ವಿಷಯಕ್ಕೆ ಹೋಗು

ಪುಟ:ಭವತೀ ಕಾತ್ಯಾಯನೀ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
8

ಉತ್ತರಕೊಡು. ನಿನ್ನ ಉತ್ತರಗಳು ಯೋಗ್ಯವಾಗಿ ತೋರಿದರೆ, ನಾವು ಗೆಲ್ಲಲ್ಪ ಟ್ಟವರಾಗುವೆವು , ಆಮೇಲೆ ಈ ಆಕಳುಗಳನ್ನು ನಿನ್ನ ಆಶ್ರಮಕ್ಕೆ ಅಟ್ಟಿಕೊಂಡು ಹೋಗುವೆಯಂತೆ ; ಅಲ್ಲಿಯವರೆಗೆ ಈ ಆಕಳುಗಳನ್ನು ಮುಟ್ಟಲಾಗದು,” ಎಂದು ನಿರ್ಬಂಧಿಸಿದರು.

ಬ್ರಾಹ್ಮಣರ ಈ ನಿರ್ಬಂಧವನ್ನು ಕೇಳಿ ಯಾಜ್ಞವಲ್ಕ್ಯರು ಆಸನದಿಂದ ಎದ್ದು

ನಿಂತು ಬ್ರಾಹ್ಮಣರನ್ನು ನಮಸ್ಕರಿಸಿ ಕೈಜೋಡಿಸಿಕೊಂಡು -- "ನಾನು ಬ್ರಹ್ಮಜ್ಞ ನಲ್ಲ , ಬ್ರಹ್ಮಜ್ಞರಾದ ಬ್ರಾಹ್ಮಣಶ್ರೇಷ್ಠರೇ, ನಿಮ್ಮನ್ನು ನಮಸ್ಕರಿಸುವೆನು. ನಾನು ಗೋ ಕಾಮುಕನಾಗಿರುವದು ನಿಜವು; ಆದರೆ ತಮ್ಮ ಇಚ್ಚೆಯಿದ್ದರೆ ಪ್ರಶ್ನೆ ಮಾಡ ಬಹುದು . ಯಥಾವತಿ ಅವುಗಳಿಗೆ ಉತ್ತರಕೊಡುವೆನು. ಇದು ದೊಡ್ಡಜನರೊಳ ಗಿನ ವಾದವಿರುವದರಿಂದ , ದುರಾಗ್ರಹಕ್ಕೆ ಆಸ್ಪದವಿರಬಾರದು , ಶ್ರುತಿಮಾರ್ಗವ ನ್ನನುಸರಿಸಿ ವಿಚಾರವಾಗಬೇಕು . ಕುತರ್ಕಗಳು ಹೊರಡಲಾಗದು. ಇಂಥ ಬ್ರಹ್ಮ ವಾದದ ಕಾಲದಲ್ಲಿ ಸ್ವಾಭಿಮಾನವು ಮಹಾಪುರುಷರ ವೈರಿಯಾಗಿರುವದು; ಆದ್ದರಿಂದ ಅದನ್ನು ಬಿಟ್ಟುಕೊಟ್ಟು ಸುಖಸಮಾಧಾನದಿಂದ ವಾದವಿವಾದವನ್ನು ಮಾಡಬೇಕು. ಈ ಮಂತ್ರಿತವಾದ ಕುಶಗ್ರಂಥಿಯು ಈ ವಾದದಲ್ಲಿ ಅನ್ಯಾಯಮಾಡುವವರ ಶಾಸನ ಕ್ಕಾಗಿ ವಜ್ರದಂತೆ ಇರುವದು. ಇದನ್ನರಿತು ವಾದವಿವಾದವನ್ನು ಅವಶ್ಯವಾಗಿ ಮಾಡತಕ್ಕದ್ದು.

