ಪುಟ:ಭವತೀ ಕಾತ್ಯಾಯನೀ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

07

ಭಕ್ತಿ ಪುರಸ್ಸರ ನಮಸ್ಕರಿಸಿ ವಿನಯದಿಂದ -- “ ಸದ್ಗುರುವೇ , ಬ್ರಹ್ಮಜ್ಞಾನೋಪ ದೇಶದಿಂದ ನನ್ನನ್ನು ಘೋರಸಂಸಾರಸಾಗರದಿಂದ ಮುಕ್ತಮಾಡಬೇಕು . ” ಎಂದು ಪ್ರಾರ್ಥಿಸಿದನು. ಅದಕ್ಕೆ ಯಾಜ್ಞವಲ್ಕ್ಯರು -- " ಎಲೈ ಮಹಾಮತಿಯೇ, ನೀನು ಒಂದು ಯಜ್ಞಮಾಡಿ ಅದಕ್ಕೆ ಯಾವತು ಮಹರ್ಷಿಗಳನ್ನು ಕರಿಸು. ಹೀಗೆ ಯಜ್ಞಾ ರ್ಥವಾಗಿ ಬಂದ ಋಷಿಗಳಲ್ಲಿ ನಿನ್ನ ಬುದ್ಧಿಯಿಂದ ಬ್ರಹ್ಮನಿಷ್ಠರನ್ನು ಆರಿಸಿ, ಅವರಿಗೆ ನೀನು ಶರಣು ಹೋಗು. ಅಂದರೆ ಸದ್ಗುರುವಿನಲ್ಲಿ ದೃಢಭಕ್ತಿಯು ಉತ್ಪನ್ನವಾಗಿ ನೀನು ಮುಕ್ತನಾಗುವೆ . ದೃಢಭಕ್ತಿಯ ಹೊರತು ಬ್ರಹ್ಮಜ್ಞಾನವು ಆಗಲಾರದು, ಸದ್ಗುರುವು ಪ್ರಾಪ್ತನಾದವನಿಗೇ ಬ್ರಹ್ಮತತ್ವದ ಜ್ಞಾನವಾಗುವುದೆಂದು ಶ್ರುತಿವಚ ನವಿರುತ್ತದೆ . ” ಎಂದು ಹೇಳಲು, ಯೋಗೀಶ್ವರರ ಅಪ್ಪಣೆಯಂತೆ ಜನಕಮಹಾರಾ ಜನು ಒಂದು ಶ್ರೇಷ್ಠಯಜ್ಞವನ್ನು ಆರಂಭಿಸಿದನು. ಕರೆಕಳುಹಿದಂತೆ ದೊಡ್ಡದೊಡ್ಡ ಬ್ರಹ್ಮರ್ಷಿಗಳೂ , ಅರಸರೂ, ಪಂಡಿತರೂ ಯಜ್ಞಮಂಟಪಕ್ಕೆ ಬಂದರು. ಅವರಲ್ಲಿ ಕಹೋಳ, ಆಶ್ವಲ, ಶಾಕಲ್ಯ, ವೇದವ್ಯಾಸ , ಪೈಲಾದಿ ಬ್ರಾಹ್ಮಣರೂ, ಶಿಷ್ಯರಿಂದ ಸಹಿತರಾಗಿ ಯಾಜ್ಞವಲ್ಕ್ಯರೂ , ಬಾಷ್ಕಳಾದಿ ಮಹಾ ಮಹಾಋಷಿಗಳೂ ಇದ್ದರು. ಎಲ್ಲರೂ ಕೂಡಿ ಜನಕರಾಜನ ಯಜ್ಞವನ್ನು ಸಾಂಗಗೊಳಿಸಿದರು. ಅವಭೃತಸ್ನಾನ ವಾದ ಮೇಲೆ ಬ್ರಹ್ಮಜ್ಞರ ಶೋಧಕ್ಕಾಗಿ ಜನಕಮಹಾರಾಜನು ಸುವರ್ಣಾಲಂಕಾರಗ ಳಿಂದ ಅಲಂಕೃತಗಳಾದ ಸಹಸ್ರ ಆಕಳುಗಳನ್ನು