್ನು ಕಟ್ಟಿಕೊಂಡು ಝಲಮ ( ಹಿಡಿಸ್ಸಿಸ್ ) ನದಿಯ ತೀರಕ್ಕೆ ಬರುವಷ್ಟರಲ್ಲಿ, ಶಿಕಂದರನ. ಕಲ್ಯಾಣನ ಸಹಾಯದಿಂದ ಆ ನದಿಯನ್ನು ಕೂಡ ದಾಟಬಂದಿದ್ದನು. ಅಲ್ಲಿ ವೀರರಿಬ್ಬರ ನಡುವೆ ತುಮುಲವಾದ ಯುದ್ಧವು ನಡೆಯಿತು. ಹಿಂದವೀರರ ಪರಾಕ್ರಮವು ಗ್ರೀಕವೀರರ ಪರಾಕ್ರಮಕ್ಕೆ ಸರಿಯಾದದ್ದಾಗಿತ್ತು, ಜಯಾಪ ಜಯಗಳು ಹೊಯ್ದಾಡಿ ಸ್ಥಿರತೆಯನ್ನು ಕಾಣದಾದವು, ಶಿಕಂದರನು ಪುರುರಾಜನ ಪರಾಕ್ರಮವನ್ನು ಕೊಂಡಾಡಿದನು, ಪುರುರಾಜನಾದರೂ ಶಿಕಂದರನ ಸಾಹಸಕ್ಕೆ ತಲೆದೂಗಿದನು. ಹೀಗೆ ಕೆಲಕಾಲ ಸ್ಫೂರ್ತಿದಾಯಕವಾದ. ಯುದ್ಧವು ನಡೆದಿರಲು ಪುರುರಾಜನ ಸೇನೆಯಲ್ಲಿದ್ದ ಆನೆಗಳು, ಒಂದರೊಂದರ ಸೊಗಡಿನಿಂದ ಮದೋದ್ರಿಕ್ತವಾಗಿ ಮಾವುತರಿಗೆ ಆಸಕೊಳ್ಳದೆ ರಣಭೂಮಿಯಲ್ಲಿ ದಿಕ್ಕೆಟ್ಟು ಓಡಾಡಲಾರಂಭಿಸಿ, ಪುರುರಾಯನಕಾಲಾಳು ರಾವುತರನ್ನ ತುಳಿದಾಡಿದ್ದರಿಂದ ಸೇನೆಯಲ್ಲಿ ಬೆದರಿ ಕಂಡಕಂಡ ಕಡೆಗೆ ಓಡಲಾರಂಭಿಸಿತ್ತು. ಪ್ರತ್ಯಕ್ಷ ಪುರುರಾಜನ ಆನೆಯೇ ಬೆದರಿಹೋಗಿದ್ದರಿಂದ ಆ ರಾಜನು ತನ್ನ