ಪುಟ:ಭವತೀ ಕಾತ್ಯಾಯನೀ.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


22

ನಲ್ಲಿ ಕುರಿಗಳು ಬಹಳ ಇದ್ದವು , ಆ ಪರದೇಶಿಮರಿಯನ್ನು ನೋಡಿ ಅವಕ್ಕೆ ದಯವು ಉತ್ಪನ್ನವಾಯಿತು ; ಆದ್ದರಿಂದ ಅನಾಥವಾದ ಆ ಮರಿಯನ್ನು ಸಂರಕ್ಷಿಸುವ ಇಚ್ಛಯು ಅವಕ್ಕೆ ಆಯಿತು .

ಕಾತ್ಯಾಯನಿ (ನಡುವೇ ಬಾಯಿಹಾಕಿ)- ಪಾಪ! ಇಚ್ಛೆಯಾಗದೇನು ಮಾಡೀ

ತು. ಮಕ್ಕಳ ತಾಯಂದಿರ ಅನುಭವವು ಆ ಕುರಿಗಳಿಗಿದ್ದಬಳಿಕ ಪರದೇಶಿಕೂಸಿನಸಂರ ಕ್ಷಣ ಮಾಡದೆ ಅವು ಯಾಕೆ ಬಿಟ್ಟಾವು ? ಹು ಮುಂದೆ ಹೇಳು.

ಮೈತ್ರೇಯಿ-- ಬಳಿಕ ಕುರಿಗಳು ಸಿಂಹದ ಆ ಗಂಡುಮರಿಯನ್ನು ತಕ್ಕೊಂಡು

ಹೋಗಿ ಅದರ ಸಂಗೋಪನ ಮಾಡತೊಡಗಿದವು . ಆಡು-ಕುರಿಗಳು ತಿನ್ನುವ ಪದಾ ರ್ಥಗಳನ್ನೇ ಆ ಸಿಂಹದ ಮರಿಯು ತಿನ್ನತೊಡಗಿತು , ಕುರಿಗಳು ಕುಡಿಯುವ ನೀರನ್ನೇ ಅದು ಕುಡಿಯಹತ್ತಿತು. ಅದು ಯಾವಾಗಲೂ ಕುರಿಗಳ ಸಹವಾಸದಲ್ಲಿದ್ದು, ಅವುಗ ಳೊಡನೆ "ಬ್ಯಾ ಬ್ಯಾ” ಎಂದು ಕೂಗುತ್ತ ಓಡಾಡುತ್ತಿತ್ತು. ಹೀಗೆ ಆಕುರಿಗಳ ಸಹ ವಾಸದಿಂದ ಸಿಂಹದ ಮರಿಗೆ -- " ನಾನು ಕುರಿಯೇ ಇರುತ್ತೇನೆಂಬ ಭ್ರಾಂತಿಯು ಉತ್ಪನ್ನವಾಯಿತು. ಅದಕ್ಕೆ ತನ್ನ ನಿಜವಾದ ಸ್ವರೂಪದ ವಿಸ್ಮೃತಿಯು ಪೂರ್ಣ ವಾಗಿ ಆಗಿಹೋಯಿತು. ಸಿಂಹಾದಿ ಮೃಗಗಳನ್ನು ನೋಡಿದ ಕೂಡಲೆ ಬಾಯಲ್ಲಿ ಎಸ ರುಇಲ್ಲದಂತೆ ಕುರಿಗಳು ಓಡುವಾಗ, ಆ ಸಿಂಹದ ಮರಿಯು ತಾನೂ ಅವುಗಳ ಸಂಗಡ ಓಡಿಹೋಗುತ್ತಿತ್ತು . ಶತ್ರುವಿನೊಡನೆ ಕಾದಿ ತನ್ನ ಪ್ರತಾಪವನ್ನು ತೋರಿಸುವ ಅದರ ಜನ್ಮಸ್ವಭಾವದ ವಿಸ್ಮೃತಿಯು ಅದಕ್ಕೆ ಪೂರ್ಣವಾಗಿ ಆಗಿಹೋಯಿತು . ಒಟ್ಟಿಗೆ ಹೇಳತಕ್ಕದ್ದೇನಂದರೆ, ಅದರ ಆತ್ಮಸ್ವರೂಪದ ಸುತ್ತಲು ಅಜ್ಞಾನದ ಮುತ್ತಿಗೆಯು ಬಿದ್ದು , ನಾನು ಎಲ್ಲ ಬಗೆಯಿಂದಲೂ ಕುರಿಯೇ ಇರುತ್ತೇನೆಂದು ಅದು ತಿಳಿದುಕೊಂಡಿತು.

