ಪುಟ:ಬೆಳಗಿದ ದೀಪಗಳು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೮೦

ಅಂಬಾರಿಯಿಂದ ಕೆಳಕ್ಕೆ ಹಾರಿಕೊಂಡನು. ರಾಜನ ಅಂಬಾರಿಯು ಬರಿದಾಗಿರುವದನ್ನು ಕಂಡಂತೂ ಸೇನೆಯು ಎದೆಯೊಡಕೊಂಡು ರಣಾಂಗಣವನ್ನು ಬಿಟ್ಟು ಓಡಲಾರಂಭಿಸಿತು. ಆಯತ್ತವಾಗಿ ಪ್ರಾಪ್ತವಾಗಿರುವ ಇಂಥ ಸುಸಂಧಿಯನ್ನು ಶಿಕಂದರನು ಕಳಕೊಳ್ಳುವನೆ ? ಅವನ ರಾವುತರು ಪುರು ರಾಯನ ಸೇನೆಯ ಮೇಲೆ ಧಾವಿಸಿಬಂದರು; ಚುಚ್ಚು ಗೋಲಿನ ಭಟರವ್ಯೂಹವೂ ಆರ್ಭಟಿಯಿಂದ ಓಡುತ್ತ ಬಂದಿತು, ಆ ವೀರರ ಆದೇಶದ ಹೊಡೆತಕ್ಕೆ (ಮೊದಲಿಗೇ ಭಯಭೀತರಾಗಿದ್ದ ) ಪುರುರಾಜನ ಸೈನ್ಯದವರು ಮಚ್ಚು ನುಚ್ಚಾಗಿ ಹೋದರು. ಪುರುರಾಜನು ಶಿಕಂದರನ ಕೈಗೆ ಸಿಕ್ಕು ಹೋದನು. ಅಂದಿನವರೆಗೂ ಶಿಕಂದರನು ತನಗೆ ಸಮಾನನಾದ ವೀರನನ್ನು ಕಂಡಿದ್ದಿಲ್ಲ. ಪುರುರಾಜನ ಪರಾಕ್ರಮಕ್ಕೆ ಮೆಚ್ಚಿದವನಾದ ಆ ಸಾರ್ವಭೌಮನು ತನ್ನ ಎದುರಾಳಿಯನ್ನು ಕುರಿತು “ನಿಮ್ಮನ್ನು ಯಾವ ಪ್ರಕಾರದಿಂದ ಸತ್ಕರಿಸಬೇಕೆಂ"ದು ಕೇಳಲಾಗಿ "ಮಹಾರಾಜನಿಗುಚಿತವಾದ ರೀತಿಯಿಂದ" ಎಂದು ಆ ಶೂರನಾದ ನೃಪನು ಗಾಂಭೀರ್ಯದಿಂದ ಹೇಳಿದನು. ಶಿಕಂದರನು ಪುರುರಾಜನ ದರ್ಪವನ್ನೂ ಅವನ ವೀರಶ್ರೀರಂಜಿತವಾದ ಮುಖಕಾಂತಿಯನ್ನೂ ಕಂಡು ಬಹು ಪ್ರೀತನಾಗಿ ಆಕ್ಕರತೆಯಿಂದ ಅವನನ್ನು ಅಪ್ಪಿಕೊಂಡು ತನ್ನ ಅರ್ಧಾ ಸನದಲ್ಲಿ ಕುಳ್ಳಿರಿಸಿಕೊಂಡು ಸತ್ಕರಿಸಿದನು. ಪುರುರಾಜನ ರಾಜ್ಯವನ್ನು ಅವನಿಗೆ ಬಿಟ್ಟು ಕೊಟ್ಟು ಶಿಕಂದರನು ಅವನೊಡನೆ ಸ್ನೇಹವನ್ನು ಇಳಿಸಿಕೊಂಡನು.