ಪುಟ:ಬೆಳಗಿದ ದೀಪಗಳು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೮೩

ಹೊಟ್ಟೆಯ ಮಗನನ್ನು ಶತ್ರುವಿಗೆ ಬಲಿ ಕೊಟ್ಟು ಬದುಕಿಸಿದ್ದಳೊ? ಅವನು- ಈ ಚಿತೋಡಗಡ ವನ್ನು ೧೫೬೮ ನೇ ಇಸ್ವಿಯಲ್ಲಿ ಶತ್ರುಗಳ ಸ್ವಾಧೀನಮಾಡಿದ್ದನು. ಇವನಂಥ ನಿರ್ಬಲನ ಮಂದನೂ ಆದ ರಾಜನು ರಜಪುತಾನದಲ್ಲಿ ದೊರೆಯುವದು ದುರ್ಲಭವೇ ಸರಿ. ಉದೇಸಿoಗ ಹಾಗೂ ಅಕಬರ ಈ ಉಭಯತರು ಒಂದೇ ಕಾಲದಲ್ಲಿ ಜನ್ಮವನ್ನು ತಾಳಿದರು ; ಮತ್ತು ಉಭಯ ತರ ಬಾಲ್ಯವೂ ಅತ್ಯಂತ ಕಷ್ಟಮಯವಾದ ಸ್ಥಿತಿಯಲ್ಲಿ ಗತಿಸಿತು. ಆದರೆ, ಅವರಲ್ಲೊಬ್ಬನು ತನ್ನ ಪಿತ್ರಾರ್ಜಿತ ರಾಜ್ಯವನ್ನೂ ಕೀರ್ತಿಯನ್ನೂ ಕಳೆದುಕೊಂಡರೆ, ಮತ್ತೊಬ್ಬನು ಅತ್ಯಂತ ವಿಸ್ತ್ರತವಾದ ರಾಜ್ಯವನ್ನೂ ಕೀರ್ತಿಯನ್ನೂ ಸಂಪಾದಿಸಿದನು, ಚಿತೋಡಗಡವು ಶತ್ರುಗಳ ಕೈವಶವಾದಂದಿನಿಂದ ಮೇವಾಡ ದೇಶದ ರಜಪೂತರ ಶೂರತ್ವದ ಕೀರ್ತಿಯಾದರೂ ಅಳಿದು ಹೋಯಿತು. ಆದರೆ, ಅಕಬರನ ಕೈವಶವಾಗಿದ್ದ ಚಿತೋಡಗಡವನ್ನು ಪುನಃ ಸಂಪಾದಿಸಿ ಮೇವಾಡ ದೇಶದೊಳಗಿಂದ ಮೊಗಲರನ್ನು ಹೊರಗೆ ಹಾಕುವ ದೃಢನಿಶ್ಚಯವನ್ನು ಪ್ರತಾಪಸಿಂಹನು ಮಾಡಿದ್ದನು. ಆದರೆ ಪ್ರತಾಪಸಿಂಹನು ರಾಜ್ಯ ಸೂತ್ರವನ್ನು ಧರಿಸುವ ಪೂರ್ವದಲ್ಲಿಯೇ, ರಾಜಸ್ಥಾನದೊಳಗಿನ ರಾಜಮನೆತನದವರನ್ನು ಅಕಬರನು ತನ್ನ ಪರಾಕ್ರಮದಿಂದ ಬಹುತರವಾಗಿ ಪಾದಾಕಾ೦ತ ಮಾಡಿ, ಅವರನ್ನು ತನ್ನ ಉದಾರವಾದ ಸ್ವಭಾವದಿಂದಲೂ ಚಾತುರ್ಯದಿಂದಲೂ ಮೋಹಿಸಿಬಿಟ್ಟಿದ್ದನು. ಬರ ಬರುತ್ತೆ ಅಕಬರನ ಮೋಹಜಾಲಕ್ಕೆ ಒಳಗಾದ ಈ ಕ್ಷೇತ್ರನಿಷ್ಟುರರಾದ ರಜ ಪೂತರು ತಮ್ಮ ಹೆಣ್ಣು ಮಕ್ಕಳನ್ನು ಅಕಬರನಿಗೂ ಅವನ ಮಕ್ಕಳಿಗೂ ಕೊಟ್ಟು ಅವನ ಮನೆತನದ ಕೂಡ ಶರೀರ ಸಂಬಂಧವನ್ನು ಬೆಳೆಸಹತ್ತಿದರು. ಅಕಬರನ ಸಲುವಾಗಿ ಬೇಕಾದ ಪ್ರದೇಶಕ್ಕೆ ಹೋಗಿ ಶತ್ರುಗಳ ಕೂಡ ಆದಾಡಿ ಅವರನ್ನು ಅಕಬರನಿಗೆ ಅಂಕಿತರನ್ನಾಗಿ ಮಾಡಹತ್ತಿದರು. ಜಯಪೂರ, ಜೋಧಪೂರ, ಬಿಕಾನೇರ ಮುಂತಾದ ಪ್ರಾಂಶಗಳ ರಾಜರು ಅಕಬರನ ಸೇನಾನಾಯಕರೂ, ಸುಭೇದಾರರೂ, ಮನಸದಾರರ ಆದರು, ಪ್ರಥಮತಃ ಇವೆಲ್ಲ ಸಂಗತಿಗಳು ಪ್ರತಾಪಸಿಂಹನ ಲಕ್ಷಕ್ಕೆ ಬರ ಅಲ್ಲ, ಪೂರ್ವದ ಸಾಂಪ್ರದಾಯಕ್ಕನುಸಾರವಾಗಿ, ಮೇವಾಡದ ಅರಸನು ತುರ್ಕರ ಮೇಲೆ ಶಸ್ತ್ರವನ್ನೆತ್ತಿದರೆ ರಜಪೂತ ರಾಜರೆಲ್ಲರೂ ರಣಸ್ಪಂಭದ