ಯಜ್ಞಮಂಟಪದಲ್ಲಿ ತಂದು ನಿಲ್ಲಿಸಿ- "ಬ್ರಾಹ್ಮಣರೇ, ಬ್ರಹ್ಮಜ್ಞಾನಿಯಾದವನು ಈ ಸಹಸ್ರಗೋಗಳ ಸ್ವೀಕಾರಮಾಡ ಬೇಕು ” ಎಂದು ವಿಜ್ಞಾಪಿಸಿದನು . ಅದನ್ನು ಕೇಳಿ ಎಲ್ಲ ಬ್ರಾಹ್ಮಣರು ವಿಚಾರ ಮಗ್ನರಾಗಿ ಸುಮ್ಮನೆ ಕುಳಿತುಕೊಂಡರು. ಒಂದು ಪ್ರಹರವಾದ ಮೇಲೆ ಪುನಃ ಜನಕ ರಾಜನು ಬ್ರಾಹ್ಮಣರಿಗೆ -- "ಬ್ರಹ್ಮಜ್ಞನು ಈ ಧೇನುಗಳನ್ನು ಸ್ವೀಕರಿಸಬೇಕು" ಎಂದು ಪ್ರಾರ್ಥಿಸಿದನು. ಆದರೂ ಒಬ್ಬ ಬ್ರಾಹ್ಮಣನೂ ಏಳದಾದನು. ಈ ಸಭೆ ಯಲ್ಲಿ ನಾನೊಬ್ಬನೇ ಬ್ರಹ್ಮಜ್ಞನೆಂದು ಯಾರು ಮುಂದೆ ಬರುವರು? ಅದನ್ನು ನೋಡಿ ಮತ್ತೆ ಜನಕರಾಜನು-- " ಈ ಕೃತಯುಗದಲ್ಲಿ ಬ್ರಹ್ಮಜ್ಯರಹಿತ ಪೃಥ್ವಿಯಾಯಿತೇ" ಎಂದು ಕೇಳಿದನು.ಆಗ ಯಾಜ್ಞವಲ್ಕ್ಯರು ಎದ್ದು ನಿಂತು ಸಾಮಶ್ರವನೆಂಬ ತಮ್ಮ ಶಿಷ್ಯ ನನ್ನು ಕರೆದು--"ಸಾಮಶ್ರವಾ, ಈ ಆಕಳುಗಳನ್ನು ಅಟ್ಟಿಕೊಂಡು ಆಶ್ರಮಕ್ಕೆ ನಡೆ' ಎಂದು ಹೇಳಿದರು. ಯಾಜ್ಞವಲ್ಕ್ಯರ ಈ ಮಾತನ್ನು ಕೇಳಿ ಯಾವತ್ತು ಬ್ರಾಹ್ಮ ಣರು ಕ್ರೋಧಸಂತಪ್ತರಾದರು. ಅವರು ಆಕಳುಗಳನ್ನು ಅಟ್ಟಿಕೊಂಡು ಹೋಗ ಬಂದ ಸಾಮಶ್ರವನನ್ನು ತಡೆದು ಆವೇಶದಿಂದ-- "ನೀನು ಈ ಆಕಳುಗಳನ್ನು ಮುಟ್ಟ ಲಾಗದು. ಯಾಜ್ಞವಲ್ಕ್ಯಾ, ಈ ದೊಡ್ಡ ದೊಡ್ಡ ಬ್ರಹ್ಮಜ್ಞ ಬ್ರಾಹ್ಮಣರು ಇರು ತ್ತಿರಲು , ನೀನೇ ಶ್ರೇಷ್ಠ ಹ್ಯಾಗೆ ? ಇಷ್ಟು ಜನಬ್ರಾಹ್ಮಣರಲ್ಲಿ ಬ್ರಹ್ಮಜ್ಞತ್ವದ ಗರ್ವವನ್ನೂ , ಆಕಳುಗಳ ವಿಷಯದ ಇಚ್ಛೆಯನ್ನೂ ಪ್ರಕಟಿಸುವ ನೀನು ಬ್ರಹ್ಮ ಜ್ಞನು ಹೇಗೆ ಇದ್ದೀ ? ನೀನು ಬ್ರಹ್ಮಜರಲ್ಲಿ ಶ್ರೇಷ್ಠನಾಗಿದ್ದರೆ ನಮ್ಮ ಪ್ರಶ್ನೆಗಳಿಗೆ