ಜನಕರಾಜನಮುಂದೆ ಹೇಳಿದ್ದು ಹೇಗೆಂದರೆ-"ಜನಕರಾಜನೇ, ನಿನ್ನ ತಂದೆಯು ಯಜ್ಞ ಮಾಡಿದಾಗ, ನನ್ನ ಸೋದರಮಾವಂದಿರಾದ ವೈಶಂಪಾಯನರ ಸಲುವಾಗಿ ನಾನು ಹೋಗಿ ಯಜ ವನ್ನು ಸಾಂಗಮಾಡಿದೆನು. ಆಗ ದೇವಲಋಷಿಯ ಸಾಕ್ಷಿಯಿಂದ ನಾನು ಅರ್ಧ ದಕ್ಷಿಣೆಯನ್ನು ತಕ್ಕೊಳ್ಳಲು, ಆ ದಕ್ಷಿಣೆಯ ಸಲುವಾಗಿ ವೈಶಂಪಾಯನರು ನನ್ನ ಸಂಗಡ ಜಗಳವಾಡಿದರು. ಆಗ ನಿನ್ನ ತಂದೆಯೂ, ಸುಮಂತು, ಪೈಲ, ಜೈಮಿನಿ ಮೊದಲಾದ ಋಷಿಗಳೂ ನನ್ನನ್ನು ಬಹುಮಾನಪೂರ್ವಕ ಸಮಾಧಾನಪಡಿಸಿದರು. ಆಮೇಲೆ ನಾನು ಸೂರ್ಯನನ್ನು ಆರಾಧಿಸಿದೆನು. ಆತನ ಪ್ರಸಾದದಿಂದ ಪ್ರತ್ಯಕ್ಷ ಸರಸ್ವತಿಯು ನನ್ನ ಮುಖದಲ್ಲಿಪ್ರವೇಶಿಸಿದಳು. ಆಮೇಲೆ ಹದಿನೈದು ಶಾಖೆಗಳನ್ನೂ, ಶತಪಥಬ್ರಾಹ್ಮಣವನ್ನೂ, ರಹಸ್ಯಯುಕ ಸರ್ವವೇದಜಾತವನ್ನೊ ಶಿಷ್ಯರಿಗೆ ಉಪದೇಶಿಸಿ, ಆ ವಿದ್ಯೆಯು ಸುಪ್ರತಿಷ್ಠ ತವಾದಮೇಲೆ ನಾನು ಅಧ್ಯಾತ್ಮಚಿಂತನದಲ್ಲಿ ತೊಡಗಿದೆನು.”
ಇವುಗಳ ಹೊರತು ಸ್ಕಂದಪುರಾಣದ ಗೋದಾವರೀಖಂಡದ ವಿರಜಾಮಾಹಾತ್ಮ್ಯ
ದಲ್ಲಿರುವ ಕಥೆಯ ತಾತ್ಪರ್ಯವೇನಂದರೆ, -- ಯಜ್ಞವಲ್ಕ್ಯರು ತಮ್ಮಗುರುಗಳ ಬಳಿಯಲ್ಲಿ ಅಧ್ಯಯನಮಾಡುತಿರುವಾಗ, ಗುರುಗಳ ಆಶ್ರಮದ ಸಮೀಪದಲ್ಲಿ ದ್ರುಮನೆಂಬ ಅರಸನ ರಾಜಧಾನಿಯು ಇತ್ತು. ಆ ಅರಸನಿಗೆ ಪ್ರತಿನಿತ್ಯ ಫಲಮಂತ್ರಾಕ್ಷತೆಯು ಶಿಷ್ಯಮುಖಾಂ ತರವಾಗಿ ಸರತಿಯಿಂದ ಮುಟ್ಟುತ್ತಿತ್ತು. ಒಂದುದಿನ ಯಾಜ್ಞವಲ್ಕ್ಯರ ಸರತಿಯು ಬರ ಲು, ಅವರು ಫಲಮಂತ್ರಾಕ್ಷತೆಯನ್ನು ತಕ್ಕೊಂಡು ಅರಮನೆಗೆ ಹೋದರು. ಆಗ ಅರಸ ನಿದ್ದಿಲ್ಲ, ರಾಜಸ್ತ್ರೀಯರು ಕುಳಿತುಕೊಂಡಿದ್ದರು. ಅವರು ಯಾಜ್ಞವಲ್ಕ್ಯರ ಅನಾದರ ಮಾಡಿ, ಇವನಾವನೋ ಜಟಾಧಾರಿಯಾದ ನಪುಂಸಕನು ಬಂದಿರುವನೆಂದು ತಮ್ಮೊಳಗೆ ಉಪಹಾಸಮಾಡುತ್ತ, ಫಲಮಂತ್ರಾಕ್ಷತೆಯನ್ನು ತಕ್ಕೊಳ್ಳದೆ ಹಾಗೇ ಒಳಗೆ ಹೊರಟುಹೋ ದರು. ಇದನ್ನು ನೋಡಿ ಋಷಿವರ್ಯರಾದ ಯಾಜ್ಞವಲ್ಕ್ಯರು ಅಶ್ವಶಾಲೆಯೊಳಗಿನ ಖಂಬಗಳ ಮೇಲೆ --"ಫಲಿನೋಯೇ ಫಲೈರ್ಹಿನಾಃ ಪುಷ್ಪರ್ಹೀನಾಶ್ಚ ಪುಷ್ಪಣಃ ಮತ್ಪ್ರಸಾದೇನ ತೇಸರ್ವೇ ಸಫಲಾಶ್ಚ ಭವಂತ್ವಿತಿ ”|| ಎಂಬ ಆಶೀರ್ವಚನಪೂರ್ವಕ ವಾಗಿ ಮಂತ್ರಾಕ್ಷತೆಯನ್ನುಚಲ್ಲಿದರು. ಕೂಡಲೆ ಆ ಕಂಬಗಳೆಲ್ಲ ಪುಷ್ಟಫಲ ಸಂಪನ್ನ ವಾದವು. ಬಳಿಕ ಯಾಜ್ಞವಲ್ಕ್ಯರು ಗುರ್ವಾಶ್ರಮಕ್ಕೆ ತಿರುಗಿಹೋದರು. ಮುಂದೆ ಕೆಲವು ಹೊತ್ತಿನಮೇಲೆ ಅರಸನು ಬರಲು, ಈ ಅಲೌಕಿಕ ಚಮತ್ಕಾರವು ಆತನ ಕಣ್ಣಿಗೆ ಬಿದ್ದಿತು. ಆಗ ಆತನು ಇಂದು ಇಲ್ಲಿಗೆ ಯಾರು ಬಂದಿದ್ದರೆಂದು ಕೇಳಲು, ಸ್ತ್ರೀಯರು ನಡೆದ ಸಂಗತಿಯನ್ನೆಲ್ಲ ಹೇಳಿದರು . ಅದನ್ನು ಕೇಳಿ ಅರಸನು ಸಾನಂದಾಶ್ಚರ್ಯ ಗೊಂಡನು. ಕೂಡಲೆ ಆತನು ವೈಶಂಪಾಯನರಬಳಿಗೆ- “ ಇಂದು ನಮ್ಮಮನೆಗೆ ಬಂದ ಶಿಷ್ಯನನ್ನೇ ದಿನಾಲು ಕಳಿಸುತ್ತ ಹೋಗಬೇಕು, ” ಎಂದು ಹೇಳಿಕಳಿಸಿದನು. ಅರಸನ ಈ ಸಾಚನೆಯಂತೆ ನಡೆದುಕೊಳ್ಳುವದಕ್ಕಾಗಿ ಯಾಜ್ಞವಲ್ಕ್ಯರನ್ನು ಆಜ್ಞಾಪಿಸ ಬೇಕೆಂದು ವೈಶಂಪಾಯನರು ಅವರನ್ನು ಕರೆಸಿ, ಅರಸನ ಏಚಾರವನ್ನು ಅವರಿಗೆ ಹೇಳಿ "ಪ್ರತಿನಿತ್ಯ ಅರಮನೆಗೆ ನೀನೇಹೋಗಬೇಕೆಂ"ದು ಕಟ್ಟುನೊಡಿದರು. ಅದಕ್ಕೆ ಯಜ್ಞ