ಹೀಗೆ ನುಡಿದು ಯಾಜ್ಞವಲ್ಕ್ಯರು ಕುಳಿತುಕೊಳ್ಳಲು, ಅವರ ಮೇಲೆ ಪ್ರಶ್ನೆಗಳ

ಮಳೆಗರೆಯಹತ್ತಿತು. ಆ ಮಹಾ ಸಭೆಯಲ್ಲಿ ಪ್ರಶ್ನೆ ಮಾಡದವರು ಉಳಿಯಲೇ ಇಲ್ಲವೆಂ ದು ಹೇಳಬಹುದು. ಜನಕರಾಜನ ಆ ಯಜ್ಞದಲ್ಲಿ ಹೋತೃಭಾಗವನ್ನು ಸಾಗಿಸುವ ಆಶ್ವಲನೆಂಬ ಋಷಿಯೂ, ಜರತ್ಕಾರುವೂ, ಬಾಹ್ಯಾನನ ಪುತ್ರನಾದ ಭುಜ್ಯುಋಷಿಯೂ, ಚಕ್ರಾಯಣ ಪುತ್ರನಾದ ಉಪಸ್ತಾ ಎಂಬ ಋಷಿಯೂ, ಕೌಷೀತಕನ ಮಗನಾದ ಕಹೋ ಲಋಷಿಯೂ ಆಧ್ಯಾತ್ಮಜ್ಞಾನದ ಸಂಬಂಧದಿಂದ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞ ವಲ್ಕ್ಯರ ಸಮರ್ಪಕ ಉತ್ತರದಿಂದ ಸಮಾಧಾನಪಟ್ಟು , ಯಾಜ್ಞವಲ್ಕ್ಯರು ಬ್ರಹ್ಮಜ್ಞ ರೆಂದು ಒಡಂಬಟ್ಟು ಸುಮ್ಮನೆ ಕುಳಿತುಕೊಂಡರು. ಈ ವಾದದಲ್ಲಿ ಜರತ್ಕಾರುವಿಗೆ ಆತ್ಮಜ್ಞಾನವಾಯಿತು. ಆ ಮೇಲೆ ವಾಚಕ್ರವಿಯ ಮಗಳಾದ ಗಾರ್ಗಿಯೆಂಬ ದಿಗಂಬರ ವೃತ್ತಿಯ ಸ್ತ್ರೀಯು ಯಾಜ್ಞವಲ್ಕ್ಯರಿಗೆ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞವಲ್ಕ್ಯರ ಬ್ರಹ್ಮಜ್ಞತ್ವವನ್ನು ಒಡಂಬಟ್ಟು, ಇವರು ಬ್ರಹ್ಮವಿದ್ವರಿಷ್ಟರೆಂದು ಉಳಿದ ಋಷಿಗಳಿಗೆ ಹೇಳಿದಳು. ಆ ಮೇಲೆ ಅರುಣಪುತ್ರನಾದ ಉದ್ದಾಲಕನು ಮುಂದಕ್ಕೆ ಬಂದು --“ಯಾ ಜ್ಞವಲ್ಕ್ಯಾ, ಅಯೋಗ್ಯ ಪ್ರಶ್ನೆ ಮಾಡಿದರೆ ಶಿರಚ್ಛೇದವಾದೀತೆಂದು ದರ್ಭಗ್ರಂಥಿಯ ಭಯ ವನ್ನು ತೋರಿಸಿ, ಜನರನ್ನು ನಿಷ್ಕಾರಣ ಬೆದರಿಸಬೇಡ. ನೀನು ಗೋಕಾಮುಕನಾಗಿ ರುವದರಿಂದ ನಿನ್ನ ಶಿರಚ್ಛೇದವು ಯಾಕಾಗಬಾರದು ಹೇಳು. ಬ್ರಹ್ಮಜರು ನಿರಿಚ್ಛರಾ ಗಿರುವರು." ಎಂದು ಹೇಳಿ, ಹಲವು ಪ್ರಶ್ನೆಗಳನ್ನು ಮಾಡಿದನು. ಅವುಗಳಿಗೆಲ್ಲ