ಕಾತ್ಯಾಯನಿ (ನಡುವೆ ಆತುರದಿಂದ) -- ಛೀ ಛೀ! ಮೈತ್ರೇಯಿಾ , ವನರಾಜ

ನೆನಿಸುವ ಸಿಂಹವು ಕ್ಷುದ್ರಪ್ರಾಣಿಯಾದ ಕುರಿಯಾಗಿ ಹೋಯಿತಲ್ಲ! ಪಾಪ, ಅದರ ತಾಯಿಯಾದರೂ ಯಾಕೆ ಸತ್ತಿದ್ದೀತೇ ? ಆ ಮರಿಯು ಬಲು ದೈವಗೇಡಿಯು ! ಸಖೀ , ಕಡೆಗೂ ಆ ಸಿಂಹದ ಮರಿಗೆ ತಾನು ಸಿಂಹನೆಂಬ ಅರಿವು ಆಗಲೇ ಇಲ್ಲವೇನು ? ಅದು ಕುರಿಯಾಗಿ ಹೋಯಿತೆ ?

ಮೈತ್ರೇಯಿ-- ಅಕ್ಕಾ, ಸ್ವಲ್ಪ ಸಮಾಧಾನತಾಳು. ಎಷ್ಟಾದರೂ ಅದು

ಸಿಂಹವಲ್ಲವೆ ? ಅದು ಕುರಿಯು ಹ್ಯಾಗಾದೀತು ? ನನ್ನ ಕಥೆಯನ್ನು ಪೂರ್ಣವಾಗಿ ಕೇಳು, ಅಂದರೆ ಎಲ್ಲಾ ನಿನಗೆ ತಿಳಿಯುವದು . ಒಂದು ದಿನ ಆ ಕುರಿಯ ಹಿಂಡು ಆ ಸಿಂಹದ ಮರಿಯೊಡನೆ ಒಂದು ಹಳ್ಳದಲ್ಲಿ ನೀರು ಕುಡಿಯುತಿ ತ್ತು. ಅಷ್ಟರಲ್ಲಿ ವಿಶಾಲ ದೇಹಿಯಾದ ಒಂದು ಸಿಂಹವೂ ನೀರು ಕುಡಿಯುವದಕ್ಕಾಗಿ ಅದೇ ಹಳ್ಳಕ್ಕೆ ಬಂದಿತು . ಸಿಂಹವು ನೀರು ಕುಡಿಯುತ್ತಿದ್ದಲ್ಲಿಂದ ಅದಕ್ಕೆ ಕುರಿಗಳ ಹಿಂಡು ಕಾಣುತಿ ತ್ತು; ಕುರಿಗ ಳಿಗೆ ಮಾತ್ರ ಸಿ೦ಹವು ಕಾಣುತ್ತಿದ್ದಿಲ್ಲ. ಕುರಿಗಳ ಹಿಂಡಿನಲ್ಲಿ ಸಿಂಹದ ಮರಿಯು ನೀರು ಕುಡಿಯುತ್ತಿರುವದನ್ನು ನೋಡಿ ಆ ಸಿಂಹಕ್ಕೆ ಬಹಳ ಆಶ್ಚರ್ಯವಾಯಿತು. ಅದು